ಎಲ್ಲೆಡೆ ವಚನ ಸಾಹಿತ್ಯ ಪಸರಿಸಲಿ: ವಿನಯ
Team Udayavani, Aug 21, 2017, 12:44 PM IST
ಧಾರವಾಡ: ಮೌಲ್ಯಯುತ ಬದುಕು ರೂಪಿಸಿಕೊಳ್ಳಲು ಎಲ್ಲೆಡೆ ವಚನ ಸಾಹಿತ್ಯದ ಪ್ರಸಾರ ಆಗಬೇಕಿದೆ ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ನಗರದ ಕವಿಸಂನಲ್ಲಿ ಬಸವ ಕೇಂದ್ರದಿಂದ ರವಿವಾರ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ನಿತ್ಯವಚನೋತ್ಸವದ ಮಂಗಲೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಆಧುನಿಕತೆಯ ಭರಾಟೆಯಲ್ಲಿ ಮೌಲ್ಯಯುತ ಬದುಕು ಮುಖ್ಯ. ಇದಕ್ಕಾಗಿ ವಚನಗಳಲ್ಲಿನ ತತ್ವಗಳನ್ನು ಮನುಷ್ಯ ಓದಿ, ಕೇಳಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮಠಗಳು ಮಾಡುತ್ತಿರುವ ಕಾರ್ಯಗಳನ್ನು ಬಸವ ಕೇಂದ್ರ ಮಾಡುತ್ತಿರುವುದು ಶ್ಲಾಘನೀಯ.
ಕನ್ನಡದಲ್ಲಿ ಕನ್ನಡಿಗರಿಂದ ಕರ್ನಾಟಕದಲ್ಲಿ ಹುಟ್ಟಿದ ಏಕೈಕ ಧರ್ಮ ಲಿಂಗಾಯತ ಧರ್ಮ. ಅದಕ್ಕೆ ಮಾನ್ಯತೆ ದೊರಕಬೇಕಿದೆ. ಹಲವು ಶರಣರು ಸೇರಿ ವಚನ ಸಾಹಿತ್ಯವನ್ನು ರೂಪಿಸಿದ್ದಾರೆ. ಆದ್ದರಿಂದ ಅವುಗಳು ಪ್ರತಿಯೊಬ್ಬ ಮನುಷ್ಯನಿಗೆ ಆದರ್ಶ ಬದುಕು ನಡೆಸಲು ಮಾರ್ಗದರ್ಶಕವಾಗಿವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ಸರ್ಕಾರ ಸವಲತ್ತು ಪಡೆಯುವುದಕ್ಕಾಗಿ ಆ.22ರಂದು ಬೆಳಗಾವಿಯಲ್ಲಿ ಲಿಂಗಾಯತ ಮಹಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ.ಆದ್ದರಿಂದ ಜಿಲ್ಲೆಯಿಂದ ರ್ಯಾಲಿಗೆ 1500 ವಾಹನ ವ್ಯವಸ್ಥೆ ಮಾಡಲಾಗಿದೆ.
5 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಪ್ರತಿಯೊಬ್ಬ ಲಿಂಗಾಯತರು ರ್ಯಾಲಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಶ್ರಾವನ ಮಾಸದ ವಚನೋತ್ಸವದಲ್ಲಿ ಬಸವ ಕೇಂದ್ರ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಾಹಿತಿ ಡಾ| ವೀರಣ್ಣ ರಾಜೂರ ಮಾತನಾಡಿದರು. ಸಿ.ಎಂ. ಕುಂದಗೋಳ, ಡಾ| ಸುಧೀರ ಜಂಬಗಿ, ಆರ್.ಯು. ಬೆಳ್ಳಕ್ಕಿ, ಶ್ರೀಶೈಲ ಸುರೇಬಾನ, ಶಿವಶರಣ ಕಲಬಶೆಟ್ಟರ, ಮಲ್ಲಿಕಾರ್ಜುನ ಚೌಧರಿ, ಶಿವಣ್ಣ ಶರಣನವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.