ಹೊರಟ್ಟಿ ಮಗನ ಮೇಲೆ ಆಣೆ ಮಾಡಲಿ


Team Udayavani, Nov 8, 2017, 12:16 PM IST

h2-horatti-maga.jpg

ಹುಬ್ಬಳ್ಳಿ: ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ನನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರು ಆರೋಪವನ್ನು ಆತ್ಮಸಾಕ್ಷಿಯಾಗಿ ಮಾಡಿದ್ದಾರೆಂಬುದನ್ನು ತಮ್ಮ ಸುಪುತ್ರನ ತಲೆ ಮೇಲೆ ಕೈಯಿಟ್ಟು ಹೇಳಲಿ ಎಂದು ಬಾಳೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ನ.5ರಂದು ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಹೊರಟ್ಟಿಯವರು ನನ್ನ ಮೇಲೆ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆತ್ಮಸಾಕ್ಷಿಯಾಗಿ ಆರೋಪ ಮಾಡಿದ್ದನ್ನು ತಮ್ಮ ಪುತ್ರನ ತಲೆ ಮೇಲೆ ಕೈಯಿಟ್ಟು ಇಲ್ಲವೇ ಬಸವಣ್ಣನ ಫೋಟೊ ಮುಟ್ಟಿ ಹೇಳಲಿ.

ಹೊರಟ್ಟಿಯವರು ನನಗೆ 20 ವರ್ಷಗಳಿಂದ ಪರಿಚಿತರು. ಅವರು ಯಾವುದೋ ಸ್ವಾಮೀಜಿಯ ಮಾತು ಕೇಳಿ ಇಂಥ ಆರೋಪ ಮಾಡಿರುವ ಸಾಧ್ಯತೆಯಿದೆ. ಇದರಿಂದ ಹೊರಟ್ಟಿಯವರ ಘನತೆ ಹಾಳಾಗುತ್ತಿದ್ದು, ಅಂಥ ಸ್ವಾಮೀಜಿಗಳಿಂದ ಹೊರಟ್ಟಿವರು ದೂರ ಇರುವುದು ಒಳಿತು ಎಂದರು.  

ನಾನು ಹಣವನ್ನು ಬಡ್ಡಿಗೆ ನೀಡುತ್ತೇನೆ ಎಂದು ಹೊರಟ್ಟಿಯವರು ಆರೋಪ ಮಾಡಿದ್ದು, ನಾನು ಯಾರಿಗೆ ಬಡ್ಡಿಗೆ ಹಣ ನೀಡಿದ್ದೇನೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಮೂರುಸಾವಿರ ಮಠವನ್ನು ನಾನು ನುಂಗಲು ಪ್ರಯತ್ನಿಸಿದ್ದೆ ಎಂಬ ಹೊರಟ್ಟಿಯವರ ಗೊಡ್ಡು ಬೆದರಿಕೆಗೆ ನಾನು ಹೆದರುವುದಿಲ್ಲ.

ಹಿಂದೆ ಹೊರಟ್ಟಿಯವರೇ ತಮ್ಮ ತೋಟದ ಮನೆಯಲ್ಲಿ ನನ್ನನ್ನು ಹಾಗೂ ಮೂರುಸಾವಿರ ಮಠದ ಸ್ವಾಮೀಜಿಗಳನ್ನು ಕರೆಸಿ, ಮೂರುಸಾವಿರ ಮಠದ ಪೀಠಾಧಿಪತಿಯಾಗಲು ನೀವೇ ಸೂಕ್ತ, ನೀವು ಒಪ್ಪಿಕೊಳ್ಳಬೇಕು. ಯಾವುದೇ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದರೂ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದರು.

ಅವರು ಹಲವು ಬಾರಿ ಮನವಿ ಮಾಡಿಕೊಂಡಿದ್ದರಿಂದ ನಾನು ಪೀಠಾಧಿಪತಿಯಾಗಲು ಒಪ್ಪಿಕೊಂಡಿದ್ದೆ. ಅವರು ಈಗ ಮಾಡಿದ ಆರೋಪದಿಂದ ನನಗೆ ಆಘಾತವಾಗಿದೆ ಎಂದರು. ಮೂರುಸಾವಿರ ಮಠದಿಂದ ಒಂದು ನಯಾಪೈಸೆಯನ್ನೂ ನಾನು ಪಡೆದುಕೊಂಡಿಲ್ಲ.

ಮೂರುಸಾವಿರ ಮಠದ ಆಸ್ತಿ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಲವು ಬಾರಿ ಬಾಳೆಹೊಸೂರು ಮಠದಿಂದ ಹಣವನ್ನು ಮೂರುಸಾವಿರ ಮಠಕ್ಕೆ ನೀಡಿದ್ದೇನೆ. ನನ್ನ ಮಾತನ್ನು ಕೇಳಬೇಕೆಂದು ನಾನು ಯಾರಿಗೂ ಒತ್ತಡ ಹೇರಿಲ್ಲ.

ಸಮಾಜದ ಹಿತಕ್ಕಾಗಿ ನಾನು ಸಲಹೆ ನೀಡುತ್ತೇನೆ. ನನ್ನನ್ನು ಯಾರೂ ಕೂಡ ಮಠದಿಂದ ಹೊರಗೆ ಹಾಕಿಲ್ಲ. ಬಸವರಾಜ ಹೊರಟ್ಟಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಹೊರಟ್ಟಿಯವರು ಮಾಡಿದ ಆರೋಪ ಖಂಡಿಸಿ ನಾನು ನ್ಯಾಯಾಲಯಕ್ಕೆ ಹೋಗುವುದಿಲ್ಲ, ಹೋರಾಟವನ್ನೂ ಮಾಡುವುದಿಲ್ಲ.

