ಪಿಂಚಣಿಗಾಗಿ ಕಾನೂನು ಸಮರಕ್ಕೆ ಅಸ್ತು
Team Udayavani, Nov 1, 2017, 12:51 PM IST
ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಬರಬೇಕಾಗಿರುವ ಅಂದಾಜು 120 ಕೋಟಿ ರೂ. ಪಿಂಚಣಿ ಬಾಕಿ ಹಣಕ್ಕಾಗಿ ಕೋರ್ಟ್ ಮೊರೆ ಹೋಗಲು ಪಾಲಿಕೆ ಸಾಮಾನ್ಯ ಸಭೆ ಒಕ್ಕೊರಲಿನ ತೀರ್ಮಾನ ಕೈಗೊಂಡಿದೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ವೀರಣ್ಣ ಸವಡಿ, ಪಾಲಿಕೆ ಆರ್ಥಿಕ ಸ್ಥಿತಿ ಏನಿದೆ ಎಂಬುದನ್ನು ಸ್ಪಷ್ಟಪಡಿಸಬೇಕು.
ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ಹಣದ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪ ಬಿಟ್ಟು, ಪಕ್ಷಭೇದ ಮರೆತು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಪಾಲಿಕೆ ರಕ್ಷಣೆಗೆ ನಾವೆಲ್ಲರೂ ಮುಂದಾಗೋಣ.ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕೆಂಬುದರ ಬಗ್ಗೆ ಸಭೆಯಲ್ಲಿ ಸ್ಪಷ್ಟ ನಿರ್ಣಯ ಕೈಗೊಳ್ಳೋಣ ಎಂದರು.
ಪಾಲಿಕೆ ವಿಪಕ್ಷ ನಾಯಕ ಸುಭಾಸ ಶಿಂಧೆ ಮಾತನಾಡಿ, ಬೆಳಗಾವಿ ಅಧಿವೇಶನ ವೇಳೆ ಪಾಲಿಕೆ ಎಲ್ಲ ಸದಸ್ಯರು ಸುವರ್ಣಸೌಧ ಬಳಿ ಧರಣಿ ಕೂಡೋಣ ಎಂದರು. ಕಾಂಗ್ರೆಸ್‌ನ ಗಣೇಶ ಟಗರಗುಂಟಿ ಮಾತನಾಡಿ, ಪಕ್ಷಾತೀತ ಹೋರಾಟ ಮಾಡೋಣ. ಜಿಲ್ಲಾ ಉಸ್ತುವಾರಿ ಸಚಿವರನ್ನೊಮ್ಮೆ ಭೇಟಿ ಮಾಡಿ ಮನವಿ ಮಾಡೋಣ ಎಂದರು.
ಬಿಜೆಪಿಯ ಡಾ| ಪಾಂಡುರಂಗ ಪಾಟೀಲ ಮಾತನಾಡಿ, ಪಾಲಿಕೆ ಮುಖ್ಯಸ್ಥರಾದ ಆಯುಕ್ತರೇ ಪಾಲಿಕೆ ಆರ್ಥಿಕ ದುಸ್ಥಿತಿಯಲ್ಲಿದೆ, ವೇತನ ನೀಡುವುದಕ್ಕೂ ಹಣವಿಲ್ಲ ಎಂದರೆ ಹೇಗೆ. ನಿಧಿಯಾಧಾರಿತ ವ್ಯವಸ್ಥೆ ಉಲ್ಲಂಘನೆ ಹಾಗೂ ಅಸಮರ್ಪಕ ನಿರ್ವಹಣೆಯೇ ಈ ಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಪಿಂಚಣಿ ಬಾಕಿ ಹಣ ವಿಷಯವಾಗಿ ಸರಕಾರಕ್ಕೆ ಸಾಕಷ್ಟು ಮನವಿ ಮಾಡಲಾಗಿದೆ. ಇನ್ನು ಮನವಿ ಮಾಡುವುದು ಸಾಕು. ಪಾಲಿಕೆ ಸದನದಿಂದಲೇ ಕೋರ್ಟ್ ಮೊರೆ ಹೋಗೋಣ. ಸರಕಾರದ ಪ್ರಧಾನ ಕಾರ್ಯದರ್ಶಿ, ಹಣಕಾಸು ಹಾಗೂ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳನ್ನು ಪಾರ್ಟಿಯನ್ನಾಗಿ ಮಾಡೋಣ. ಮೂರು ತಿಂಗಳಲ್ಲಿ ಹಣ ಬರುತ್ತದೆ ಎಂದರು.
