ಬಯಲು ಬಹಿರ್ದೆಸೆ ಮುಕಕ್ತೆ ಜಿಲ್ಲಾಡಳಿತದ ಮಹತ್ವದ ಹೆಜ್ಜೆ!


Team Udayavani, Sep 22, 2017, 1:01 PM IST

hub5.jpg

ಹುಬ್ಬಳ್ಳಿ: ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಮಹತ್ವದ ಹೆಜ್ಜೆ ಇರಿಸಿದ್ದು, ಇದಕ್ಕೆ ವಿವಿಧ ಶಿಕ್ಷಣ ಸಂಸ್ಥೆಗಳು ಕೈ ಜೋಡಿಸಿವೆ. ಅಕ್ಟೋಬರ್‌ 2ರೊಳಗೆ ತಾಲೂಕಿನಲ್ಲಿ ಸುಮಾರು 27,310 ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದ್ದು, ಇದರಲ್ಲಿ ಈಗಾಗಲೇ ಬಹುತೇಕ ಶೌಚಾಲಯಗಳ ನಿರ್ಮಾಣ ಕಾರ್ಯ ಮುಗಿದಿದೆ. 

ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ವಿದ್ಯಾರ್ಥಿಗಳು ಕಾರ್ಯತತ್ಪರವಾಗಿದ್ದು ಅದರಲ್ಲಿ ಕೆಲವೊಂದು ಗ್ರಾಮಗಳು ಈಗಾಗಲೇ ಬಯಲು ಶೌಚಮುಕ್ತ ಗ್ರಾಮಗಳಾಗಿ ಹೊರಹೊಮ್ಮಿವೆ. ಜಿಲ್ಲಾ ಪಂಚಾಯತ್‌ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಸಹಕಾರದೊಂದಿಗೆ ವಿವಿಧ ಕಾಲೇಜುಗಳ ಎನ್‌ಎಸ್‌ ಎಸ್‌ ಘಟಕಗಳ ಅಡಿಯಲ್ಲಿ ವಿದ್ಯಾರ್ಥಿಗಳು ವಿವಿಧ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣದ ವಿಶೇಷ ಶಿಬಿರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. 

2012ರ ಬೇಸ್‌ಲೈನ್‌ ಸರ್ವೇ ಪ್ರಕಾರ 27310 ಶೌಚಾಲಯ ನಿರ್ಮಾಣ ಮಾಡಬೇಕಾಗಿತ್ತು. ಅದರಲ್ಲಿ ಈಗಾಗಲೇ 24978 ಶೌಚಾಲಯ ನಿರ್ಮಿಸಲಾಗಿದ್ದು, ಇನ್ನುಳಿದಿರುವ 2332 ಶೌಚಾಲಯಗಳನ್ನು ಅಕ್ಟೋಬರ್‌ 2 ರೊಳಗೆ ಮುಕ್ತಾಯ ಮಾಡಲಾಗುವುದು ಎಂದು ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಡಾ| ರಾಮಚಂದ್ರ ಹೊಸಮನಿ ಹೇಳುತ್ತಾರೆ. 

ಬಯಲು ಶೌಚಮುಕ್ತ ಗ್ರಾಮ: ಈಗಾಗಲೇ ತಾಲೂಕಿನ ಶೆರೆವಾಡ, ಅರಳಿಕಟ್ಟಿ, ಛಬ್ಬಿ, ಅಂಚಟಗೇರಿ, ಅಗಡಿ ಪಂಚಾಯತಿಯ ತಿರುಮಲಕೊಪ್ಪ ಹಾಗೂ ಬೆಳಗಲಿ, ವರೂರ, ಶಿರಗುಪ್ಪಿ, ಕುಸುಗಲ್ಲ, ಕಟೂ°ರ, ಹಳಾಳ ಗ್ರಾಮಗಳು ಶೌಚಮುಕ್ತ ಗ್ರಾಮಗಳಾಗಿ ಹೊರಹೊಮ್ಮಿವೆ. 

ಬಯಲು ಶೌಚಮುಕ್ತವಾಗಬೇಕಾದ ಗ್ರಾಮ: ತಾಲೂಕಿನ ಚನ್ನಾಪುರ, ನೂಲ್ವಿ, ಉಮಚಗಿ, ಸುಳ್ಳ, ಕಿರೇಸೂರ, ಕರಡಿಕೊಪ್ಪ, ಹೆಬಸೂರ, ಇಂಗಳಹಳ್ಳಿ, ಬ್ಯಾಹಟ್ಟಿ, ಭಂಡಿವಾಡ, ಅದರಗುಂಚಿ, ಕೋಳಿವಾಡ ಗ್ರಾಮಗಳಲ್ಲಿ ಇನ್ನೂ ಶೌಚಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬ್ಯಾಹಟ್ಟಿ ಗ್ರಾಮದಲ್ಲಿ 224, ದೇವರಗುಡಿಹಾಳ ಗ್ರಾಮದಲ್ಲಿ 362, ಹೆಬಸೂರ ಗ್ರಾಮದಲ್ಲಿ 235, ನೂಲ್ವಿಯಲ್ಲಿ 75 ಶೌಚಾಲಯ ನಿರ್ಮಾಣ ಮಾಡಬೇಕಿದೆ. 

