ಸ್ವಾವಲಂಬಿ ಬದುಕಿಗಾಗಿ ಕೌಶಲ ಕಲಿಯಿರಿ
Team Udayavani, Jul 1, 2018, 4:32 PM IST
ಧಾರವಾಡ: ತಿಳಿವಳಿಕೆ ಕೊರತೆಯಿಂದಾಗಿ ತಪ್ಪು ಮಾಡಿ ಶಿಕ್ಷೆ ಅನುಭವಿಸುತ್ತಿರುವ ಮಹಿಳಾ ಕೈದಿಗಳು ಜೈಲು ಶಿಕ್ಷೆ ಪೂರೈಸಿದ ಮೇಲೆ ಸ್ವಂತ ಬಲದ ಮೇಲೆ ನಿಲ್ಲುವಂತಹ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕೌಶಲ ಕಲಿಯಬೇಕು ಎಂದು ದರ್ಶನ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಮಾಜಿ ಶಾಸಕಿ ಸೀಮಾ ಮಸೂತಿ ಹೇಳಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ಕೇಂದ್ರ ಕಾರಾಗೃಹ ಮತ್ತು ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜೈಲಿನ ಮಹಿಳಾ ಕೈದಿಗಳಿಗೆ ಕಾನೂನು ಜಾಗೃತಿ ಅಭಿಯಾನ ಹಾಗೂ ಕೌಶಲ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸರ್ಕಾರ ಹಾಗೂ ಸರಕಾರೇತರ ಸಂಸ್ಥೆಗಳು ಅನೇಕ ರೀತಿಯಲ್ಲಿ ನೆರವು ನೀಡುತ್ತವೆ. ಇದನ್ನು ಬಳಸಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಮಹಿಳಾ ಕೈದಿಗಳು ಮಾಡಿದ ತಪ್ಪನ್ನು ಮನ್ನಿಸಿ ಸಮಾಜ ಗೌರವಿಸುವಂತೆ ಆಗಬೇಕು. ದರ್ಶನ, ರೋಶನ್‌ದಂತ ಅನೇಕ ಸಂಸ್ಥೆಗಳಿಂದ ಮಹಿಳೆಯರಿಗೆ ಟೇಲರಿಂಗ್, ಕಸೂತಿ, ನೇಯ್ಗೆ ಮತ್ತು ಸ್ವೆಟರ್ ತಯಾರಿಸುವಂತ ಉದ್ಯೋಗಗಳನ್ನು ಕಲಿಸಲಾಗುತ್ತದೆ. ಈ ಉತ್ಪಾದನೆಗಳನ್ನು ಮಾರುಕಟ್ಟೆಗೆ ತಲುಪಿಸುವ ಕಾರ್ಯವನ್ನು ತಮ್ಮ ಸಂಸ್ಥೆಯಿಂದ ಮಾಡಲಾಗುವುದು ಎಂದರು.
ಹಿರಿಯ ಸಿವಿಲ್ ನ್ಯಾಯಾ ಧೀಶ ಚಿನ್ನಣ್ಣವರ ಆರ್. ಎಸ್. ಅಧ್ಯಕ್ಷತೆ ವಹಿಸಿದ್ದರು. ಡಾ| ವಿ.ಡಿ. ಕರ್ಪೂರಮಠ ಮಾತನಾಡಿದರು. ರವೀಂದ್ರ ಯಲಿಗಾರ, ಎಂ.ಎಸ್. ಹೆಡೆ, ನಾಗರತ್ನಾ ದಾಶಾಳ, ರೋಶನ್ ಸಾಯಿ, ಶಾರದಾ ಮಲ್ಲೂರ, ಸುನಂದಾ ಪಾಟೀಲ್, ಪುಷ್ಪಾ ಪಾಟೀಲ್, ಕಸ್ತೂರಿ ಗಾಡದ, ಎಂ.ಎಲ್.ದೇಸಾಯಿ, ವಿದ್ಯಾವತಿ ಕುಲರ್ಕಣಿ, ಆಶಾ ಪ್ರಳಯಕಲ್ಮಠ ಇದ್ದರು. ದರ್ಶನ ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ಹೇಮಾ ಪಾಟೀಲ್ ಸ್ವಾಗತಿಸಿ, ನಿರೂಪಿಸಿದರು. ವೈಶಾಲಿ ನಾಯಕ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ
BJP ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರ: ಅರವಿಂದ ಬೆಲ್ಲದ
Hubli: ಮೀಟರ್ ಬಡ್ಡಿಗೆ ಮನನೊಂದು ಲಾರಿ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹ*ತ್ಯೆ