ಮೋಡ ಲಭ್ಯತೆ ಕೊರತೆ; ಮೊದಲ ದಿನ ನಡೆಯದ ವರ್ಷಧಾರೆ ಬಿತ್ತನೆ
•ಉಕ ವ್ಯಾಪ್ತಿಯಲ್ಲಿ ಕಾರ್ಯಾಚರಣೆ•ನಿರ್ದಿಷ್ಟ ದಿನ ನಿಗದಿ ಇಲ್ಲ
Team Udayavani, Aug 2, 2019, 1:13 PM IST
ಹುಬ್ಬಳ್ಳಿ: ಮೋಡ ಬಿತ್ತನೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ದೀಪಾ ಚೋಳನ್.
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯಾಗಿರುವ ಭಾಗದಲ್ಲಿ ಮೋಡ ಬಿತ್ತನೆ ಮಾಡಿ ಮಳೆ ಸುರಿಸುವ ರಾಜ್ಯ ಸರ್ಕಾರದ ವರ್ಷಧಾರೆ ಯೋಜನೆಗೆ ಗುರುವಾರ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಮೋಡಗಳ ಲಭ್ಯತೆ ಕೊರತೆ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಮಾಡಲಿಲ್ಲ.
ಬೆಳಗಾವಿ ವಿಭಾಗದ ಪ್ರಭಾರ ಪ್ರಾದೇಶಿಕ ಆಯುಕ್ತರಾದ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮೋಡ ಬಿತ್ತನೆಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು. ಕಾರ್ಯಾಚರಣೆಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿಯನ್ನು ಸಿಬ್ಬಂದಿಯಿಂದ ಪಡೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ದೀಪಾ ಚೋಳನ್, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಯೋಜನೆ ಕೈಗೊಳ್ಳಲಾಗಿದ್ದು, ಬೆಂಗಳೂರಿನ ಜಿಕೆವಿಕೆ ಹಾಗೂ ಗದಗದಲ್ಲಿರುವ ರಡಾರ್ ಕೇಂದ್ರದ ಮಾಹಿತಿ ಆಧರಿಸಿ ಮೋಡ ಬಿತ್ತನೆ ಕಾರ್ಯ ಮಾಡಲಾಗುತ್ತದೆ. ಗದಗಿನಲ್ಲಿರುವ ರಡಾರ್ ಉತ್ತರ ಕರ್ನಾಟಕದ ಕೆಲ ಭಾಗವನ್ನು ಕೇಂದ್ರೀಕರಿಸಿಕೊಂಡು ಕಾರ್ಯ ನಿರ್ವಹಿಸುತ್ತದೆ. ಈ ಭಾಗದ ಯಾವ ಪ್ರದೇಶದಲ್ಲಿ ಮೋಡಗಳ ಲಭ್ಯತೆ ಇದೆ ಎಂಬುದನ್ನು ಗುರುತಿಸಿ ಮೋಡ ಬಿತ್ತನೆಗೆ ಸೂಚನೆ ನೀಡುತ್ತದೆ. ಇದರ ಆಧಾರದ ಮೇಲೆ ವಿಮಾನ ಮೋಡ ಬಿತ್ತನೆ ಕಾರ್ಯ ಮಾಡುತ್ತದೆ ಎಂದರು.