ಈಗಾಗಲೇ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ಕಲಘಟಗಿಯ ಗುಡ್‌ನ‌ೂಸ್‌ ಕಾಲೇಜು, ಚನ್ನಾಪುರ ಗ್ರಾಮದಲ್ಲಿ ಕಲಘಟಗಿ ಸರಕಾರಿ ಕಾಲೇಜು, ಬ್ಯಾಹಟ್ಟಿ ಗ್ರಾಮದಲ್ಲಿ ಚೇತನಾ ಕಾಲೇಜ್‌, ರಾಯನಾಳದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ದೇವರಗುಡಿಹಾಳ ಗ್ರಾಮದಲ್ಲಿ ಡಾ| ಕೆ.ಎಸ್‌. ಶರ್ಮಾ ಕಾಲೇಜು, ಮಂಟೂರನಲ್ಲಿ ಡಾ|ಕೆ.ಎಸ್‌. ಶರ್ಮಾ ಕಲಾ ವಿಭಾಗದ ವಿದ್ಯಾರ್ಥಿಗಳು, ಹಳಾಳ ಗ್ರಾಮದಲ್ಲಿ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು,

ನೂಲ್ವಿಯಲ್ಲಿ ವುಮೆನ್ಸ್‌ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಕಾಲೇಜುಗಳು ನೂರಾರು ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ಎನ್‌ಎಸ್‌ಎಸ್‌ ನಡೆ ಗ್ರಾಮ ನೈರ್ಮಲ್ಯದೆಡೆಗೆ, ಗ್ರಾಮ ಸ್ವತ್ಛತೆಯೇ ನಮ್ಮ ಆದ್ಯತೆ, ಬಯಲು ಶೌಚ ಮುಕ್ತ ಗ್ರಾಮ ನಮ್ಮ ಉದ್ದೇಶ ಎಂಬ ಘೋಷಣೆಗಳೊಂದಿಗೆ ಗ್ರಾಮದಲ್ಲಿ ಶೌಚಾಲಯ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮಹಿಳಾ ಕಾಲೇಜು ಭಾಗಿ: ಹುಬ್ಬಳ್ಳಿಯ ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಮಹಿಳಾ ಕಾಲೇಜು ಎನ್‌ಎಸ್‌ಎಸ್‌ನಡಿ ವಿದ್ಯಾರ್ಥಿನಿಯರು ನೂಲ್ವಿ ಗ್ರಾಮದಲ್ಲಿ ಬಯಲು ಶೌಚಮುಕ್ತ ಗ್ರಾಮ ಮಾಡುವಲ್ಲಿ ಶೌಚಾಲಯ ನಿರ್ಮಾಣ ಹಾಗೂ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ಗ್ರಾಮದಲ್ಲಿ 200 ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಕನಿಷ್ಠ 120 ಶೌಚಾಲಯಗಳನ್ನಾದರೂ ನಿರ್ಮಾಣ ಮಾಡುತ್ತೇವೆ ಎಂಬುದು ವಿದ್ಯಾರ್ಥಿನಿಯರ ವಿಶ್ವಾಸ.

ಪದವಿ ಕಾಲೇಜು: ಕುಂದಗೋಳದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪಂಚಗ್ರಹ ಹಿರೇಮಠ ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಂದಗೋಳದ ಸುಮಾರು 25 ವಿದ್ಯಾರ್ಥಿಗಳು ತಾಲೂಕಿನ ಕೊಟಗುಂಡ ಹುಣಸಿ ಗ್ರಾಮದಲ್ಲಿ ಶ್ರಮದಾನ ಮಾಡುವ ಮೂಲಕ ಗ್ರಾಮವನ್ನು ಶೌಚಮುಕ್ತ ಗ್ರಾಮ ಮಾಡುವಲ್ಲಿ ಮುಂದಾಗಿದ್ದಾರೆ. 

ಈಗಾಗಲೇ ಗ್ರಾಮದಲ್ಲಿ ಸ್ವತ್ಛತೆ ಕುರಿತು ಜಾಗೃತಿ, ಬಯಲು ಶೌಚ ಮಾಡದಂತೆ ಗ್ರಾಮಸ್ಥರೊಂದಿಗೆ ಸಂವಾದ, ಗ್ರಾಮದಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ಮಾಡುವ ಮೂಲಕ ಕೊಟಗುಂಡಹುಣಸಿ ಗ್ರಾಮವನ್ನು ಬಯಲು ಶೌಚಮುಕ್ತ ಗ್ರಾಮ ಮಾಡುವಲ್ಲಿ ಮುಂದಾಗಿದ್ದಾರೆ. 

* ಬಸವರಾಜ ಹೂಗಾರ

ಟಾಪ್ ನ್ಯೂಸ್

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.