ಮಂಗ್ಯಾನ ಕಾಟಕ್ಕೆ ಸಿಕ್ತು ಮುಕ್ತಿ
Team Udayavani, May 19, 2017, 3:20 PM IST
ಕಲಘಟಗಿ: ತಾಲೂಕಿನ ಕಾಮಧೇನು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಹುಚ್ಚು ಮಂಗ ಸೇರಿದಂತೆ ಸುಮಾರು 60 ಮಂಗಗಳನ್ನು ಹಿಡಿಯುವ ಮೂಲಕ ಕಾರ್ಯಾಚರಣೆ ಗುರುವಾರ ಯಶಸ್ವಿಗೊಂಡಿತು. ಸೆರೆಹಿಡಿದ ಎಲ್ಲ ಮಂಗಗಳನ್ನು ಅರಣ್ಯಕ್ಕೆ ಸಾಗಿಸಲಾಗಿದ್ದು, ಇದರ ಖರ್ಚು ವೆಚ್ಚವನ್ನು ಗ್ರಾಪಂ ಆಡಳಿತ ಮಂಡಳಿಯೇ ಭರಿಸುವ ಭರವಸೆ ನೀಡಿದೆ.
ಮೊದಲ ದಿನ (ಮೇ 18) ಕಾರ್ಯಾಚರಣೆಯಲ್ಲಿ ಸೆರೆಹಿಡಿದ 32 ಮಂಗಗಳು ಸೇರಿದಂತೆ ಒಟ್ಟು 60 ಮಂಗಗಳನ್ನು ಹಿಡಿದು ದಟ್ಟಾರಣ್ಯಕ್ಕೆ ಸಾಗಿಸಲಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಾರ್ಯಾಚರಣೆ ಸಂಪನ್ನಗೊಳ್ಳುತ್ತಿದ್ದಂತೆ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೊಳೇನವರ, ಉಪಾಧ್ಯಕ್ಷ ಮಂಜುನಾಥ ಅಲ್ಲಾಪುರ,
ಅಭಿವೃದ್ಧಿ ಅಧಿಕಾರಿ ಡಿ.ಬಿ. ಜಗದೀಶ ಅವರೊಂದಿಗೆ ಸ್ಥಳೀಯ ಸದಸ್ಯರಾದ ಏಗಪ್ಪ ಹುಲಗೂರ, ಗಿರಿಜವ್ವ ಪಾಟೀಲ, ಅಕ್ಕಮ್ಮ ಸಕ್ರಪ್ಪನವರ, ಶಂಕ್ರಪ್ಪ ದುಮ್ಮವಾಡ ಸೇರಿದಂತೆ ಗ್ರಾಮದ ಹಿರಿಯರು ಕಾರ್ಯಾಚರಣೆ ವೆಚ್ಚವನ್ನು ಗ್ರಾಪಂದಿಂದಲೇ ಭರಿಸಬೇಕು ಎಂದು ಮಾಡಿದ ಮನವಿಗೆ ಸದಸ್ಯರು ಸ್ಪಂದಿಸಿದ್ದಾರೆ.
ಮಹಾರಾಷ್ಟ್ರದ ಮೀರಜ್‌ನಲ್ಲಿರುವ ಶಬ್ಬೀರ ಹನೀಫ್ ಶೇಖ ನೇತೃತ್ವದ ಮಂಗಗಳನ್ನು ಹಿಡಿಯುವ ಮೂವರು ಜನರ ತಂಡವು ಕಾರ್ಯಾಚರಣೆ ನಡೆಸಿತು. ವಲಯ ಅರಣ್ಯಾಧಿಧಿಕಾರಿ ಕೆ.ಆರ್. ಕುಲಕರ್ಣಿ, ಅರಣ್ಯ ರಕ್ಷಕ ಕಾಶಿನಾಥ ಕುಂಬಾರ, ಕುಮಾರ ಹಡಪದ, ಬಸವರಾಜ ಚವರಗಿ, ರಾಯಪ್ಪ, ನಾಗಪ್ಪ ಸೇರಿದಂತೆ ಗ್ರಾಮದ ಯುವಕರು ಮಂಗಗಳನ್ನು ಸಾಗಿಸಲು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Zameer Ahmed: ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ: ಜಮೀರ್
Hubballi: ಹೆಸರು ಬೆಳೆಗಾರರ ಸಮಸ್ಯೆ ನಿವಾರಣೆಗೆ ಕೇಂದ್ರದಿಂದ ಸ್ಪಂದನೆ: ಪ್ರಹ್ಲಾದ ಜೋಶಿ
Hubli: ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ
Hubballi: ಮುಖ್ಯಮಂತ್ರಿ ಸಿದ್ದರಾಮಯ್ಯ ಪೇ ಡಬಲ್ ಸಿಎಂ ಆಗಿದ್ದಾರೆ… :ಬೊಮ್ಮಾಯಿ
MUDA; ಕಾಂಗ್ರೆಸ್ ಗೊಂದು, ಬಿಜೆಪಿಗೊಂದು ಕಾನೂನು ಇದೆಯೇ?: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.