ಲೆ| ಶಿವಶಂಕರ ವ್ಯಕ್ತಿತ್ವ ಮಾದರಿ: ಡಾ| ಪಟ್ಟಣಶೆಟ್ಟಿ
Team Udayavani, Jun 26, 2017, 3:50 PM IST
ಧಾರವಾಡ: ಲೆಫ್ಟಿನೆಂಟ್ ಕರ್ನಲ್ ಶಿವಶಂಕರ ಕಣಬರಗಿಮಠ ಅವರು ಬದುಕಿನುದ್ದಕ್ಕೂ ಬರೀ ಸೇನೆ ಅಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲಿ ಕ್ರೀಡಾ ಮನೋಭಾವನೆ ಪ್ರದರ್ಶಿಸಿ ಮಾದರಿಯಾಗಿದ್ದಾರೆ ಎಂದು ಸಾಹಿತಿ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.
ಇಲ್ಲಿನ ರಂಗಾಯಣ ಸಾಂಸ್ಕೃತಿಕ ಸಮುತ್ಛಯದಲ್ಲಿ ರವಿವಾರ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ವಚನ ಅಧ್ಯಯನ ಕೇಂದ್ರ ಪ್ರಕಟಿಸಿದ ಲೆಫ್ಟಿನಂಟ್ ಕರ್ನಲ್ ಶಿವಶಂಕರ ಕಣಬರಗಿಮಠ ಹೆಸರಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿರು. ಶಿವಶಂಕರ ಅವರನ್ನು ನೋಡಿದ ಮೊದಲ ದಿನದಿಂದಲೇ ನಾನು ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದೆ.
ಸೈನಿಕ ಸೇವೆಯಿಂದ ನಿವೃತ್ತಿಯಾದ ನಂತರ ಅವರು ಧಾರವಾಡದಲ್ಲಿ ನೆಲೆಸಿದರು. ಮಿಲಿಟರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರೂ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ಅವರು, ಬದುಕನ್ನು ವಿಶಾಲ ವಿಶ್ವಕ್ಕೆ ಹೇಗೆ ತೆರೆದಿಡಬೇಕೆಂಬ ಗುಟ್ಟನ್ನು ಕಲಿಸಿಕೊಟ್ಟವರು.
ನಾಟಕವನ್ನು ತುತ್ಛವಾಗಿ ನೋಡುತ್ತಿದ್ದ ಜನರಿಗೂ ನಾಟಕದ ಅಭಿರುಚಿ ಹಚ್ಚಿದವರಲ್ಲಿ ಇವರೂ ಒಬ್ಬರು ಎಂದರು. ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಮಾತನಾಡಿ, ಪ್ರತಿಯೊಂದು ವಿಷಯದಲ್ಲಿ ಆಸಕ್ತಿ ಹೊಂದಿ ಅದಕ್ಕೆ ತಕ್ಕಂತೆ ಪರಿಶ್ರಮ ಪಡುತ್ತಿದ್ದ ಶಿವಶಂಕರ ಕಣಬರಗಿಮಠ ಅವರಲ್ಲಿ ಅಪಾರ ಪ್ರತಿಭೆ ಇತ್ತು.
ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ವ್ಯಕ್ತಿ ಅವರು. ಪಾಠ, ಆಟ, ನಾಟಕ ಹಾಗೂ ಎಲ್ಲ ಕಲೆಗಳಲ್ಲೂ ಕ್ರಿಯಾಶೀಲ ವ್ಯಕ್ತಿ. ವಿದ್ಯಾರ್ಥಿ ಇದ್ದಾಗ ಮುಂಬೈ ಪ್ರಾಂತ್ಯದಲ್ಲಿಯೇ ಕರ್ನಾಟಕ ಕಾಲೇಜಿನ ಹೆಸರನ್ನು ಕ್ರೀಡೆಯಲ್ಲಿ ಬೆಳಗಿಸಿದವರು ಕಣಬರಗಿಮಠ ಅವರು.
ರಂಗರ ಪ್ರೀತಿಯ ವಿದ್ಯಾರ್ಥಿಯಾಗಿದ್ದ ಇವರು ಹಲವು ನಾಟಕಗಳಲ್ಲೂ ಪಾತ್ರ ನಿಭಾಯಿಸಿದ್ದಾರೆ ಎಂದರು. ಹಿರಿಯ ಪತ್ರಕರ್ತ ಗುರುರಾಜ ಜಮ ಖಂಡಿ ಮಾತನಾಡಿ, ಕಣಬರಗಿಮಠ ಅವರು ಸೇನೆಯಿಂದ ನಿವೃತ್ತಿಯಾಗಿ ಬಂದ ನಂತರ ಧಾರವಾಡದಲ್ಲಿ ಟೆನಿಸ್ ಆಟಕ್ಕೆ ಮತ್ತೆ ಜೀವ ಬಂತು. ಅತೀ ಕಡಿಮೆ ಸಮಯದಲ್ಲಿ ಟೆನಿಸ್ ಆಟದೊಂದಿಗೆ ಅವರಿಂದ ಶಿಸ್ತು ಹಾಗೂ ಆತ್ಮವಿಶ್ವಾಸ ಕಲಿತೆವು ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಲೆಫ್ಟಿನಂಟ್ ಜನರಲ್ ಎಸ್.ಸಿ. ಸರದೇಶಪಾಂಡೆ, ಕರ್ನಲ್ ಕಣಬರಗಿಮಠ ಅವರು ಸೈನ್ಯದಲ್ಲೂ ಉತ್ತಮ ಹೆಸರು ಮಾಡಿದ್ದರು. ಅವರ ಎಲ್ಲ ಕಾರ್ಯಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಬಿಡುಗಡೆಯಾದ ಪುಸ್ತಕ ತುಂಬ ಸಹಕಾರಿ ಎಂದರು. ನಿವೃತ್ತ ಸೈನ್ಯಾಧಿಕಾರಿಗಳಾದ ಮೋಹನ ಪತ್ತಾರ, ಆರ್.ಬಿ. ನಾಯ್ಡು, ಶಿವಮೂರ್ತಿ ಕಣಬರಗಿಮಠ, ಗಿರಿಜಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.