ಮಹದಾಯಿ: ಸರ್ವಪಕ್ಷ ಸಭೆಗೆ ಆಗ್ರಹ
ನವಲಗುಂದ: ಮಹದಾಯಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನೀಲಮ್ಮನ ಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತ ಹೋರಾಟ ಮುಖಂಡರು ಪ್ರತಿಭಟನೆ ನಡೆಸಿದರು.
Team Udayavani, Jun 6, 2019, 9:22 AM IST
ನವಲಗುಂದ: ಮಹದಾಯಿ, ಕಳಸಾ- ಬಂಡೂರಿ ಯೋಜನೆ ಜಾರಿ ಮಾಡಲು ಗೆಜೆಟ್ ನೋಟಿಫಿಕೇಶನ್ ಮಾಡಲು ತಜ್ಞರ, ಕಾನೂನು ಸಲಹೆಗಾರರ, ರೈತರ, ಸರ್ವ ಪಕ್ಷಗಳ ಸಭೆಯನ್ನು 15 ದಿನದೊಳಗಾಗಿ ಬೆಳಗಾವಿ ವಿಧಾನಸಭೆಯಲ್ಲಿ ಕರೆಯಲು ಆಗ್ರಹಿಸಿ ರೈತ ಹೋರಾಟ ಮುಖಂಡರು ಇಲ್ಲಿನ ನೀಲಮ್ಮನ ಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಪ್ರತಿಭಟಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ರೈತ ಹೋರಾಟ ಮುಖಂಡ ಸುಭಾಸ ಚಂದ್ರಗೌಡ ಪಾಟೀಲ ಮಾತನಾಡಿ, 5 ವರ್ಷ ರಾಜ್ಯದಲ್ಲಿ ಬರಗಾಲ ಆವರಿಸಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ವಿಶೇಷ ಪ್ಯಾಕೇಜ್ ಬಿಡುಗಡೆಯಾಗಿಲ್ಲ. ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಬಳಿಕ ಗ್ರೇಟ್-2 ತಹಶೀಲ್ದಾರ್ ಎಂ.ಜೆ. ಹೊಕ್ರಾಣಿ ಸ್ಥಳಕ್ಕೆ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದರು. ಬಸಪ್ಪ ಭೀರಣ್ಣವರ, ಮಲ್ಲೇಶ ಉಪ್ಪಾರ, ಎ.ಎಂ. ಹಂಚಿನಾಳ, ರಘುನಾಥ ನಡುವಿನಮನಿ, ರವೀಂದ್ರಗೌಡ ಪಾಟೀಲ, ಎ.ಎನ್. ಕದಂ, ಸಂಗಪ್ಪ ನಿಡವಣಿ, ಗೌಡಪ್ಪಗೌಡ ದೊಡ್ಡಮನಿ, ಸಿದ್ದಪ್ಪ ಖಂಡಿಬಾಗಿಲ, ಮೈಲಾರಪ್ಪ ಶೆಟ್ಟೆಣ್ಣವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.