ವಿಡಿಯೋ ಕಾನ್ಫರೆನ್ಸ್‌ನಿಂದ ವೈದ್ಯಕೀಯ ಸಲಹೆ
Team Udayavani, Apr 18, 2020, 12:18 PM IST
ಹುಬ್ಬಳ್ಳಿ: ಕೋವಿಡ್-19 ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಮನೋರೋಗಿಗಳಿಗೆ ಸೂಕ್ತ ಸಲಹೆ-ಸೂಚನೆ ನೀಡುತ್ತಿರುವ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ಜಿಲ್ಲಾಡಳಿತದ ಸಹಕಾರದಿಂದೊಂದಿಗೆ ಹೆಲ್ಫ್ಲೈನ್ ಆರಂಭಿಸಿದ್ದು, ಇದೀಗ ವಿಡಿಯೋ ಕಾನ್ಫರೆನ್ಸ್ ಮೂಲಕ ವೈದ್ಯಕೀಯ ಸಲಹೆ ನೀಡಲು ಮುಂದಾಗಿದ್ದು, ಇನ್ನೊಂದು ವಾರದಲ್ಲಿ ಈ ಸೇವೆ ಆರಂಭಗೊಳ್ಳಲಿದೆ.
ಪ್ರಸ್ತುತ ಲ್ಯಾಂಡ್‌ಲೈನ್ ಹಾಗೂ ಮೊಬೈಲ್ ಮೂಲಕ ವೈದ್ಯಕೀಯ ಸಂಬಂಧಿತ ಸಂದೇಹಗಳ ನಿವಾರಣೆಗೆ ಸಲಹೆ-ಸೂಚನೆ ನೀಡಲಾಗುತ್ತದೆ. ಆದರೆ ಇನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೂ ವೈದ್ಯಕೀಯ ಸಲಹೆ ನೀಡಲಾಗುತ್ತದೆ. ಸ್ಮಾರ್ಟ್ ಫೋನ್ ಅಥವಾ ವಾಟ್ಸ್‌ಆ್ಯಪ್ ವಿಡಿಯೋ ಕರೆ ಮೂಲಕ ಡಿಮ್ಹಾನ್ಸ್ ತಜ್ಞ ವೈದ್ಯರು ರೋಗಿಗಳೊಂದಿಗೆ ಸಮಾಲೋಚಿಸಲಿದ್ದಾರೆ.
ಇಲ್ಲಿ ಕೇವಲ ಮನೋರೋಗಗಳಿಗೆ ಮಾತ್ರವಲ್ಲ ಸಾಮಾನ್ಯ ರೋಗಗಳೂ ಕೂಡ ಶುಶ್ರೂಷೆ ಕುರಿತಾದ ಸಲಹೆ ಪಡೆಯಬಹುದಾಗಿದೆ. ತಮ್ಮ ಸಮಸ್ಯೆಗಳನ್ನು ತಜ್ಞ ವೈದ್ಯರೊಂದಿಗೆ ನೇರವಾಗಿ ಹೇಳಿಕೊಳ್ಳುವುದರಿಂದ ರೋಗಿಗಳ ಮನಸ್ಸು ನಿರಾಳವಾಗುತ್ತದೆ ಅಲ್ಲದೇ ಸೂಕ್ತ ಶುಶ್ರೂಷೆ, ಚಿಕಿತ್ಸೆ ಅಥವಾ ಔಷಧ ಸಿಗುವ ಭರವಸೆ ಮೂಡುತ್ತದೆ.