ಹೊರಟ್ಟಿಯವರು ಯಾಕೆ ಆರೋಪ ಮಾಡಿದ್ದಾರೆಂಬುದನ್ನು ಅವರೇ ಸ್ಪಷ್ಟಪಡಿಸಲಿ, ಇಲ್ಲವೇ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಎಂದರು. ಚುನಾವಣೆ ಬಂದಾಗ ಪ್ರತ್ಯೇಕ ಧರ್ಮ ನೆನಪಾಗಿದೆ: ಕೆಲವು ಜನಪ್ರತಿನಿಧಿಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರ್ಯಾಲಿ ಆಯೋಜಿಸುತ್ತಿರುವ ಉದ್ದೇಶ ಏನೆಂಬುದು ಎಲ್ಲರಿಗೂ ಗೊತ್ತಿದೆ. ಜನಪ್ರತಿನಿಧಿಗಳು ಸಮಾಜ ಸೇವೆಗಾಗಿ ಕೆಲಸ ಮಾಡಬೇಕೆ ಹೊರತು ಧರ್ಮ ಸ್ಥಾಪನೆ ಮಾಡುವುದು ಅವರ ಕೆಲಸವಲ್ಲ. ಕೆಲವು ಮಠಗಳು ರಾಜಕಾರಣಿಗಳ ಅಖಾಡಾಗಳಾಗಿವೆ. 

ರಾಜಕಾರಣಿಗಳು ದೊಡ್ಡ ದೊಡ್ಡ ಮಠಗಳಿಗೆ ಹೋಗುತ್ತಾರೆ. ನಾಡಿನಲ್ಲಿ ಎಷ್ಟೋ ಮಠಗಳಲ್ಲಿ ಮಠಾಧೀಪತಿಗಳಿಗೆ ಊಟಕ್ಕೂ ಗತಿಯಿಲ್ಲದ ಸ್ಥಿತಿಯಿದೆ. ರಾಜಕಾರಣಿಗಳಿಗೆ ಮಠಗಳ ಬಗ್ಗೆ ಕಾಳಜಿಯಿದ್ದರೆ ಇಂಥ ಸಣ್ಣ-ಪುಟ್ಟ ಮಠಗಳ ಜವಾಬ್ದಾರಿ ತೆಗೆದುಕೊಂಡು ಅಭಿವೃದ್ಧಿಪಡಿಸಲಿ ಎಂದರು. 

ಲಿಂಗಾಯತ ರ್ಯಾಲಿಯಲ್ಲಿ ಪಾಲ್ಗೊಂಡ ಸ್ವಾಮಿಗಳು ರಾಜಕಾರಣಿಗಳ ಬೆನ್ನು ಹತ್ತಿಕೊಂಡು ಹೋಗುತ್ತಾರೆ. ನಾಡಿನಲ್ಲಿ ಕೆಲವರು ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ಸ್ವಾಮಿಗಳಿದ್ದಾರೆ. ಅಂಥವರು ಸೇರಿ ಸಮಾಜ ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ನಾನು ಧರ್ಮ ಪಕ್ಷದ ಸ್ವಾಮಿ.

ಬಸವಜಯಮೃತ್ಯುಂಜಯ ಸ್ವಾಮೀಜಿ ವೀರಶೈವರ ಕುರಿತ ಆಕ್ಷೇಪಾರ್ಹ ಹೇಳಿಕೆ ಖಂಡನೀಯ. ಶ್ರೀಗಳ ಹೇಳಿಕೆಯಿಂದ ನಾಡಿನ ಮಠಾಧೀಶರ ಮನಸಿಗೆ ನೋವಾಗಿದೆ. ಕಾವಿಧರಿಸಿದವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದರು.

ಮಂಟೂರ ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಮುನವಳ್ಳಿಯ ಮುರಘೇಂದ್ರ ಸ್ವಾಮೀಜಿ, ಕಮತಗಿಯ ಶ್ರೀ ಹೊಳೆಹುಚ್ಚೇಶ್ವರ ಸ್ವಾಮೀಜಿ, ನರಗುಂದದ ಸಿದ್ದಲಿಂಗ ಶಿವಾಚಾರ್ಯರು, ಅಮ್ಮಿನಗಡದ ಶ್ರೀ ಪ್ರಭುಶಂಕರ ಸ್ವಾಮೀಜಿ, ಗುಳೇದಗುಡ್ಡದ ಶ್ರೀ ಕಾಶಿನಾಥ ಸ್ವಾಮೀಜಿ, ಕುಂದಗೋಳದ ಬಸವೇಶ್ವರ ಸ್ವಾಮೀಜಿ, ಮಣಕವಾಡದ ಶ್ರೀ ಸಿದ್ದರಾಮ ಸ್ವಾಮೀಜಿ ಇದ್ದರು. 

ಜಾಗೃತಿ ಸಮಾವೇಶ: ಡಿ.24ರಂದು ಗದಗನಲ್ಲಿ ನಡೆಯುವ ವೀರಶೈವ ಲಿಂಗಾಯತ ಸಮಾವೇಶವನ್ನು ಯಶಸ್ವಿಗೊಳಿಸಲಾಗುವುದು. ಲಿಂಗಾಯತರ ರ್ಯಾಲಿಗೆ ಪ್ರತಿಯಾಗಿ ಸಮಾವೇಶ ಆಯೋಜಿಸುತ್ತಿಲ್ಲ. ಸಮಾವೇಶದಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ಇದು ಸಮಾಜ ಜಾಗೃತಿ ಸಮಾವೇಶ ಎಂದರು. 

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Joshi-rader

Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್‌ ಸ್ಥಾಪನೆ: ಕೇಂದ್ರ ಸಚಿವ ಜೋಶಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.