ವಾಲ್ಮಿ ಜಲ ಸಾಕ್ಷರತೆಗೆ ಬೇಕಿದೆ ಕಾಸಿನ ಬಲ

Team Udayavani, Jul 21, 2018, 6:20 AM IST

ban21071807medn.jpg

ಹುಬ್ಬಳ್ಳಿ: ವರ್ಷದಿಂದ ವರ್ಷಕ್ಕೆ ಮಳೆ ಕೊರತೆ, ಜಲಸಂಕಷ್ಟ ಹೆಚ್ಚುತ್ತಿದ್ದು, ಜನರಲ್ಲಿ ಜಲ ಸಾಕ್ಷರತೆಗೆ ರಾಜ್ಯಾದ್ಯಂತ ಆಂದೋಲನ ಕೈಗೊಳ್ಳಲು ಧಾರವಾಡದ ವಾಲ್ಮಿ ಮುಂದಾಗಿದೆ.

ಆಂದೋಲನಕ್ಕೆ ವರ್ಷಕ್ಕೆ 2 ಕೋಟಿ ರೂ.ನಂತೆ ಐದು ವರ್ಷಕ್ಕೆ 10 ಕೋಟಿ ರೂ. ಅನುದಾನಕ್ಕಾಗಿ ಸರ್ಕಾರದ ಕಡೆ ಮುಖಮಾಡಿದೆ. ರಾಜಸ್ಥಾನ ಹೊರತು ಪಡಿಸಿದರೆ ದೇಶದಲ್ಲೇ ಎರಡನೇ ಅತಿದೊಡ್ಡ ಬರಪೀಡಿತ ರಾಜ್ಯವೆಂಬ ಹಣೆಪಟ್ಟಿಯನ್ನು ಕರ್ನಾಟಕ ಹೊತ್ತಿದೆ. ರಾಜ್ಯದಲ್ಲಿ ಇಂದಿಗೂ ಶೇ.70ರಷ್ಟು ಕೃಷಿ ಭೂಮಿ ಮಳೆಯನ್ನೇ ಆಶ್ರಯಿಸಿದೆ. ಇದ್ದ ನದಿ-ಕೆರೆ ನೀರಿನ ಸಂಪತ್ತಿನ ಪರಿಣಾಮಕಾರಿ ಬಳಕೆ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ವಾಲ್ಮಿ , ಕರ್ನಾಟಕ ಜಲ ಸಾಕ್ಷರತಾ ಆಂದೋಲನಕ್ಕೆ ಮುಂದಾಗಿದ್ದು, ಮಹಾರಾಷ್ಟ್ರದ ಮಾದರಿಯಲ್ಲಿ ಇಲ್ಲಿಯೂ ಸರ್ಕಾರದ ನೆರವು ದೊರೆತರೆ ಆಂದೋಲನ ಯಶಸ್ವಿಗೊಳಿಸಿ, ಕೃಷಿಕರಿಗೆ ನೆರವಾಗಲು
ನಿರ್ಧರಿಸಿದೆ.

