ಸೂಪರ್ ಮಾರ್ಕೆಟ್‌ಗಿಲ್ಲ ಸ್ಮಾರ್ಟ್ ಭಾಗ್ಯ
|ಪ್ರಸ್ತಾವನೆಗಳಿಗೆ ಸಿಗದ ಮನ್ನಣೆ |ಕೊಳಚೆ ಗೂಡಾದ ಹಾಲಗೇರಿ|ಹುಬ್ಬಳ್ಳಿಗಿರುವ ಪ್ರೀತಿ ಧಾರವಾಡಕ್ಕಿಲ್ಲ
Team Udayavani, Dec 4, 2020, 12:51 PM IST
ಧಾರವಾಡ: ಹುಬ್ಬಳ್ಳಿಯ ಸೂಪರ್ ಮಾರ್ಕೆಟ್ (ಜನತಾ ಬಜಾರ್) ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ಅತ್ಯಾಧುನಿಕ ಮಾರುಕಟ್ಟೆಯಾಗಿ ಅಭಿವೃದ್ಧಿಯತ್ತ ಸಾಗಿದರೆ ಧಾರವಾಡದ ಸೂಪರ್ ಮಾರುಕಟ್ಟೆ ಮಾತ್ರ ಪಾಪರ್ ಆಗಿಯೇ ಉಳಿಯುವಂತಾಗಿದೆ.
ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಇಲ್ಲಿನ ಸೂಪರ್ ಮಾರುಕಟ್ಟೆ ಅಭಿವೃದ್ಧಿಗಾಗಿ ಅದೆಷ್ಟೋ ಸೂಪರ್ ಯೋಜನೆಗಳು ಸಿದ್ಧಗೊಂಡಿದ್ದವು. ಆದರೆ ಅವೆಲ್ಲವೂ ಪಾಪರ್ ಆಗಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಆಗುವ ನಿರೀಕ್ಷೆಯೂ ಹುಸಿಯಾಗಿದೆ. ಅತಿಕ್ರಮಣ ಆಗುತ್ತಲೇ ಸಾಗಿರುವ ಈ ಮಾರುಕಟ್ಟೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳುಹಾಗೂ ಪಾಲಿಕೆ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ. ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಈವರೆಗೂ ಅಭಿವೃದ್ಧಿ ಕಾಣದಂತಾಗಿದೆ.
ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ : ಚಂದ್ರಕಾಂತ ಬೆಲ್ಲದ ಶಾಸಕರಾಗಿದ್ದ ಕಾಲದಿಂದ ಹಿಡಿದು ಅವರ ಮಗ ಅರವಿಂದ ಬೆಲ್ಲದ 2ನೇ ಸಲ ಶಾಸಕರಾಗುವ ವರೆಗೂ ಮಾರುಕಟ್ಟೆ ಅಭಿವೃದ್ಧಿ ಮಾತು ಕೇಳಿಬರುತ್ತಿದೆಯೇ ಹೊರತುಅಭಿವೃದ್ಧಿ ಕಾಣದಂತಾಗಿದೆ. ಪೂರ್ಣಾ ಪಾಟೀಲ, ಶಿವು ಹಿರೇಮಠ ಸೇರಿದಂತೆ ಧಾರವಾಡದವರೇ ಮೇಯರ್ ಆಗಿ ಹೋದರೂ ಮಾರುಕಟ್ಟೆ ಸುಧಾರಣೆ ಕಂಡಿಲ್ಲ. ನಗರಾಭಿವೃದ್ಧಿ ಸಚಿವರು ಮಾರುಕಟ್ಟೆಗೆ ಭೇಟಿ ನೀಡಿದ್ದರೂ ಯೋಜನೆಗಳಿಗೆ ಅನುಮೋದನೆನೀಡಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿಸಚಿವ ಜಗದೀಶ ಶೆಟ್ಟರ ಸಾಕಷ್ಟು ಸಲ ಭೇಟಿ ನೀಡಿದ್ದು, ಇವರಾದರೂ ಆಸಕ್ತಿ ತೋರುವರೇ ನೋಡಬೇಕಿದೆ.
