ನೀರು ಸರಬರಾಜಿಗೆ ನೂರೆಂಟು ಸಮಸ್ಯೆ
Team Udayavani, Jan 18, 2017, 12:35 PM IST
ಹುಬ್ಬಳ್ಳಿ: ಕುಡಿಯುವ ನೀರಿನ ಸರಬರಾಜಿನಲ್ಲಿ ತಾಲೂಕು ಆಡಳಿತ, ಮಹಾನಗರ ಪಾಲಿಕೆ ಹಾಗೂ ಟ್ಯಾಂಕರ್ ಮಾಲೀಕರ ನಡುವೆ ಹಗ್ಗ ಜಗ್ಗಾಟ ಪ್ರಾರಂಭವಾಗಿದೆ. ಗ್ರಾಮೀಣ ಹಾಗೂ ನಗರದ ಹಲವು ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್ ಮಾಲೀಕರು ಹಾಗೂ ಇಲಾಖೆಗಳ ಮಧ್ಯೆ ತಿಕ್ಕಾಟ ನಡೆಯುತ್ತಿದ್ದು, ಇತ್ತೀಚೆಗೆ ಟ್ಯಾಂಕರ್ ಮಾಲೀಕರು ನಡೆಸಿರುವ ಪ್ರತಿಭಟನೆ ಇದಕ್ಕೆ ತಾಜಾ ನಿದರ್ಶನ.
ದರ ಪರಿಷ್ಕರಿಸಿಲ್ಲ: ನೀರು ಸರಬರಾಜು ಮಾಡಲು ಇಲಾಖೆ ಅತಿ ಕಡಿಮೆ ಹಣ ಸಂದಾಯ ಮಾಡುತ್ತಿದೆ. ನಾಲ್ಕು ತಿಂಗಳಿಂದ ಬಿಲ್ ಪಾವತಿಸಿಲ್ಲ ಎಂಬುದು ಟ್ಯಾಂಕರ್ ಮಾಲೀಕರ ಆರೋಪ. ಅಲ್ಲದೆ, ಕಳೆದ 15 ವರ್ಷಗಳಿಂದ ನೀರಿನ ಟ್ಯಾಂಕರ್ ಗಳಿಗೆ ಟೆಂಡರ್ ಕರೆದಿಲ್ಲ. ಇರುವ ವಾಹನಗಳ ಸೇವೆಯನ್ನೇ ಮುಂದುವರಿಸಿದ್ದು, ಇದು ಮಾಲೀಕರಿಗೆ ನುಂಗಲಾರದ ತುತ್ತಾಗಿದೆ.
15 ವರ್ಷಗಳ ಹಿಂದಿನ ಡೀಸೆಲ್ – ಆಯಿಲ್ ಬೆಲೆ, ನಿರ್ವಹಣೆ ವೆಚ್ಚ, ವಿಮಾ ಕಂತು, ಚಾಲಕರ ವೇತನ ಈಗ ಮೂರು – ನಾಲ್ಕು ಪಾಲು ಹೆಚ್ಚಾಗಿದೆ. ಹಳೆಯ ದರ ಕಿ.ಮೀ.ಗೆ 19 ರೂ. ನೀಡುತ್ತಿದ್ದು, ಹೆಚ್ಚಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಟ್ಯಾಂಕರ್‌ಗಳ ಮಾಲೀಕರ ಅಳಲು. ಸರ್ಕಾರದ ನಿಯಮಾವಳಿಯಂತೆ ಜಿಲ್ಲಾಡಳಿತದಿಂದ ಹಣ ಪಾವತಿಸುತ್ತಿದೆ.
ನಾಲ್ಕು ತಿಂಗಳಿಂದ ಹಣ ಸಂದಾಯ ಮಾಡಿಲ್ಲ ಎನ್ನುತ್ತಿರುವ ವಾಹನ ಮಾಲೀಕರಿಗೆ ದಾಖಲಾತಿಗಳನ್ನು ನೀಡುವಂತೆ ಸೂಚಿಸಲಾಗಿತ್ತು. ಅವರು ನೀಡದ ಹಿನ್ನೆಲೆಯಲ್ಲಿ ಬಿಲ್ ತಡೆ ಹಿಡಿಯಲಾಗಿತ್ತು. ಕೆಲವು ದಾಖಲೆಗಳನ್ನು ಪಡೆದು ಬಿಲ್ ಪಾವತಿಸುವಂತೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಜಲಮಂಡಳಿ ಕಾರ್ಯ ನಿರ್ವಾಹಕ ಅಭಿಯಂತರ ಅಶೋಕ ಮಾಡ್ಯಾಳ ಹೇಳುತ್ತಾರೆ.
