ಆರೋಗ್ಯ ವಿಚಾರಕ್ಕೆ ಪ್ರಚಾರ ಕೊರತೆ
Team Udayavani, Apr 7, 2017, 1:11 PM IST
ಹುಬ್ಬಳ್ಳಿ: ಭಾರತದಲ್ಲಿ ಉತ್ಪನ್ನಗಳಿಗೆ ಪ್ರಚಾರ ಸಿಗುವಷ್ಟು ಆರೋಗ್ಯ ರಕ್ಷಣೆ ಕುರಿತ ವಿಷಯಗಳಿಗೆ ಪ್ರಚಾರ ಸಿಗದಿರುವುದು ದುರದೃಷ್ಟಕರ ಸಂಗತಿ ಎಂದು ಇಂಡೋಸಿಸ್ ಲೈಫ್ ಸಾಯನ್ಸ್ ಸಂಸ್ಥೆಯ ಚೇರನ್ ಹಾಗೂ ಅಂತಾರಾಷ್ಟ್ರೀಯ ಆಹಾರ ತಜ್ಞ ಡಾ| ಎಸ್. ಎಚ್.ಕುಲಕರ್ಣಿ ಹೇಳಿದರು.
ಗುರುವಾರ ವಕೀಲರ ಸಂಘದ ಸಭಾಭವನದಲ್ಲಿ ಆರೋಗ್ಯ ಚಿಂತನ ಕುರಿತು ಅವರು ಉಪನ್ಯಾಸ ನೀಡಿದರು. ಬೇರೆ ದೇಶಗಳಲ್ಲಿ ಉತ್ಪನ್ನಗಳೊಂದಿಗೆ ಆರೋಗ್ಯ ರಕ್ಷಣೆ ಕುರಿತು ಪ್ರಚಾರ ಮಾಡಲಾಗುತ್ತದೆ. ಆದರೆ ನಮ್ಮಲ್ಲಿ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ.
ಆರೋಗ್ಯ ರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ವಿರಳ ಎಂದರು. ರೋಗ ಬಂದ ನಂತರ ವೈದ್ಯರ ಬಳಿಗೆ ಎಡತಾಕುವುದಕ್ಕಿಂತ ರೋಗ ಬರದಂತೆ ತಡೆಯುವುದು ಹೇಗೆ ಎಂಬುದರ ಬಗ್ಗೆ ತಿಳಿಯುವುದು ಅವಶ್ಯ. ಆಹಾರ, ನೀರು, ವ್ಯಾಯಾಮ, ಜೀವನಶೈಲಿಯಿಂದ ಹೆಚ್ಚಿನ ರೋಗಗಳು ಬರದಂತೆ ತಡೆಯಬಹುದು ಎಂದರು.
ಪ್ರತಿದಿನ ನಾವು ಸೇವಿಸುವ ಆಹಾರದ ಮೂಲಕ ರಾಸಾಯನಿಕ ನಮ್ಮ ದೇಹಕ್ಕೆ ಸೇರುವುದರಿಂದ ಜೀವಕೋಶಗಳ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇದು ರೋಗಗಳಿಗೆ ಕಾರಣವಾಗಿದೆ. ಎಲ್ಲ ರೋಗಗಳಿಗೂ ಜೀವಕೋಶಗಳು ಹಾಳಾಗುವುದೇ ಕಾರಣ ಎಂದರು. ಅಡುಗೆ ಅನಿಲ ಬಳಸಿ ಅಡುಗೆ ಮಾಡುವುದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇರುತ್ತದೆ.
ಅಡುಗೆ ಅನಿಲದಲ್ಲಿರುವ ಕೆಲ ರಾಸಾಯನಿಕಗಳಿಂದ ಹೆಚ್ಚು ಹೊತ್ತು ಅಡುಗೆ ಮನೆಯಲ್ಲಿ ಕಳೆಯುವ ಮಹಿಳೆಯರಲ್ಲಿ 40-45 ವರ್ಷಕ್ಕೆ ಸಂದು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದರು. ಭಾರತದಲ್ಲಿ ಆರೋಗ್ಯಕ್ಕೆ ಪೂರಕವಾಗುವ ಹಲವಾರು ಉತ್ಪನ್ನಗಳು ಸಿದ್ಧವಾಗುತ್ತಿದ್ದರೂ ಅವುಗಳನ್ನು ವಿದೇಶಗಳಿಗೆ ರಫ್ತು ಮಾಡುವುದೇ ಅಧಿಕ.
ಭಾರತದಲ್ಲಿ ಉತ್ಪಾದಿಸುವ ಚಹಾಗಳಲ್ಲಿ ಶೇ.15ರಷ್ಟು ಚಹಾಗಳಲ್ಲಿ ಆರೋಗ್ಯ ಪೂರಕ ಅಂಶಗಳಿವೆ. ಆದರೆ ಅದು ಭಾರತದಲ್ಲಿ ಅದರ ಮಾರಾಟ ಅತಿ ಕಡಿಮೆ. ದೇಹಕ್ಕೆ ಮಾರಕವಾಗುವ ಶೇ.85 ಚಹಾ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ ಎಂದರು. ಜೀವಕೋಶಗಳು ಸಶಕ್ತವಾಗಿರಲು ಪ್ರತಿಯೊಂದು ಮನೆಗಳಲ್ಲಿ ಅಡುಗೆ ವೇಳಾಪಟ್ಟಿ ಹಾಕಿಕೊಳ್ಳಬೇಕು.
ಒಂದೇ ರೀತಿಯ ತರಕಾರಿ, ಧಾನ್ಯ ಬಳಕೆ ಮಾಡುವುದಕ್ಕಿಂತ 2-3 ರೀತಿಯ ತರಕಾರಿ, ಸೊಪ್ಪು, ಧಾನ್ಯ, ಹಣ್ಣು ಬಳಕೆ ಮಾಡುವುದು ಒಳಿತು. ನೋನಿ ಹಣ್ಣಿನ ಜ್ಯೂಸ್ ಬಳಕೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ, ಸಿ.ವಿ.ಮಲ್ಲಾಪುರ ವೇದಿಕೆ ಮೇಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.