ಸಿಗದ ಮನ್ನಣೆ : ಧಾರವಾಡದವರೇ ಆಗಿದ್ದ ಐ.ಎಂ. ಜವಳಿ ಮೇಯರ್ ಆಗಿದ್ದ ಸಮಯಲ್ಲಿ ಮಾರುಕಟ್ಟೆ ಅಭಿವೃದ್ಧಿಗೆ ಯತ್ನಿಸಿದ್ದರು. 1995ರಲ್ಲಿ 10 ಕೋಟಿ ಮೀಸಲಿಟ್ಟು, ಪಾಲಿಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ನಂತರ ಯೋಜನೆ ಜಾರಿಯೇ ಆಗಲಿಲ್ಲ. ಸರ್ಕಾರಿ-ಖಾಸಗಿ ಸಹಭಾಗಿತ್ವದಡಿಸೂಪರ್ ಮಾರುಕಟ್ಟೆ ನಿರ್ಮಿಸಲು ಯೋಚಿಸಲಾಗಿತ್ತು. ಇದಕ್ಕೂ ಸಂಬಂಧಪಟ್ಟವರು ಆಸಕ್ತಿ ತೋರಲಿಲ್ಲ. ಏಳು ಅಂತಸ್ತಿನ ಮಾರುಕಟ್ಟೆ ಕಟ್ಟಡ ನಿರ್ಮಿಸಲು 2017ರಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಯೋಜನೆ ಗಾತ್ರ 146 ಕೋಟಿಯಾದರೆ
ನಿರ್ಮಾಣ ವೆಚ್ಚ 259 ಕೋಟಿಗೆ ಏರಿಕೆಯಾಗಿತ್ತು. ಈ ಯೋಜನೆಗೂ ಅನುಮೋದನೆ ದೊರೆಯದೇ ಸರ್ಕಾರದ ಮಟ್ಟದಲ್ಲಿಯೇ ಉಳಿದುಬಿಟ್ಟಿತು. ಹು-ಧಾ ಸ್ಮಾಟ್ ಸಿಟಿ ಯೋಜನೆಯಡಿ 275 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೂ ಮನ್ನಣೆ ಸಿಗಲಿಲ್ಲ.
ಗಟಾರ-ಒಳರಸ್ತೆ ನಿರ್ಮಾಣವೂ ವಿಳಂಬ : 98 ಲಕ್ಷ ಹಾಗೂ 31 ಲಕ್ಷ ರೂ.ಗಳ ಎರಡು ಪ್ರತ್ಯೇಕ ಕಾಮಗಾರಿಗಳಡಿ ಮಾರುಕಟ್ಟೆಯ ನಾಲ್ಕು ಒಳರಸ್ತೆಗಳ ಸುಧಾರಣೆ, ಗಟಾರ ನಿರ್ಮಾಣಕ್ಕೆ ವರ್ಷದ ಆರಂಭದಲ್ಲೇ ಶಾಸಕ ಅರವಿಂದ ಬೆಲ್ಲದ ಚಾಲನೆ ನೀಡಿದ್ದರು. ಮಾರ್ಚ್‌ನಲ್ಲಿ ಆರಂಭಗೊಂಡ ಕಾಮಗಾರಿಗೆ ಲಾಕ್‌ಡೌನ್‌ದಿಂದ ಹೊಡೆತ ನೀಡಿದ್ದು, ಒಂದು ಒಳರಸ್ತೆಯ ಗಟಾರ ನಿರ್ಮಾಣ ಕಾರ್ಯ ಸಾಗಿದೆ. ಇನ್ನುಳಿದ ಮೂರು ಒಳರಸ್ತೆಗಳ ಕಾಮಗಾರಿಗೆ ಚಾಲನೆ ಸಿಗಬೇಕಿದೆ. ಕಾಮಗಾರಿಗಳಿಗೆ ವೇಗ ನೀಡಬೇಕು, ಎಲ್ಲ ಒಳರಸ್ತೆಗಳ ಸುಧಾರಣೆ, ಶೌಚಾಲಯ-ಪಾರ್ಕಿಂಗ್ ಕೊರತೆ ನೀಗಿಸಿ ಮೂಲಸೌಕರ್ಯ ಒದಗಿಸಬೇಕೆಂಬುದು ವ್ಯಾಪಾರಸ್ಥರ ಆಗ್ರಹ.
