ಲಾಕ್‌ಡೌನ್‌ಗೆ ಸವಾಲಾದ ಹಳೆ ಹುಬ್ಬಳ್ಳಿ ಭಾಗದ ಜನ
Team Udayavani, Apr 26, 2020, 2:56 PM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಕೋವಿಡ್ 19 ಸೋಂಕು ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ನಗರದಲ್ಲಿನ ಸೋಂಕು ಪ್ರದೇಶದಿಂದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್ ಪ್ರದೇಶವೆಂದು ಘೋಷಣೆ ಮಾಡಿದ್ದರು ಸಹ ಹಳೆ ಹುಬ್ಬಳ್ಳಿ ಭಾಗದ ಜನರು ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸತೊಡಗಿದ್ದಾರೆ.
ಅವಳಿ ನಗರದಲ್ಲಿ ಒಟ್ಟು 9 ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಇಬ್ಬರು ಗುಣಮುಖರಾಗಿ ಹೊರಬಂದಿದ್ದಾರೆ. ಇನ್ನು ಏಳು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ತಡೆ ನಿಟ್ಟಿನಲ್ಲಿ ಅನಗತ್ಯ ಸುತ್ತಾಟ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಧಿಕಾರಿಗಳು, ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ 19 ವಿರುದ್ಧ ಹೋರಾಡುತ್ತಿದ್ದಾರೆ. ಆದರೆ, ಜನ ಮಾತ್ರ ನಿಯಮಗಳನ್ನು ಉಲ್ಲಂ ಸುವುದೇ ತಮ್ಮ ಧ್ಯೇಯ ಎಂಬಂತೆ ವರ್ತಿಸತೊಡಗಿದ್ದಾರೆ.
ಕೊಂಚ ಸಡಿಲಿಕೆ: ಸರಕಾರ ಲಾಕ್‌ಡೌನ್ ಪ್ರದೇಶದಲ್ಲಿ ಕಂಟೈನಮೆಂಟ್ ಹಾಗೂ ಸೋಂಕು ಪ್ರದೇಶ ಹೊರತು ಪಡಿಸಿ ಕೊಂಚು ಸಡಿಲಿಕೆ ನೀಡಿದ್ದು, ಇದನ್ನೇ ಬಳಸಿಕೊಂಡ ಜನರು ಅನೇಕ ಕಡೆಗಳಲ್ಲಿ ಗುಂಪು ಗುಂಪಾಗಿ ನಿಲ್ಲುವುದು, ಅನಗತ್ಯ ಸುತ್ತಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಲಾಕ್ ಡೌನ್ ನಡುವೆಯೂ ಹಳೇಹುಬ್ಬಳ್ಳಿ ಭಾಗದಲ್ಲಿ ಅಂಗಡಿ ಮುಂಗಟ್ಟುಗಳು ತೆರೆಯುತ್ತಿದ್ದು ಬೇಸರದ ಸಂಗತಿಯಾಗಿದೆ. ಇದರಿಂದ ಹೊಸ ಹುಬ್ಬಳ್ಳಿ ಭಾಗದ ವರ್ತಕರು ಯಾರಿಗೂ ಅವಕಾಶ ನೀಡಬಾರದು. ಇದರಿಂದ ನಮಗೂ ಕೂಡಾ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅಂಗಡಿ ಒಳಗೆ ಕ್ಷೌರ?: ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಇದ್ದರು, ಕೆಲವೊಂದು ಪ್ರದೇಶಗಳಲ್ಲಿ ಕ್ಷೌರ ಮಳಿಗೆಗಳು ಅಂಗಡಿ ಬಾಗಿಲು ಹಾಕಿಕೊಂಡು ಕೆಲಸ ನಡೆಸುತ್ತಿರುವುದು ಕಂಡು ಬರುತ್ತಿದೆ. ನಗರದ ಕೆಲವೊಂದು ಪ್ರದೇಶಗಳಲ್ಲಿ ಹಾಗೂ ಹೊಸ ಬಡಾವಣೆಗಳಲ್ಲಿ ಕ್ಷೌರದ ಅಂಗಡಿಯವರು ಒಳಗಡೆ ಕೆಲಸ ನಿರ್ವಹಿಸುತ್ತಿದ್ದಾರೆ. ಅಂಗಡಿಗಳಲ್ಲಿ 8-10 ಜನರನ್ನು ಇಟ್ಟುಕೊಂಡು ಬಾಗಿಲು ಹಾಕಿಕೊಂಡು ಕೆಲಸ ಮಾಡುತ್ತಿರುವುದು ಜನರಲ್ಲಿ ಆಂತಕ ಹೆಚ್ಚಾಗುವಂತೆ ಮಾಡಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕ್ಷೌರಿಕರು ಮನೆಗಳಿಗೆ ಆಗಮಿಸಿ ಕ್ಷೌರ ಮಾಡುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಯುವಕರು ತಲೆ ಗುಂಡು ಹೊಡೆಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಲಾಕ್‌ಡೌನ್ ಯಾವಾಗ ಮುಗಿಯುತ್ತದೆಯೋ ತಿಳಿಯದು, ಪದೇ-ಪದೇ ಕ್ಷೌರ ಮಾಡುವ ಬದಲಾಗಿ ಒಂದೇ ಬಾರಿ ಗುಂಡು ಹೊಡೆದು ಬಿಡಿ ಎನ್ನುತ್ತಿರುವ ಯುವಕರು ಗುಂಡು ಹೊಡೆಸಿಕೊಳ್ಳುತ್ತಿದ್ದಾರೆ.
ಹೆಚ್ಚಿದ ವಾಹನ ಸಂಚಾರ: ರಾಜ್ಯದಲ್ಲಿ ಲಾಕ್‌ಡೌನ್ ಕೊಂಚು ಸಡಿಲಿಕೆ ನೀಡಿರುವ ಹಾಗೂ ಕೆಲವೊಂದು ಕಚೇರಿಗಳ ತೆಗೆಯಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ವಾಹನ ಸಂಚಾರ ಹೆಚ್ಚಳ ಕಂಡು ಬಂದಿತು. ಕಂಟೈನಮೆಂಟ್ ಪ್ರದೇಶ ಹೊರತು ಪಡೆಸಿ, ಅಂದರೆ ವಿದ್ಯಾನಗರ, ಉಣಕಲ್ಲ, ಕಾರವಾರ ರಸ್ತೆ, ಗೋಕುಲ ರಸ್ತೆ, ಕಿತ್ತೂರ ಚನ್ನಮ್ಮ ವೃತ್ತಗಳಲ್ಲಿ ಹೆಚ್ಚಿನ ವಾಹನ ಸಂಚಾರ ಕಂಡು ಬಂದಿತು. ಪೊಲೀಸರು ಮಾತ್ರ ಎಂದಿನಂತೆ ಇಂದು ಕೂಡಾ ಅನಾವಶ್ಯಕವಾಗಿ ತಿರುಗಾಡುವವರನ್ನು ಹಿಡಿದು ದಂಡ ಹಾಕುವುದು, ವಾಹನ ಸೀಜ್ ಮಾಡುವ ಕಾರ್ಯವನ್ನು ಮುಂದುವರೆಸಿದ್ದಾರೆ.
-ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.