ಮಾದಕ ದ್ರವ್ಯಗಳ ಜಾಗೃತಿ ಮೂಡಿಸಿ
Team Udayavani, Nov 29, 2017, 12:37 PM IST
ಹುಬ್ಬಳ್ಳಿ: ಕಾಲೇಜು ಯುವಕರನ್ನು ಮಾದಕ ವ್ಯಸನಗಳಿಂದ ರಕ್ಷಿಸುವುದು ಅವಶ್ಯವಿದ್ದು, ಕಾಲೇಜು ಆವರಣದಲ್ಲಿ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ಮಾರಾಟ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆರ್.ಬಿ.ತಿಮ್ಮಾಪೂರ ಸೂಚಿಸಿದರು.
ನವನಗರದ ಅಬಕಾರಿ ಉಪ ಆಯುಕ್ತ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಕಾಲೇಜುಗಳಲ್ಲಿ ಮಾದಕ ವ್ಯಸನಿಗಳಿದ್ದ ಬಗ್ಗೆ ಮಾಹಿತಿ ನೀಡುವಂತೆ ಎಲ್ಲ ಕಾಲೇಜುಗಳಿಗೆ 15 ದಿನಗಳಲ್ಲಿ ಪತ್ರ ಬರೆಯಬೇಕು. ಯುವಕರಲ್ಲಿ ಮಾದಕವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಅಧಿಕಾರಿಗಳು 15 ದಿನಗಳಿಗೊಮ್ಮೆ ಪರಿಶೀಲನಾ ಸಭೆ ಮಾಡಬೇಕು. ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳಬೇಕು. ಅವಧಿ ಮೀರಿದ ಮದ್ಯ ಪತ್ತೆ ಮಾಡಲು ಮುಂದಾಗಬೇಕೆಂದು ಸೂಚಿಸಿದರು. ಗೋವಾದಿಂದ ಅಕ್ರಮವಾಗಿ ರಾಜ್ಯಕ್ಕೆ ಸಾಗಣೆಯಾಗುವ ಮದ್ಯ ಪತ್ತೆ ಮಾಡುವುದಕ್ಕೆ ಆದ್ಯತೆ ನೀಡಬೇಕು.
ಅಕ್ರಮ ಮದ್ಯ ಸಾಗಾಣಿಕೆ ಬಗ್ಗೆ ಮಾಹಿತಿ ನೀಡಿದವರಿಗೆ ಸಮರ್ಪಕ ಪ್ರೋತ್ಸಾಹಧನ ಸಿಗುವಂತಾಗಬೇಕು ಎಂದರು. ಅಧಿಕಾರಿಗಳು ನಿರಂತರವಾಗಿ ವೈನ್ ಶಾಪ್‌ಗ್ಳು ಹಾಗೂ ಡಿಸ್ಟಿಲ್ಲರಿಗಳಿಗೆ ಭೇಟಿ ನೀಡಬೇಕು. ಅಕ್ರಮವಾಗಿ ಸ್ಪಿರಿಟ್ ಸಾಗಾಣಿಕೆ ನಡೆಯುವುದನ್ನು ತಡೆಯಬೇಕು. ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಕಳ್ಳಭಟ್ಟಿ ಬಂದ್‌ಗೆ ಎಷ್ಟು ವರ್ಷ ಬೇಕು?: ಕಳ್ಳ ಬಟ್ಟಿ ತಯಾರಿಕೆ ಎಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿಯಿದ್ದರೂ ಕ್ರಮ ಕೈಗೊಳ್ಳಲು ಯಾಕೆ ಹಿಂದೇಟು ಹಾಕುತ್ತೀರಿ? ಕಳ್ಳಭಟ್ಟಿ ಸಂಪೂರ್ಣ ಬಂದ್ ಆಗುವುದು ಯಾವಾಗ? ಕಳ್ಳಭಟ್ಟಿ ಮುಕ್ತ ಎಂದು ಘೋಷಣೆ ಮಾಡಬಹುದಾ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಲಾಡ್ಜ್ ನಡೆಸುವ ಕೆಲವರು ಅನುಮತಿ ಇಲ್ಲದೇ ಬಾರ್ ನಡೆಸುತ್ತಾರೆ. ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕು. ಹಲವು ಮಾಂಸಾಹಾರ ಹೊಟೇಲ್ ಗಳಲ್ಲಿ ಕೂಡ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯಬೇಕೆಂದರು. ಪೊಲೀಸ್ ಇಲಾಖೆಯಂತೆ ಉತ್ತಮ ಕೆಲಸ ಮಾಡುವವರಿಗೆ ಅಬಕಾರಿ ಪದಕ ನೀಡಲಾಗುವುದು.
ಮದ್ಯ ಮಾರಾಟ ಪರವಾನಗಿ ನೀಡುವಾಗ ಮೀಸಲಾತಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು. ಸಿಬ್ಬಂದಿ ದೈಹಿಕ ಕ್ಷಮತೆ ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಕ್ರೀಡಾಕೂಟಗಳನ್ನು ಆಯೋಜಿಸಲು ಅಗತ್ಯ ಅನುದಾನ ಒದಗಿಸಲಾಗುವುದು ಎಂದರು. ಸಭೆಯಲ್ಲಿ ಉಪ ಆಯುಕ್ತ ರಮೇಶ ಕ್ಯಾತನ್ನವರ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ
BJP ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರ: ಅರವಿಂದ ಬೆಲ್ಲದ
Hubli: ಮೀಟರ್ ಬಡ್ಡಿಗೆ ಮನನೊಂದು ಲಾರಿ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.