ಆಸ್ಪತ್ರೆಗಳು ಬಡವರ ಆರೋಗ್ಯ ಕಾಪಾಡಲಿ; ಸಚಿವ ಪ್ರಹ್ಲಾದ ಜೋಶಿ
ಕಳೆದ 25 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಆಗುತ್ತಿದೆ.
Team Udayavani, Dec 12, 2022, 6:34 PM IST
ಹುಬ್ಬಳ್ಳಿ: ಬಡವರ ದುಡಿಮೆಯಿಂದಲೇ ದೇಶ ನಡೆಯುತ್ತಿದ್ದು, ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಸಾಕಷ್ಟಿದೆ. ಆದ್ದರಿಂದ ಅವರಿಗೆ ಉತ್ತಮ ಸೌಲಭ್ಯ ದೊರಕಬೇಕು. ಆ ನಿಟ್ಟಿನಲ್ಲಿ ಆಸ್ಪತ್ರೆಗಳು ತಮ್ಮ ಆದಾಯದಲ್ಲಿನ ಒಂದಿಷ್ಟು ಭಾಗವನ್ನು ಬಡವರಿಗಾಗಿ ಮೀಸಲಿಟ್ಟು ಅವರ ಆರೋಗ್ಯ ಕಾಪಾಡಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಕೆಎಸ್‌ಆರ್‌ಟಿಸಿ ಡಿಪೋ ವೃತ್ತ ಬಳಿ ಆರಂಭಿಸಲಾದ ನಿರಾಮಯ ಮೆಡಿಕಲ್ ಸೆಂಟರ್ ಹಾಗೂ ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್‌ನ ಹೈಟೆಕ್ ಡೈಗ್ನೊಸ್ಟಿಕ್ ಮತ್ತು ಎಂಆರ್‌ಐ ಪಾಲಿಕ್ಲಿನಿಕ್ ಒಪಿಡಿ ಕೇಂದ್ರವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಭಾರತದಲ್ಲಿ ವಿದ್ಯೆ, ಔಷಧಿ ಮಾರಾಟ ಮಾಡಬಾರದೆಂಬ ಪರಿಕಲ್ಪನೆ ಇತ್ತು. ಸಮಯ ಬದಲಾದಂತೆ ಅದು ಬದಲಾಗಿದೆ. ಅದರಂತೆ ಮಾಡಬೇಕೆಂದಿಲ್ಲ. ಆದರೆ ರೋಗಿಗಳು ವೈದ್ಯರ ಬಳಿ ಬಂದಾಗ ತೃಪ್ತಿಗೊಳ್ಳಬೇಕು. ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ರೋಗಿಗಳಿಗೆ ತಿಳಿಯುವ ಭಾಷೆಯಲ್ಲಿ ಹೇಳಬೇಕು. ಸಮಾಜ ಕೊಟ್ಟಿದ್ದರಲ್ಲಿ ಕೆಲಭಾಗವನ್ನು ಬಡವರಿಗಾಗಿ ನೀಡಬೇಕು. ಅವರಿಗೆ ಒಂದಿಷ್ಟು ಉತ್ಕೃಷ್ಟ ಸೇವೆ ಒದಗಿಸಬೇಕು. ಅದರಿಂದ
ನಿಮಗೆ-ನಿಮ್ಮ ಕುಟುಂಬದವರಿಗೆ ಪುಣ್ಯ ಲಭಿಸುತ್ತದೆ.ಆಸ್ಪತ್ರೆಗೆ ಆಗಮಿಸುವ ರೋಗಿಗಳು ಗುಣಮುಖರಾಗಿ ಆತ್ಮವಿಶ್ವಾಸ ಹಾಗೂ ನಗುಮೊಗದಿಂದ ಮನೆಗೆ ತೆರಳಬೇಕು. ಅಂತಹ ಸೇವೆ ದೊರಕಬೇಕು ಎಂದರು.
2027ರಲ್ಲಿ ಭಾರತವು ಆರ್ಥಿಕತೆಯಲ್ಲಿ ವಿಶ್ವದಲ್ಲಿ 3ನೇ ಸ್ಥಾನ, 2047ರಲ್ಲಿ 1ನೇ ಸ್ಥಾನ ಹೊಂದಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಅದಕ್ಕೆ ತಕ್ಕಂತೆ ನಾವು ವಿಶ್ವದ ಜನರ ಅಪೇಕ್ಷೆ ನೆರವೇರಿಸಬೇಕಿದೆ ಎಂದರು.
ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ| ವಿಜಯ ಸಂಕೇಶ್ವರ ಮಾತನಾಡಿ, ಮೊದಲು ಈ ಭಾಗದ ರೋಗಿಗಳು ಸಣ್ಣ ಸಮಸ್ಯೆಗಳಿಗೂ ಕೂಡ ಮುಂಬಯಿ, ಬೆಂಗಳೂರುಗಳತ್ತ ಮುಖ ಮಾಡಬೇಕಿತ್ತು. ಇದು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಕಳೆದ 25 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಆಗುತ್ತಿದೆ. ಬಹಳಷ್ಟು ತಜ್ಞರು ಹು-ಧಾಗೆ ಆಗಮಿಸುತ್ತಿದ್ದಾರೆ. ತಂತ್ರಜ್ಞಾನದಲ್ಲೂ ಉತ್ತಮವಾಗಿ
ಬೆಳೆದಿದೆ. ಪ್ರತಿವರ್ಷ ಒಂದು ಅತ್ಯುತ್ತಮ ವೈದ್ಯಕೀಯ ಸೇವಾ ಕೇಂದ್ರಗಳು ಆರಂಭವಾಗಬೇಕು.
ಇದರಿಂದ ವೈದ್ಯರು-ರೋಗಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ದರ-ದಕ್ಷತೆಯ ಫಲಿತಾಂಶ ದೊರೆಯುತ್ತದೆ. ವೈದ್ಯರು ಹೆಚ್ಚು ಕೌಶಲ್ಯ ವೃದ್ಧಿಸಿಕೊಳ್ಳಬೇಕು. ವಿಶೇಷ ಯಂತ್ರಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಆ ಮೂಲಕ ರೋಗಿಗಳು ಬೇರೆ ರಾಜ್ಯ, ಪ್ರದೇಶಗಳಿಗೆ ಹೋಗದಂತೆ ತಮ್ಮತ್ತ ಸೆಳೆಯಬೇಕು ಎಂದರು.
ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್‌ನ ಚೇರ್ಮನ್ ಡಾ|ಸಂಜೀವ ಕಳಸೂರ ಮಾತನಾಡಿದರು. ಮಹಾಪೌರ ಈರೇಶ ಅಂಚಟಗೇರಿ, ಮಾಜಿ ಶಾಸಕ ಅಶೋಕ ಕಾಟವೆ, ಡಾ| ದತ್ತಾ ನಾಡಗೇರ, ಡಾ|ಎಸ್.ಪಿ. ಬಳಿಗಾರ, ಡಾ|ಬಿ.ಆರ್. ಪಾಟೀಲ, ಡಾ|ಜಿ.ಬಿ.ಸತ್ತೂರ, ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್‌ನ ಎಂಡಿ ಡಾ|ಚಂದ್ರಕಾಂತ ಕಾಟವೆ, ಡಾ|ರಾಜೇಶ ರೇವಣಕರ ಮೊದಲಾದವರಿದ್ದರು. ಡಾ|ವಿವೇಕ ಪಾಟೀಲ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.