ಮಲ್ಲಮ್ಮಳ ಆದರ್ಶ ಸಮಾಜಕ್ಕೆ ದಾರಿದೀಪ: ಶಾಂತಾರಾಂ
Team Udayavani, May 12, 2018, 5:04 PM IST
ಬಾಗಲಕೋಟೆ: ಭಾರತೀಯ ಸಂಸ್ಕೃತಿಯ ಸಿರಿವಂತಿಕೆ ಹಾಗೂ ಸ್ತ್ರೀ ಕುಲದ ಘನತೆಯನ್ನು ಮೆರೆಸಿದ ಮಹಾಮಾತೆ ಹೇಮರೆಡ್ಡಿ ಮಲ್ಲಮ್ಮಳ ಬದುಕಿನ ಆದರ್ಶಗಳು ಸಮಾಜಕ್ಕೆ ದಾರಿದೀಪಗಳಾಗಿವೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಂ ಹೇಳಿದರು.
ಜಿಪಂ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು, ಹೇಮರೆಡ್ಡಿ ಮಲ್ಲಮ್ಮ ಬೀದಿಗಳಿದು ಹೋರಾಟ ಮಾಡದೇ ವ್ಯವಸ್ಥೆಯ ಒಳಗೆ ಇದ್ದು ಹೋರಾಟ ಮಾಡಿದವರು. ಕಪ್ಪೆ ಕೆಸರಿನಲ್ಲಿ ಒದ್ದಾಡಿ ಬಣ್ಣ ಪಡೆಯುವ ಮೂಲಕ ಮರು ಹುಟ್ಟು ಪಡೆದುಕೊಳ್ಳುತ್ತದೆ. ಅದೇ ರೀತಿ ಗುಹೆ ಒಳಗೆ ಇದ್ದು ಹೋರಾಟ ಮಾಡುವುದು ಕೂಡ ಅರ್ಥವನ್ನು ಪಡೆದುಕೊಳ್ಳುತ್ತದೆ. ಅಂತಹ ಹೋರಾಟದ ಕಿಚ್ಚನ್ನು ರೂಢಿಸಿಕೊಂಡವರು ಹೇಮರೆಡ್ಡಿ ಮಲ್ಲಮ್ಮ ಎಂದರು. ಅವರು ನಡೆದು ಬಂದ ಹಾದಿ, ಮಾರ್ಗದರ್ಶನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ಶಶಿಕಲಾ ಮರಬದ ಮಾತನಾಡಿ, ಶಿವಶರಣೆ ಮಲ್ಲಮ್ಮಳು ಒಂದೇ ಜಾತಿ, ಊರಿಗೆ ಸೀಮಿತರಾಗಿರದೇ ಜಾತಿ, ಜನಾಂಗ ಮೀರಿ ವಿಶ್ವ ಮಾನವರಾಗಿದ್ದಾರೆ. ಶ್ರೀಶೈಲದ ದಕ್ಷಿಣ ಭಾಗದಲ್ಲಿ ಹುಟ್ಟಿ, ಹೇಮರೆಡ್ಡಿ ಮನೆತನದ ಸೊಸೆಯಾಗಿ ಬದುಕು ನಡೆಸುವ ಮೂಲಕ ಹೋರಾಟ ಮಾಡಿದವರು. ಇವರ ಹೋರಾಟ ಗುಹೆಯ ತರಹದ್ದಾಗಿದ್ದು, ವ್ಯವಸ್ಥೆಯ ಒಳಗೆ ಹೋರಾಟ ಕೈಗೊಂಡವರು ಹೇಮರೆಡ್ಡಿ ಮಲ್ಲಮ್ಮ ಎಂದರು.
ಜಿಪಂ ಸಿಇಒ ವಿಕಾಸ ಸುರಳಕರ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಕೃಷಿ ಇಲಾಖೆ ಉಪನಿರ್ದೇಶಕ ಕೊಂಗವಾಡ, ಸಮಾಜದ ಮುಖಂಡರಾದ ಸಿ.ಕೆ. ಒಂಟಗೋಡಿ, ಜಿ.ಆರ್. ಹಡಗಲಿ, ಎಸ್.ಪಿ. ಮಾಚಾ, ಮಧುಸೂದನ ಮಾಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು. ಕಂದಾಯ ಇಲಾಖೆಯ ಶಿರಸ್ತೇದಾರ ಎಂ.ಬಿ.ಗುಡೂರ ವಂದಿಸಿದರು. ವಿಷಯ ಪರಿವೀಕ್ಷಕಿ ಜಾಸ್ಮೀನ್ ಕಿಲ್ಲೆದಾರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi-Dharwad ಪ್ರತ್ಯೇಕ ಮಹಾನಗರ ಪಾಲಿಕೆ: ಸರ್ಕಾರದಿಂದ ಮಧ್ಯಂತರ ರಾಜ್ಯಪತ್ರ
ಸದ್ಯಕ್ಕೆ ಸಿಎಂ ಚರ್ಚೆ ಗೊಡವೆಯೇ ನನಗೆ ಬೇಡ: ಡಿ.ಕೆ.ಶಿವಕುಮಾರ್
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