ಡಿಮ್ಹಾನ್ಸ್‌ನಲ್ಲಿ ಏಪ್ರಿಲ್ 6ರಿಂದ ಹೆಲ್ ಲೈನ್ ಸೇವೆ ಆರಂಭಗೊಂಡಿದ್ದು, ಪ್ರತಿದಿನ ಉಕ ಸೇರಿದಂತೆ ದಕ ಭಾಗದ ಹಲವಾರು ಜನರು ಪ್ರತಿನಿತ್ಯ ಕೋವಿಡ್-19 ಸಂಬಂಧಿತ ವೈದ್ಯಕೀಯ ಸಂದೇಹಗಳಿಗೆ ತಜ್ಞರಿಂದ ಸಲಹೆ ಪಡೆಯುತ್ತಿರುವುದು ವಿಶೇಷ. ಹೆಲ್ಪ್ಲೈನ್ ಗೆ ಕೋವಿಡ್-19 ವಿಷಯವಾಗಿ ಶೇ 60 ಪುರುಷರು ಹಾಗೂ ಶೇ.40 ಮಹಿಳೆಯರು ಕರೆ ಮಾಡುತ್ತಿದ್ದಾರೆ. 30ರಿಂದ 40 ವಯೋಮಿತಿಯ ಜನರು ಹೆಚ್ಚಾಗಿ ಹೆಲ್ಪ್ಲೈನ್‌ಗೆ ಕರೆ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆಯಿಂದ ಬರುವ ನೆಗಡಿ, ಕೆಮ್ಮು ಕೂಡ ಕೊರೊನಾ ಲಕ್ಷಣದಂತೆಯೇ ಗೋಚರವಾಗಬಹುದಾಗಿದೆ. ಹಲವರ ಊಟ, ನಿದ್ರೆ ಮಾಡುವ ಶೈಲಿಯೇ ಬದಲಾಗಿದೆ. ಲಾಕ್ ಡೌನ್ ಮೇ 3ರವರೆಗೆ ವಿಸ್ತರಿಸಿರುವುದರಿಂದ ಹಲವರಲ್ಲಿ ಮನೋವ್ಯಥೆಗಳು ಹೆಚ್ಚಾಗಬಹುದು.
ಮಾನಸಿಕ ಭೀತಿ, ಒತ್ತಡ ಖನ್ನತೆಯ ಹಂತಕ್ಕೂ ಹೋಗಬಹುದಾಗಿದೆ. ಲಾಕ್ ಡೌನ್ ಮಧ್ಯೆಯೂ ಹವ್ಯಾಸಗಳು, ಯೋಗ, ಧ್ಯಾನ, ಕ್ರೀಡೆ ಮೊದಲಾದ ಚಟುವಟಿಕೆಗಳ ಸಹಾಯದಿಂದ ಕ್ರಿಯಾಶೀಲವಾಗಿರಲು ಸಾಧ್ಯವಿದೆ. ಒತ್ತಡ, ಭೀತಿಗೊಳಗಾದವರಿಗೆ, ಖನ್ನತೆಯಿಂದ ಬಳಲುತ್ತಿರುವವರಿಗೆ ಹೆಲ್ಪ್ಲೈನ್ ವರದಾನವಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾನಸಿಕ ಸಂದೇಹ ನಿವಾರಿಸಲು ಮುಂದಾಗಿರುವ ಡಿಮ್ಹಾನ್ಸ್ ಕಾರ್ಯ ಶ್ಲಾಘನೀಯವಾಗಿದೆ.
ಜಿಲ್ಲಾಡಳಿತದ ಸಹಕಾರದೊಂದಿಗೆ ಡಿಮ್ಹಾನ್ಸ್ ಆರಂಭಿಸಿರುವ ಹೆಲ್ಪ್ಲೈನ್‌ನಿಂದ ಸಾಕಷ್ಟು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಕೋವಿಡ್-19 ಕುರಿತಾದ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳುತ್ತಿದ್ದಾರೆ. ಡಿಮ್ಹಾನ್ಸ್‌ನಿಂದ ಶೀಘ್ರ ವಿಡಿಯೋ ಕಾನ್ಫರೆನ್ಸ್ ಸೇವೆ ಆರಂಭಿಸಲಾಗುವುದು. ಇದು ರೋಗಿಗಳ ಸಂದೇಹ ನಿವಾರಣೆಗೆ ಪೂರಕವಾಗುವ ಭರವಸೆಯಿದೆ. ಕೋವಿಡ್-19 ಬಗ್ಗೆ ಜನರು ಆತಂಕಗೊಳ್ಳದೇ ವೈದ್ಯರು ನೀಡಿದ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಬೇಕು. – ಡಾ| ಮಹೇಶ ದೇಸಾಯಿ, ಡಿಮ್ಹಾನ್ಸ್ ನಿರ್ದೇಶಕರು
-ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.