ಸಂಘರ್ಷದಿಂದ ಬದುಕು ಸಾರ್ಥಕವಾಗದು: ರಂಭಾಪುರಿ ಶ್ರೀ
ಶಿವಜ್ಞಾನದೊಂದಿಗೆ ಗುರುಕಾರುಣ್ಯಕ್ಕೆ ಒಳಗಾದಾಗ ಎಲ್ಲರೊಳಗೆ ಕೂಡಿ ಬದುಕಿ ಬಾಳುವ ಹಿರಿಮೆ ಅರ್ಥವಾಗುತ್ತದೆ
Team Udayavani, Feb 28, 2022, 5:51 PM IST
ಧಾರವಾಡ: ವಿಶ್ವದ ಎಲ್ಲ ಧರ್ಮ ಸಿದ್ಧಾಂತಗಳೂ ಶಾಂತಿಪೂರ್ಣ ಭಾವೈಕ್ಯ ಚಿಂತನೆಯನ್ನೇ ಪ್ರತಿಪಾದಿಸುತ್ತವೆ. ಸಂಘರ್ಷದಿಂದ ಮನುಕುಲದ ಬದುಕು ಸಾರ್ಥಕಗೊಳ್ಳುವುದಿಲ್ಲ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ಹೇಳಿದರು.
ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀಗುರುಸಿದ್ಧೇಶ್ವರ ಮಠದ ಉದ್ಘಾಟನೆ ಹಾಗೂ ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವೈರುಧ್ಯವನ್ನು ಮರೆತು ಎಲ್ಲರೂ ಕೂಡಿ ಬಾಳುವ ಸಾಮರಸ್ಯದ ಪ್ರತೀಕವಾದ ಮಾನವ ಧರ್ಮದ ಔನ್ನತ್ಯಕ್ಕೆ ಶ್ರಮಿಸಲು ಎಲ್ಲರೂ ಮುಂದಾಗಬೇಕು. ಧರ್ಮದ ಆಶಯಗಳನ್ನು ಅರಿಯದೇ ಕ್ಷುಲ್ಲಕ ಕಾರಣಗಳಿಗಾಗಿ ಕವಲು ದಾರಿಯಲ್ಲಿ ಹೆಜ್ಜೆಹಾಕಿ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಬಾರದು. ಧರ್ಮದ ಸಂಸ್ಕಾರ, ಸನ್ನಡತೆ, ಸತ್ಪರಂಪರೆಯ ಘನತೆಯನ್ನು ಅರ್ಥ ಮಾಡಿಕೊಂಡು ಶಿವಜ್ಞಾನದೊಂದಿಗೆ ಗುರುಕಾರುಣ್ಯಕ್ಕೆ ಒಳಗಾದಾಗ ಎಲ್ಲರೊಳಗೆ ಕೂಡಿ ಬದುಕಿ ಬಾಳುವ ಹಿರಿಮೆ ಅರ್ಥವಾಗುತ್ತದೆ ಎಂದರು.
ಕಲಘಟಗಿ ಹನ್ನೆರಡು ಮಠದ ಶ್ರೀರೇವಣಸಿದ್ಧ ಶಿವಾಚಾರ್ಯರು, ಸುಳ್ಳದ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯರು, ಮುಂಡಗೋಡದ ರುದ್ರಮುನಿ ಸ್ವಾಮೀಜಿ, ಸವಡಿ ಸ್ವಾಮೀಜಿ, ಚಂದ್ರಯ್ಯಸ್ವಾಮಿ ಹಿರೇಮಠ ಪಾಲ್ಗೊಂಡಿದ್ದರು.
ಮಾಜಿ ಶಾಸಕ ನಾಗರಾಜ ಛಬ್ಬಿ ಸಮಾವೇಶ ಉದ್ಘಾಟಿಸಿದರು. ಕಾಂಗ್ರೆಸ್ ನಾಯಕ ಬಂಗಾರೇಶ ಹಿರೇಮಠ, ಹು-ಧಾ ಪಾಲಿಕೆ ಸದಸ್ಯ ಸಂದಿಲಕುಮಾರ, ಕಿರಣ ಪಾಟೀಲಕುಲಕರ್ಣಿ, ಶಿವು ಬೆಂಡಿಗೇರಿ, ಗುರುನಾಥ ದಾನವೇನವರ, ಶಿವಪೂಜಯ್ಯ ತಡಸಮಠ, ಮದನ ಕುಲಕರ್ಣಿ, ಗ್ರಾಪಂ ಸದಸ್ಯರಾದ ಬಸವರಾಜ ನೇಸರಗಿ, ಅನಸೂಯಾ ಪಾಟೀಲ, ನಿಂಗವ್ವ ದೇವಗೇರಿ, ಯಲ್ಲಪ್ಪ ಉಣಕಲ್ಲ, ಮಾಳೇಶ್ವರ ಕರಡಿಗುಡ್ಡ, ಫಕ್ಕೀರಪ್ಪ ಅಡಕಿ ಇದ್ದರು. ಇದಕ್ಕೂ ಮೊದಲು
ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ರಂಭಾಪುುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಜರುಗಿತು.
ರಾಜಕೀಯದಲ್ಲಿ ಜನಹಿತಕ್ಕಾಗಿ ಧರ್ಮದ ಮೌಲ್ಯಗಳ ಅನುಪಾಲನೆ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ನುಸುಳಬಾರದು. ಯಾವುದೇ ಕಾರಣಕ್ಕೂ ರಾಜಕಾರಣದ ಹೊಸ್ತಿಲನ್ನು ಧರ್ಮ ಕಾಯುವಂತಾಗಬಾರದು.
ಡಾ| ಪ್ರಸನ್ನ ರೇಣುಕ
ವೀರಸೋಮೇಶ್ವರ ಭಗವತ್ಪಾದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.