ಜಿಪಿಎಸ್ ಅಳವಡಿಕೆ: ಜ. 1ರಿಂದ ನೀರು ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಿದ್ದು, ಪ್ರತಿದಿನವೂ ವಾಹನಗಳ ತಪಾಸಣೆ ಮಾಡಿ, ವಾಹನ ಸಂಚಾರ ಮಾಡುವ ಸ್ಥಳ ಇತ್ಯಾದಿಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಇದರಿಂದ ನೀರಿನ ಸರಬರಾಜು ಸುಗಮವಾಗಿದೆ. ಪ್ರತಿದಿನ ಗ್ರಾಮೀಣ ಭಾಗಕ್ಕೆ ಸುಮಾರು 120 ಟ್ಯಾಂಕರ್ ಹಾಗೂ ನಗರ ಪ್ರದೇಶದಲ್ಲಿ 100-110 ಟ್ರಿಪ್ ನೀರು ಸರಬರಾಜು ಮಾಡಲಾಗುತ್ತಿದೆ.
ಇನ್ನು ಟೆಂಡರ್ ಕರೆದರೆ ದಿನವೂ ಟ್ರಿಪ್ ಆಗಲಿ, ಆಗದಿರಲಿ ವಾಹನ ಮಾಲೀಕರಿಗೆ ಹಣ ಸಂದಾಯ ಮಾಡಬೇಕು. ಇದರ ಬದಲಾಗಿ ಟ್ರಿಪ್ ಹಾಗೂ ಸಂಚರಿಸಿದ ಕಿಮೀ ಆಧರಿಸಿ ಟ್ಯಾಂಕರ್‌ಗಳ ಮಾಲೀಕರಿಗೆ ಹಣ ಸಂದಾಯ ಮಾಡಲಾಗುತ್ತಿದೆ. ಜಿಪಿಎಸ್ ಅಳವಡಿಸಿದ ಕಾರಣಕ್ಕೆ ವಾಹನ ಮಾಲೀಕರು ಪ್ರತಿಭಟನೆ ನಡೆಸಿರಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.
ಫೆ. 1ರ ಗಡುವು: ನೀರಿನ ಟ್ಯಾಂಕರ್ ಮಾಲೀಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆ. 1ರ ವರೆಗೆ ಗಡುವು ನೀಡಿದೆ. ಡೀಸೆಲ್ ವ್ಯತ್ಯಾಸದ ಹಣ ನೀಡಬೇಕು, ನಾಲ್ಕು ತಿಂಗಳ ಬಾಕಿ ಹಣ ಸಂದಾಯವಾಗಬೇಕು, ಪ್ರತಿ ತಿಂಗಳು 10ನೇ ತಾರೀಕಿನೊಳಗೆ ಬಿಲ್ ಸಂದಾಯವಾಗಬೇಕು, ಜಿಪಿಎಸ್ ಅಳವಡಿಕೆ ಮಾಡಲಾಗಿದ್ದು, ಇದರ ನಿಗಾ ದಿನನಿತ್ಯ ನಡೆಯಬೇಕು. ತಪ್ಪು ಮಾಡಿದ ವಾಹನದವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.
ಅಧಿಕಾರಿಗಳ ಮನೆಗೆ ನೀರು ಸರಬರಾಜಿಗೆ ಹೋದರೆ ನಾಲ್ಕೈದು ಗಂಟೆಗಳ ಕಾಲ ನಿಲ್ಲಿಸಿಕೊಳ್ಳುವುದರಿಂದ ಟ್ರಿಪ್ ಮುಗಿಸಲು ತೊಂದರೆಯಾಗುತ್ತಿದ್ದು, ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ನೀರಿನ ಟ್ಯಾಂಕರ್ ಮಾಲಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
* ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.