ಮಾರುಕಟ್ಟೆ ಇತಿಹಾಸ : ಇಡೀ ನಗರಕ್ಕೆ ನೀರು ಪೂರೈಸುತ್ತಿದ್ದ ಹಾಲಗೇರಿ ಕೆರೆ ಕಾಲಕ್ರಮೇಣ ಬರಿದಾಗಿ ಅದೇ ಜಾಗದಲ್ಲಿಸೂಪರ್ ಮಾರುಕಟ್ಟೆ ನೆಲೆಕಂಡಿದೆ. ಧಾರವಾಡದ ಮೂಲ ಮಾರುಕಟ್ಟೆ ರವಿವಾರ ಪೇಟೆಯಲ್ಲಿತ್ತು. ಕೆಸರುಗುಂಡಿಯಾಗಿದ್ದಹಾಲಗೇರಿಯಲ್ಲಿ ಮಾರುಕಟ್ಟೆ ನಿರ್ಮಿಸಿ, ಮಾರುಕಟ್ಟೆ ಸ್ಥಳಾಂತರಿಸಲಾಯಿತು. ಅಂದಾಜು 5 ಎಕರೆ ವಿಸ್ತೀರ್ಣದಲ್ಲಿರುವಮಾರುಕಟ್ಟೆ ಮೇಲ್ದರ್ಜೆಗೇರಿಸುವ ಪ್ರಸ್ತಾವಗಳು 10 ಕೋಟಿಯಿಂದ ಆರಂಭವಾಗಿ 200-300 ಕೋಟಿಗೆ ಏರಿಕೆಯಾಗಿದ್ದರೂ ನನೆಗುದಿಗೆ ಬಿದ್ದಿÊ
ಸೂಪರ್ ಮಾರುಕಟ್ಟೆ ನಿಜಕ್ಕೂ ಸೂಪರ್ ಆಗಲು ಸಿದ್ಧಪಡಿಸಿರುವ ಪ್ರಸ್ತಾವನೆಗಳಿಗೆ ಮನ್ನಣೆ ಸಿಗಬೇಕು. ಇಡೀ ಮಾರುಕಟ್ಟೆ ಸುಸಜ್ಜಿತ, ಅತ್ಯಾಧುನಿಕಗೊಳಿಸುವ ಯೋಜನೆಗಳನ್ನು ಅನುಷ್ಠಾನ ಮಾಡಬೇಕು. –ರವೀಂದ್ರ ಆಕಳವಾಡಿ, ಕಾರ್ಯದರ್ಶಿ, ಧಾರವಾಡ ವಾಣಿಜ್ಯೋದ್ಯಮ ಸಂಘ
ಸೂಪರ್ ಮಾರುಕಟ್ಟೆಯಲ್ಲಿ ಶಾಸಕ ಅರವಿಂದ ಬೆಲ್ಲದ ಅವರ ಆಸಕ್ತಿ ಮೇರೆಗೆ ಈಗ ಒಳರಸ್ತೆ, ಗಟಾರ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದ್ದು,ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು. ಇದರ ಜೊತೆಗೆ ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾರುಕಟ್ಟೆಯಲ್ಲಿ ಮೂಲಸೌಕರ್ಯ ಒದಗಿಸುವ ಕೆಲಸ ಮಾಡಬೇಕು. –ಉದಯ ಯಂಡಿಗೇರಿ, ವ್ಯಾಪಾರಸ್ಥ
ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.