15 ದಿನಗಳಿಂದ ಅಂಗನವಾಡಿಗೆ ಬೀಗ
Team Udayavani, Aug 26, 2018, 3:57 PM IST
ಲಕ್ಷ್ಮೇಶ್ವರ: ತಾಲೂಕಿನ ಬಟ್ಟೂರು ಗ್ರಾಪಂ ವ್ಯಾಪ್ತಿಯ ಕುಂದ್ರಳ್ಳಿ ಗ್ರಾಮದಲ್ಲಿ ಅಂಗನವಾಡಿ ಜಾಗದ ತಕರಾರಿನಿಂದ ಕಳೆದ 15 ದಿನಗಳಿಂದ ಅಂಗನವಾಡಿಗೆ ಬೀಗ ಜಡಿಯಲಾಗಿದೆ. ಇದರಿಂದ 40 ಮಕ್ಕಳು ಗ್ರಾಮದ ಮನೆಯೊಂದರ ಕಟ್ಟೆಯ ಮೇಲೆ ಕುಳಿತು ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಂದ್ರಳ್ಳಿ ಗ್ರಾಮದ ವಾರ್ಡ್ ನಂ. 1ರಲ್ಲಿನ ಗೋಮಾಳ ಜಾಗದಲ್ಲಿ ಅಂದು ಮಂಡಲ ಪಂಚಾಯತ್ ಇದ್ದಾಗ ಸಂಘಗಳಿಗೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಜಾಗ ಬಿಡಲಾಗಿತ್ತು. ಛಬ್ಬಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಈ ಮಾರ್ಗದಲ್ಲಿನ 98ಗಿ37ರಷ್ಟು ಜಾಗವನ್ನು ಅಲ್ಲಿನ ನಿವಾಸಿ ಮಲ್ಲಯ್ಯ ಈರಯ್ಯ ಬಾಳಿಹಳ್ಳಿಮಠ ಬಿಟ್ಟುಕೊಟ್ಟ ಕಾರಣ ಅವರಿಗೆ ಈ ಹಿಂದೆ ಮೀಸಲಿಟ್ಟ 30ಗಿ40 ವಿಸ್ತೀರ್ಣದ ಸರ್ವೇ ನಂ. 587/57/ಎ. ಜಾಗೆಯನ್ನು ಗ್ರಾಮಮ ಹಿರಿಯರು ಅವರ ಹೆಸರಿಗೆ ದಾಖಲಿಸಿದ್ದರು. ಆದರೆ ರಸ್ತೆಗಾಗಿ ಬಿಟ್ಟಿರುವ ನಿವೇಶನ ಹೆಚ್ಚಿದ್ದು ನನಗೆ ಕೊಟ್ಟಿರುವ ಜಾಗ ಕಡಿಮೆ ಇದೆ ಮತ್ತು ಇದುವರೆಗೂ ನೀಡಿರುವ ಜಾಗ ಗುರುತಿಸಿಕೊಟ್ಟಿಲ್ಲ ಎಂದು ಅಂಗನವಾಡಿಗೆ ಬೀಗ ಹಾಕಿದ್ದಾರೆ. ಅಲ್ಲದೇ ನನಗೆ ಹೆಚ್ಚಿನ ಜಾಗ ನೀಡಬೇಕು ಮತ್ತು ಗುರುತಿಸಿ ಕೊಡಬೇಕು. ಇಲ್ಲದಿದ್ದರೆ ತಾನು ರಸ್ತೆ ಬಂದ್ ಮಾಡುವುದಾಗಿ ಹೇಳುತ್ತಿದ್ದಾರೆ.
ಈ ಬಗ್ಗೆ ಯಾವುದೇ ಮಾಹಿತಿ ತಿಳಿಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಂಚಾಯತಿಯ ಗೋಮಾಳ ಜಾಗವಾದ ಸರ್ವೇ ನಂ. 587/1ರಲ್ಲಿ 11 ವರ್ಷಗಳ ಹಿಂದೆ ಅಂಗನವಾಡಿ ನಿರ್ಮಿಸಿದೆ. ಅಂಗನವಾಡಿಯಲ್ಲಿ ಎಲ್ಲ ಸೌಕರ್ಯ ಹೊಂದಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಆದರೆ ಈಗ ಮತ್ತೇ ಅಂಗನವಾಡಿ ಕಟ್ಟಡದ ಜಾಗೆ ತನ್ನದು ಎಂದು ಮಲ್ಲಯ್ಯ ಬಾಳೆಹಳ್ಳಿಮಠ ಆ. 10ರಂದು ಸಂಜೆ ಶಾಲಾ ಅವಧಿ ಮುಗಿದ ಮೇಲೆ ಬೀಗ ಜಡಿದಿದ್ದಾರೆ.
ಈ ಕುರಿತಂತೆ ತಾವು ಗ್ರಾಪಂ ಮತ್ತು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಇನ್ನು 2-3 ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಿದ್ದಾರೆ ಎಂದು ಅಂಗನವಾಡಿ ಮೇಲ್ವಿಚಾರಕಿ ಕೆ.ಎಚ್. ಹುಲಕೋಟಿ ತಿಳಿಸಿದ್ದಾರೆ.
ಈ ಕುರಿತಂತೆ ನಮ್ಮ ಗಮನಕ್ಕೆ ಬಂದಿಲ್ಲ. ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿರುವುದು ತಪ್ಪು. ಅದನ್ನು ಪಂಚಾಯತ್ ಮಟ್ಟದಲ್ಲಿ ಬಗೆಹರಿಸಿಕೊಳ್ಳಬೇಕು.
ಸಿ.ಎನ್. ಸೊರಟೂರ, ಗ್ರಾಪಂ ಸದಸ್ಯ
ಮಲ್ಲಯ್ಯ ಬಾಳಿಹಳ್ಳಿಮಠ ಅವರ ಜಾಗವೇ ಬೇರೆ, ಅಂಗನವಾಡಿ ಕೇಂದ್ರದ ಜಾಗವೇ ಬೇರೆಯಾಗಿದೆ. ಅವರು ತಮಗೆ ನೀಡಲಾದ ಜಾಗವನ್ನು ಗುರುತಿಸಿ ಕೊಡುವಂತೆ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದರೆ ಜಾಗ ಗುರುತಿಸಿ ಕೊಡಲಾಗುವುದು. ಯಾವುದೇ ಮಾಹಿತಿ ನೀಡದೇ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿರುವುದಕ್ಕೆ ಅವರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್‌ಗೆ ಸ್ಪಂದಿಸದಿದ್ದಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಾಗುತ್ತದೆ.
ಎಂ.ಆರ್. ಮಾದರ, ಪಿಡಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.