ಬದುಕಿನ ಬೇರುಗಳು ಗಟ್ಟಿಯಾಗಿರಲಿ
ಮಾಡೆಲ್ ಹೈಸ್ಕೂಲ್ 94ನೇ ಇಸ್ವಿ ಬ್ಯಾಚ್ ವಿದ್ಯಾರ್ಥಿಗಳಿಂದ ಗುರುವಂದನೆ-ಸ್ನೇಹ ಸಮ್ಮಿಲನ ಕಾರ್ಯಕ್ರಮ
Team Udayavani, Jun 6, 2022, 10:18 AM IST
ನವಲಗುಂದ: ಅಂದು ಶಿಕ್ಷಣ ಸೇವೆಯಾಗಿತ್ತು, ಇಂದು ವ್ಯಾಪಾರೀಕರಣವಾಗಿದೆ. ಸರಳತೆ, ಗೌರವ ನೀಡುವ ಮನೋಭಾವನೆ ಇವತ್ತಿನ ಮಕ್ಕಳಲ್ಲಿ ಇಲ್ಲವಾಗಿದೆ ಎಂದು ಸಾಹಿತಿ ಮತ್ತು ಜೀವನ ಶೈಲಿ ಸಲಹೆಗಾರ ಸಿದ್ದು ಯಾಪಲಪರವಿ ಹೇಳಿದರು.
ರವಿವಾರ ಪಟ್ಟಣದ ಮಾಡೆಲ್ ಹೈಸ್ಕೂಲ್ ಸಭಾಭವನದಲ್ಲಿ ನಡೆದ 1994ನೇ ಬ್ಯಾಚ್ ನಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇಂದು ಮಾನವೀಯ ಸಂಬಂಧ ನಶಿಸಿ ಹೋಗುತ್ತಿದೆ. ಜೀವನ ಯಾವ ರೀತಿ ಇದೆಯೋ ಅದೇ ರೀತಿ ತೆಗೆದುಕೊಂಡು ಎದುರಿಸಬೇಕು. ಶ್ರೀಮಂತಿಕೆ, ಬಡತನ ಎರಡನ್ನೂ ಅಷ್ಟೇ ಸಮನಾಗಿ ತೆಗೆದುಕೊಳ್ಳಬೇಕು. ನಮ್ಮ ಮಕ್ಕಳು ಎಂಜಿನಿಯರ್, ಡಾಕ್ಟರ್ ಆಗಬೇಕೆಂಬ ವ್ಯಾಮೋಹ ಇದೇ ಹೊರತು ನಮ್ಮ ಮಕ್ಕಳು ರೈತನಾಗಲಿ, ಒಳ್ಳೆಯ ವ್ಯಾಪಾರಿಯಾಗಬೇಕೆಂಬ ಗುರಿ ಇಲ್ಲದಂತಾಗಿದೆ. ಇಂಗ್ಲಿಷ್ ವ್ಯಾಮೋಹದಿಂದ ಸಂಸ್ಕೃತಿ ಮರೆತಿದ್ದಾರೆ. ಹಣ- ಅಹಂಕಾರ ನಮ್ಮ ಜೊತೆ ಬರುವುದಿಲ್ಲ, ಬದುಕಿನ ಬೇರುಗಳು ಗಟ್ಟಿಯಾಗಿರಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಅಜಾತ ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿಗಳು ಮಾತನಾಡಿ, ಹಿಂದಿನ ಕಾಲದ ಶಿಕ್ಷಕನಲ್ಲಿ ಶಿಸ್ತು, ಮೌಲ್ಯಗಳು ಇದ್ದವು. ಇಂದು ಅವೆಲ್ಲ ಕಡಿಮೆಯಾಗಿವೆ. ವಿದ್ಯಾರ್ಥಿಗಳ ಮುಂದೆ ಶಿಕ್ಷಕರು ಸಣ್ಣತನ ತೋರಿಸಬಾರದು. ಗುರುವನ್ನು ಮೀರಿ ಶಿಷ್ಯ ಬೆಳೆದರೆ ಗುರುವಿಗೆ ಅದೇ ಸಂತೋಷ ಎಂದರು.
ಮಾಡೆಲ್ ಹೈಸ್ಕೂಲ್ ಮುಖ್ಯಾಧ್ಯಾಪಕರಾದ ಎಸ್.ಕೆ. ಮಾಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎ.ಬಿ. ಕೊಪ್ಪದ ಮಾತನಾಡಿದರು. ನಿವೃತ್ತ ಹಿರಿಯ ಮುಖ್ಯಾಧ್ಯಾಪಕರಾದ ಎಸ್. ಎಂ.ಪಟ್ಟಣಶೆಟ್ಟಿ, ಕೆ.ಜಿ.ಸದರಜೋಶಿ, 94ನೇ ಸಾಲಿನ ವಿದ್ಯಾರ್ಥಿಗಳಾದ ಪಂಕಜ ಬಿಡಿ, ವೈ.ಜಿ. ಗದ್ದಿಗೌಡರ, ಶೌಕತ್ತಲಿ ಲಂಬೂನವರ ಹಾಗೂ ಶ್ರೀದೇವಿ ಅನಿಸಿಕೆ ವ್ಯಕ್ತಪಡಿಸಿದರು. ಅನಿಲ್ ಮೇತ್ರಿ ಸಂಗಡಿಗರು ಸಂಗೀತ ಸೇವೆ ನೀಡಿದರು. ಶಿವರಂಜನಿ ನಾಟ್ಯ ಸಂಘದ ವತಿಯಿಂದ ರಂಜನಾ ಕಾಮತ್ ಹಾಗೂ ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು.