ರಾಜ್ಯ ಒಟ್ಟಾರೆ 102 ಘನ ಕಿ.ಮೀ.ನಷ್ಟು ನೀರಿನ ಸಾಮರ್ಥ್ಯ ಹೊಂದಿದೆ. ಇದು ದೇಶದ ಒಟ್ಟಾರೆ ಮೇಲ್ಮೆ„ನೀರಿನ ಶೇ.6ರಷ್ಟು. ರಾಜ್ಯದಲ್ಲಿ ಒಟ್ಟು 6 ನದಿ ಕಣಿವೆಗಳಿದ್ದು, ಅಂದಾಜು 3,475 ಟಿಎಂಸಿಯಷ್ಟು ನೀರನ್ನು ಇವುಗಳಿಂದ ಬಳಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಕನಿಷ್ಠ 500 ಮಿ.ಮೀ.ನಿಂದ ಗರಿಷ್ಠ 4,000 ಮಿ.ಮೀ.ನಷ್ಟು ಒಳಗೊಂಡಂತೆ ಸರಾಸರಿ 1,151 ಮಿ.ಮೀ.ನಷ್ಟು ಮಳೆ ಬೀಳುತ್ತದೆ. ರಾಜ್ಯದಲ್ಲಿ ಒಟ್ಟಾರೆ 37,000 ಪಾರಂಪರಿಕ ಕೆರೆಗಳು,20,000 ಆಧುನಿಕ ಕೆರೆಗಳು, 1,100 ಸಣ್ಣ ನೀರಾವರಿ ಇಲಾಖೆಯಡಿಯ ಕೆರೆಗಳಿವೆ. ರಾಜ್ಯದ ಅಂತರ್ಜಲದಲ್ಲಿ ಸುಮಾರು 15.9 ಬಿಲಿಯನ್‌ ಘನ ಮೀಟರ್‌ ನೀರು ಲಭ್ಯವಿದೆ. ಇಷ್ಟೆಲ್ಲಾ ನೀರಿನ ಸೌಲಭ್ಯವಿದ್ದರೂ ಬೇಡಿಕೆಗೆ ಹೋಲಿಸಿದರೆ ಕೊರತೆ ಗೋಚರಿಸುತ್ತದೆ. ಇಂದಿಗೂ ಶೇ.70ರಷ್ಟು ಕೃಷಿ ಭೂಮಿ ಒಣ ಬೇಸಾಯವಾಗಿದೆ. ಜತೆಗೆ ನೀರಿನ ಸಮಸ್ಯೆಯೂ ಇದೆ.

ಏನಿದು ಜಲ ಸಾಕ್ಷರತೆ?: ನೀರಿನ ಸಂಪನ್ಮೂಲದ ವಿವಿಧಆಯಾಮಗಳ ಬಗ್ಗೆ ವಿಶ್ಲೇಷಣಾತ್ಮಕ ತಿಳಿವಳಿಕೆ ಮೂಡಿಸುವುದೇ ಜಲ ಸಾಕ್ಷರತೆ. ವಿಶ್ವಸಂಸ್ಥೆ 2018-2028ರ ದಶಕವನ್ನು “ಸುಸ್ಥಿರ ಅಭಿವೃದ್ಧಿಗಾಗಿ ಜಲ’ ಎಂಬ ಘೋಷಣೆಮೊಳಗಿಸಿದೆ. ಯುನೆಸ್ಕೋ, ಎಸ್‌ಐಡಬುಐ,ಐಡಬುಎಂಐ, ಡಬುಡಬ್ಲ್ಯುಸಿ ಸಂಸ್ಥೆಗಳು ಪ್ರೋತ್ಸಾಹಕ್ಕೆ ಮುಂದಾಗಿವೆ.

ಜಲ ಸಾಕ್ಷರತೆ ಉದ್ದೇಶ ಏನು?: ರಾಜ್ಯದಲ್ಲಿನ ಜಲ ಸಂಪನ್ಮೂಲದ ಚಿತ್ರಣವನ್ನು ವಿಶ್ಲೇಷಿಸುವುದು, ಜಲ ಕೊರತೆ ನೀಗಿಸಲು ನೀತಿ ಹಾಗೂ ತಂತ್ರಜ್ಞಾನ ರೂಪಿಸುವುದು, ಸುಸ್ಥಿರ ನೀರಿನ ಬಳಕೆ, ಜಲ ಭದ್ರತೆ ಸಾಧಿಸಲು ಪಾಲುದಾರರಲ್ಲಿ ಜಾಗೃತಿ, ಜಲ ಸಂಪನ್ಮೂಲ ಅಭಿವೃದ್ಧಿ, ಸಂರಕ್ಷಣೆ, ನಿರ್ವಹಣೆಗೆ ಸಂಘ-ಸಂಸ್ಥೆ ಗಳೊಂದಿಗೆ ಸಂಯೋಜನೆ, ಜಲ ಆಂದೋಲನ ಪ್ರಗತಿ ವೀಕ್ಷಣೆ ಹಾಗೂ ಪರಿಣಾಮಗಳ ದಾಖಲೀಕರಣ ಕೈಗೊಳ್ಳಲಾಗುತ್ತದೆ.