ಒಂದು ತಿಂಗಳು ತಡವಾಗಿ ಮಳೆ ಬಂದಿದೆ. ಧಾರವಾಡ ಜಿಲ್ಲೆಯಲ್ಲಿ ಮಾತ್ರ ಹೆಚ್ಚು ಮಳೆಯಾಗಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಜಿಲ್ಲೆಯ ಕುಂದಗೋಳ ಹಾಗೂ ನವಲಗುಂದದಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿದೆ. ವಾರ್ಷಿಕ ಸರಾಸರಿ ನೋಡಿದಾಗ ಶೇ.20 ಮಳೆ ಕಡಿಮೆಯಾಗಿದೆ. ಇದೀಗ ಆಗಿರುವ ಮಳೆ ಕೃಷಿಗೆ ಪೂರಕವಾಗಿದೆ. ಆದರೆ ಕುಡಿಯುವ ನೀರು ಹಾಗೂ ಬೇಸಿಗೆಯಲ್ಲಿನ ಸಮಸ್ಯೆ ನೀಗಿಸುವಷ್ಟು ಮಳೆಯಾಗಿಲ್ಲ. ಬಹುತೇಕ ಕೆರೆ ಇನ್ನೂ ತುಂಬಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಗೆ ಮುಂದಾಗಿದ್ದು, ಎಷ್ಟು ದಿನಗಳ ಕಾಲ ಮೋಡ ಬಿತ್ತನೆ ನಡೆಯುತ್ತಿದೆ ಎನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಗದುಗಿನಲ್ಲಿರುವ ರಡಾರ್ ಹಾಗೂ ಬಿತ್ತನೆಗೆ ಪೂರಕವಾದ ಮೋಡಗಳ ಲಭ್ಯತೆ ಮೇಲೆ ಕಾರ್ಯ ನಡೆಯಲಿದೆ ಎಂದರು.
ವಿಮಾನದ ಪೈಲಟ್ ಜೇಜ್ ಬೇನ್ ಮಾತನಾಡಿ, ಮೋಡ ಬಿತ್ತನೆ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಮೋಡಕಟ್ಟದ ವಾತಾವರಣ ನೋಡಿಕೊಂಡು ಮಳೆ ಸುರಿಸಬಲ್ಲ ಮೋಡಗಳನ್ನು ಗುರುತಿಸಿ ಸಿಲ್ವರ್ ಐಯೋಡೇಡ್ ಭರಿತ ಫ್ಲೈರ್ಯಸ್‌ಗಳನ್ನು ಉರಿಸಲಾಗುತ್ತದೆ. ಇದರಿಂದ ಮುಂದೆ ಹೋಗುವ ಮೋಡಗಳನ್ನು ತಡೆದು ನಮ್ಮ ನಿರೀಕ್ಷಿತ ನಿರ್ದಿಷ್ಟ ಪ್ರದೇಶದ ಆಸುಪಾಸಿನಲ್ಲಿ ಮಳೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಬಿತ್ತನೆ ಮಾಡಿದ ಇಷ್ಟೇ ಸಮಯಕ್ಕೆ ಮಳೆಯಾಗುತ್ತದೆ ಎಂಬುವುದನ್ನು ಯಾವುದೇ ಕಾರಣಕ್ಕೂ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದರು.
ಪ್ರೊಬೆಷನರಿ ಐಎಎಸ್ ಅಧಿಕಾರಿ ಆಕೃತಿ ಬನ್ಸಾಲ್, ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಅನುಜ್ ಠಾಕ್ರೆ, ಹುಬ್ಬಳ್ಳಿ ಗ್ರಾಮೀಣ ಅಪರ ತಹಶೀಲ್ದಾರ್ ಪ್ರಕಾಶ ನಾಸಿ, ಕ್ಯಾತಿ ಕ್ಲೈಮೇಟ್ ಮಾಡಿಫಿಕೇಷನ್ ಸಂಸ್ಥೆಯ ಅತೀಶ್ ಓದುಗೌಡರ ಇದ್ದರು.
ಹಾರಲಿಲ್ಲ ವಿಮಾನ: ಜು.30ರಂದು ಮೋಡ ಬಿತ್ತನೆ ವಿಮಾನ ಇಲ್ಲಿನ ಏರ್‌ಪೋರ್ಟ್ ಗೆ ಆಗಮಿಸಿದೆ. ಜು.31ರಂದು ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಮೋಡ ಬಿತ್ತನೆ ಮಾಡಿದ್ದು, ಕೆಲವೆಡೆ ಮಳೆಯಾಗಿದೆ ಎಂದು ಹೇಳಲಾಗಿದೆ. ಆದರೆ ಸಂಕೇತಿಕವಾಗಿ ಚಾಲನೆ ನೀಡಿದ ಗುರುವಾರದಂದು ಮೋಡ ಬಿತ್ತನೆಗೆ ಪೂರಕವಾದ ಮೋಡಗಳ ಲಭ್ಯತೆಯಿರದ ಕಾರಣ ಗದಗ ರಡಾರ್‌ನಿಂದ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಮಾಡಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.