ಮಾರುತೇಶ ಮತಯಾಚನೆ
Team Udayavani, May 7, 2018, 5:28 PM IST
ಹುನಗುಂದ: ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಬಿ.ಎಸ್.ಯಡಿಯುರಪ್ಪ ನೇತೃತ್ವದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ವಿಶ್ವವೇ ಇಂದು ಭಾರತವನ್ನು ತಲೆ ಎತ್ತಿ ನೋಡುವಂತೆ ಮಾಡಿ ವಿಶ್ವಗುರು ಭಾರತವನ್ನಾಗಿಸಿದ ಮಹಾನ್ ನಾಯಕ ಪ್ರಧಾನಿ ನರೇಂದ್ರ ಮೋದಿ ಎಂದು ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ಡಾ| ಆರ್. ಮಾರುತೇಶ ಹೇಳಿದರು.
ಪಟ್ಟಣದ ಗಂಗಾ ನಗರ, ಬಸಸ್ಟಾಂಡ್, ಹುಲ್ಲೇಶ್ವರ ದೇವಸ್ಥಾನ, ಬಜಾರ ರಸ್ತೆ, ವಿಜಯ ಮಹಾಂತೇಶ್ವರ ಮಠ, ಅಂಬಾ ಭವಾನಿ ದೇವಸ್ಥಾನ, ಜನತಾ ಪ್ಲಾಟ್‌ಗಳಲ್ಲಿ ಪಾದಯಾತ್ರೆ ಮೂಲಕ ಅಪಾರ ಕಾರ್ಯಕರ್ತರೊಂದಿಗೆ ಹುನಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಅವರಿಗೆ ಮತಯಾಚನೆ ಮಾಡಿ ಜನತಾ ಪ್ಲಾಟನಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿ, ತಾಲೂಕಿನ ಎಲ್ಲ ಸ್ಲಂಗಳನ್ನು ಗುಜರಾತ ಮಾದರಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಆರೋಗ್ಯ, ಮಹಿಳೆ ಮತ್ತು ಮಕ್ಕಳ, ಉದ್ಯೋಗ ಅವಕಾಶ ವಿವಿಧ ಕಾಮಗಾರಿಗಳ ಅಭಿವೃದ್ಧಿ ಮಾಡಲು ಬಿಜೆಪಿ ಪಕ್ಷವು ಮಹತ್ವವಾದ ಯೋಜನೆಯನ್ನು ತಯಾರಿಸಿದ್ದು ಅನುಷ್ಠಾನಕ್ಕಾಗಿ ಬಿಜೆಪಿ ಸರ್ಕಾರ ಆಡಳಿತದಿಂದ ಮಾತ್ರ ಸಾಧ್ಯವಾಗಲಿದೆ ಎಂದರು. ಈ ಬಾರಿ ಬಿಜೆಪಿ ಕಮಲದ ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕೆಂದು ಮನವಿ ಮಾಡಿದರು.
ರಾಜ್ಯ ಬಿಜೆಪಿ ಹಾಲು ಪ್ರಕೋಷ್ಠದ ಸಂಚಾಲಕ ಮಲ್ಲಿಕಾರ್ಜುನ ಶೆಟ್ಟರ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ಯಂತ್ರವು ಭ್ರಷ್ಟಾಚಾರದಲ್ಲಿ ಕೈ ತೊಳೆದುಕೊಂಡು ಕುಂಭಕರ್ಣ ನಿದ್ದೆಯಿಂದ ಎದ್ದಿರುವ ಈಗ ಚುನಾವಣೆ ಸಂದರ್ಭದಲ್ಲಿ ತಮ್ಮ ಸರ್ಕಾರದ ಬಗ್ಗೆ ಜಂಬಕೊಚ್ಚಿಕೊಳ್ಳುತ್ತಿದೆ. ಈ ಬಾರಿ ಮತದಾರರು ಬಿಜೆಪಿಯನ್ನು ಅಧಿಕಾರಕ್ಕೆ ತರಲು ದೃಢ ನಿರ್ಧಾರ ಮಾಡಿದ್ದಾರೆ ಎಂದರು. ಮಲ್ಲು ಮಡಿವಾಳರ, ವಿಶ್ವ ಬಡಿಗೇರ, ಮುತ್ತಣ್ಣ ಯರಕದ, ದುರ್ಗಪ್ಪ ಭಜಂತ್ರಿ, ಬಂಡೆಪ್ಪ ಭಜಂತ್ರಿ, ದಾದೇಪೀರ ಅತ್ತಾರ, ಇಸ್ಮಾಯಲ್ ಹಣಮಸಾಗರ, ಹಣಮಂತ ಮಾದರ, ನಾಗರಾಜ ಸಜ್ಜನ, ಸಂಗಮೇಶ ಚಿತ್ತರಗಿ ಅಪಾರ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.