ರಾಜ್ಯದಲ್ಲಿನ 10 ಕೃಷಿ ಹವಾಮಾನ ವಲಯ ಸೇರಿದಂತೆ ಇಡೀ ರಾಜ್ಯದ ವಿವಿಧ ಭೌಗೋಳಿಕ,ನಗರ-ಗ್ರಾಮೀಣ ಭಾಗಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದಾಗಿದೆ. ಆಂದೋಲನದ ಆಡಳಿತಾತ್ಮಕ ನಿರ್ವಹಣೆಗೆ ರಾಜ್ಯಮಟ್ಟದಲ್ಲಿ ಮಾರ್ಗದರ್ಶಿ ಹಾಗೂ ಜಲ ತಜ್ಞರ ಸಲಹಾ ಸಮಿತಿ, ನೋಡಲ್‌ ಸಂಸ್ಥೆಯಾಗಿ ವಾಲಿ¾ ಕಾರ್ಯ ನಿರ್ವಹಿಸಲಿದ್ದು, ಜಿಲ್ಲಾ, ತಾಲೂಕು ಹಾಗೂ ಗಾಮಮಟ್ಟದ ಸಮಿತಿಗಳನ್ನು ರಚಿಸಲಾಗುತ್ತದೆ.

ಮಹಾರಾಷ್ಟ್ರ ಮಾದರಿ: ಜಲ ಸಾಕ್ಷರತೆ ನಿಟ್ಟಿನಲ್ಲಿ ಮಹಾರಾಷ್ಟ್ರ ದೇಶಕ್ಕೆ ಮಾದರಿ ಹೆಜ್ಜೆ ಇರಿಸಿದೆ. ಅಂತಾರಾಷ್ಟ್ರೀಯ
ಜಲತಜ್ಞ ಡಾ.ರಾಜೇಂದ್ರ ಸಿಂಗ್‌ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರ ಸರ್ಕಾರ ಜಲ ಸಾಕ್ಷರತೆಗೆಂದು ಅಲ್ಲಿನ ವಾಲ್ಮಿಗೆ 10 ಕೋಟಿ ರೂ. ನೀಡಿದ್ದು, ಆಂದೋಲನ ಉತ್ತಮ ಫ‌ಲಿತಾಂಶ ನೀಡತೊಡಗಿದೆ. ಕರ್ನಾಟಕದಲ್ಲೂ ಸರ್ಕಾರ ಜಲ ಸಾಕ್ಷರತೆ ಆಂದೋಲನಕ್ಕೆ ಮುಂದಾದರೆ ಉಚಿತವಾಗಿ ಮಾರ್ಗದರ್ಶನ ನೀಡಲು ಸಿದಟಛಿ ಎಂದು ಡಾ.ರಾಜೇಂದ್ರ ಸಿಂಗ್‌ ಈಗಾಗಲೇ ತಿಳಿಸಿದ್ದು, ಸರ್ಕಾರ ಅವರ ಸೇವೆ ಬಳಸಿಕೊಳ್ಳಬೇಕಾಗಿದೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ವಾಲ್ಮಿ  ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸಿ, ಸಂಸ್ಥೆ ಅಭಿವೃದ್ಧಿಗೆ ಅನುದಾನದ ಭರವಸೆ ನೀಡಿದ್ದಾರೆ.

ರಾಜ್ಯದಲ್ಲಿ ಜಲ ಸಾಕ್ಷರತೆ ಆಂದೋಲನಕ್ಕೆ ವಾಲ್ಮಿ ಅಗತ್ಯ ಯೋಜನೆ ಸಿದ್ಧಪಡಿಸಿದೆ.ರಾಜ್ಯಾದ್ಯಂತ ಆಂದೋಲನಕ್ಕೆ ಸರ್ಕಾರದ ಹಸಿರು ನಿಶಾನೆಗೆ ಎದುರು ನೋಡುತ್ತಿದ್ದು, ಐದು ವರ್ಷಗಳ ಯೋಜನೆಗೆ ಅಗತ್ಯ ಅನುದಾನ ದೊರೆತರೆ ಆಂದೋಲನ ಆರಂಭಗೊಳ್ಳಲಿದೆ.
– ಡಾ.ರಾಜೇಂದ್ರ ಪೊದ್ದಾರ,
ನಿರ್ದೇಶಕರು, ಧಾರವಾಡ ವಾಲ್ಮಿ 

– ಅಮರೇಗೌಡ ಗೋನವಾರ

ಟಾಪ್ ನ್ಯೂಸ್

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.