ಜೆಡಿಎಸ್ ಧುರೀಣ ಅಲ್ತಾಫ್ ಕಿತ್ತೂರ ಮಾತನಾಡಿ, ಬಾಕಿ ಹಣಕ್ಕಾಗಿ ಕೋರ್ಟ್‌ಗೆ ಹೋಗೋಣ. ಅದೇ ರೀತಿ ಎಲ್ಲ ಸದಸ್ಯರು ಸೇರಿ ಧರಣಿ ಮಾಡುವುದು ಅಗತ್ಯ ಎಂದರು. ಯಾಸೀನ್ ಹಾವೇರಿಪೇಟೆ, ಸುಧೀರ ಸರಾಫ್, ಪ್ರಕಾಶ ಕ್ಯಾರಕಟ್ಟಿ, ಶಿವಾನಂದ ಮುತ್ತಣ್ಣವರ ಸೇರಿದಂತೆ ಎಲ್ಲ ಸದಸ್ಯರು ಇದಕ್ಕೆ ಸಹಮತ ಸೂಚಿಸಿದರು.
ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, 2014ರಿಂದ ಪಾಲಿಕೆ ನಿವೃತ್ತ ನೌಕರರ ಪಿಂಚಣಿ ಹಾಗೂ ಇತರೆ ಸೌಲಭ್ಯಗಳ ರೂಪವಾಗಿ ಸೆಪ್ಟೆಂಬರ್ ಕೊನೆವರೆಗೆ 116.21ಕೋಟಿ ಬರಬೇಕಾಗಿದ್ದು, ಅಕ್ಟೋಬರ್ ತಿಂಗಳದ್ದು ಸೇರಿ ಒಟ್ಟು 120 ಕೋಟಿ ಬಾಕಿ ಬರಬೇಕಾಗುತ್ತದೆ.
ಸರಕಾರ ಇದೇ ವರ್ಷದ ಜೂನ್‌ನಿಂದ ನಿವೃತ್ತಿ ಹೊಂದಿವರಿಗೆ ಸಣ್ಣ ಉಳಿತಾಯ ಖಾತೆ ಮೂಲಕ ಪಿಂಚಣಿ ನೀಡಲು ಆದೇಶ ಮಾಡಿದೆ. ಅದೇ ರೀತಿ 2,400 ನಿವೃತ್ತ ನೌಕರರಿಗೂ ಸಣ್ಣ ಉಳಿತಾಯದಡಿ ಪಿಂಚಣಿ ನೀಡಲು ಒಪ್ಪಿಗೆ ನೀಡಿದೆ. ಬಾಕಿ ಇರುವ ಸುಮಾರು 120 ಕೋಟಿ ರೂ. ಮರುಹೊಂದಾಣಿಕೆ ಸಾಧ್ಯವಿಲ್ಲವೆಂದು ಹೇಳಿದೆ ಎಂದರು.
ಸದಸ್ಯರ ಅನಿಸಿಕೆಗಳನ್ನು ಆಲಿಸಿದ ನಂತರ ಮಹಾಪೌರರ ಸ್ಥಾನದಲ್ಲಿದ್ದ ಉಪ ಮಹಾಪೌರ ಲಕ್ಷ್ಮೀಬಾಯಿ ಬಿಜವಾಡ ಅವರು ಪಿಂಚಣಿ ಬಾಕಿ ಹಣಕ್ಕಾಗಿ ಕೋರ್ಟ್ ಮೊರೆ ಹೋಗುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳುವ ಮೂಲಕ ವಿಷಯದ ಚರ್ಚೆಗೆ ತೆರೆ ಎಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.