94ನೇ ಇಸ್ವಿಯ ವಿದ್ಯಾರ್ಥಿಗಳು ಶಿಕ್ಷಕರಾದ ಎಸ್.ಎಂ. ಪಟ್ಟಣಶೆಟ್ಟಿ, ಎನ್.ಎಚ್. ಪುರಾಣಿಕ, ಆರ್.ಬಿ. ಕಮತರ, ವಿ.ಎನ್. ಪತಕಿ ಎಂ.ಬಿ. ಮುಲ್ಲಾನವರ, ಕೆ.ಜಿ. ಸದರಜೋಶಿ, ಎಸ್.ಬಿ. ತೋಟಿ, ಎಸ್.ಎ. ಬಾರಕೇರ, ಎಸ್.ಡಿ. ಪಾಟೀಲ, ಸುನಿತಾ ಅಂಗಡಿ, ಕುಮುದಾ ರೊಟ್ಟಿ, ಎಸ್.ಆರ್. ಕುಲಕರ್ಣಿ, ಎಂ.ಎಸ್. ಕಡಕೋಳ, ದೇವರಮನಿ ಸರ್, ಪತ್ತಾರ ಸರ್, ಅಡಿವಿ ಸರ್, ಆರ್.ಜಿ. ಬಿಡೆ, ಶಿವಪ್ಪ ಚುಳಕಿ, ವೆಂಕಣ್ಣ ದೊಡಮನಿ, ಎಸ್.ಟಿ. ರೋಣದ, ಪಿ.ಎನ್. ಗುಳೇದ, ವೈದ್ಯರನ್ನು ಸನ್ಮಾನಿಸಿ ಗೌರವಿಸಿದರು.
ದಿ| ಅನಂತ ಸುಂಕದ, ದಿ| ಎಸ್.ವಿ. ಮಧ್ವರಾಯನವರ, ದಿ| ಜೆ.ಡಿ.ದೊಡಮನಿ, ದಿ| ಎಸ್.ಎಂ.ಕದಂ, ದಿ| ಬಿ.ಬಿ.ಜಕ್ಕನಗೌಡರ, ದಿ| ವಾಸುದೇವ ಗುಡಿ, ದಿ| ಎಚ್.ಎ.ಗ್ರಾಮಪುರೋಹಿತ, ದಿ| ವಿ.ಎಸ್. ಕುಲಕರ್ಣಿ, ದಿ| ಪಿ.ಎಸ್. ದೇವಳೆ, ದಿ| ಟಿ.ಎ.ಹಳ್ಳಿಕೇರಿ, ದಿ| ಕೌಜಗೇರಿ ಹಾಗೂ ಅಗಲಿದ ಮಿತ್ರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿದ್ಯಾರ್ಥಿಗಳಾದ ಮಹೇಶ ಕೊಟ್ಟರಶೆಟ್ಟರ, ಶಿವಾನಂದ ಕಮ್ಮಾರ, ವಿಜಯ ನಾಗಾವಿ, ಮಹಾಂತೇಶ ಜಿನಗಾ, ರಮೇಶ ಕುಲಕರ್ಣಿ, ಅರುಣ ಸುಂಕಾಪುರ, ರಾಜು ಗದಗ, ಯಲ್ಲಪ್ಪ ಕಲಾಲ, ಅಪ್ಪಣ್ಣ ಕುಬಸದ, ಮುತ್ತು ಕಿರೇಸೂರ, ಅನೀಲ ಜಾಬೋಂಟಿ, ಶೌಕತ್ತ ಎಂಜಿನಿಯರ್, ವಿಶ್ವನಾಥ ದ್ಯಾವನಗೌಡರ, ಸಂತೋಷ ಪಾಟೀಲ, ಸಲೀಮ ಮುಲ್ಲಾ, ಲಕ್ಷ್ಮಣ ಬಂಡಿವಾಡ, ಜಮೀರ ಹುನಗುಂದ, ಗಂಗಾಧರ ಕಮ್ಮಾರ, ಜಯಪ್ರಕಾಶ ಮಾರನಬಸರಿ, ಮಂಜುನಾಥ ದ್ಯಾವನಗೌಡರ, ಸುನೀಲ ಸನ್ನಾಯಕ, ವಿಜಯಲಕ್ಷ್ಮೀ ಶಿದ್ರಾಮಶೆಟ್ಟರ, ಜ್ಯೋತಿ ಮಹೇಂದ್ರಕರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ
Bengaluru: ಸಾಲ ವಾಪಸ್ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.