ಚಿಟಗುಪ್ಪಿ ಆಸ್ಪತ್ರೇಲಿ ಮೆಡಿಕಲ್ ವೆಂಡಿಂಗ್‌ ಯಂತ್ರ

| ಉಕ ಸರ್ಕಾರಿ ಆಸ್ಪತ್ರೆಗಳಲ್ಲೇ ಮೊದಲು | ಕ್ಯೂಆರ್‌ ಕೋಡ್‌ ಬಳಸಿ ಕಾರ್ಯ| ರೋಗಿಗಳಿಗೆ ಅನುಕೂಲ-24 ಗಂಟೆ ಔಷಧ

Team Udayavani, Jul 26, 2019, 7:52 AM IST

hubali-tdy-1

ಹುಬ್ಬಳ್ಳಿ: ಚಿಟಗುಪ್ಪಿ ಆಸ್ಪತ್ರೆಯಲ್ಲಿ ಅಳವಡಿಸಲಾಗುವ ಕೇರ್‌ನೇಷನ್‌ ಮೆಡಿಕಲ್ ವೆಂಡಿಂಗ್‌ ಮಶಿನ್‌.

ಹುಬ್ಬಳ್ಳಿ: ರೋಗಿಗಳ ಅನುಕೂಲಕ್ಕಾಗಿ ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಮೆಡಿಕಲ್ ವೆಂಡಿಂಗ್‌ ಮಶಿನ್‌ ಅಳವಡಿಸಲಾಗುತ್ತಿದ್ದು, ಇದು ಉತ್ತರ ಕರ್ನಾಟಕದ ಸರಕಾರಿ ಆಸ್ಪತ್ರೆಯಲ್ಲಿ ಅಳವಡಿಸಿದ ಮೊದಲ ವೆಂಡಿಂಗ್‌ ಯಂತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದ ಭಾಗವಾಗಿ ಯಂತ್ರ ಅಳವಡಿಸಲಾಗುತ್ತಿದೆ.

ಈಗಾಗಲೇ ಆಸ್ಪತ್ರೆಯಲ್ಲಿ ಯಂತ್ರ ಅಳವಡಿಕೆ ಕಾರ್ಯ ನಡೆದಿದ್ದು, ಜಿಲ್ಲಾಧಿಕಾರಿ ದೀಪಾ ಚೋಳನ್‌ ಯಂತ್ರದ ಕಾರ್ಯ ಪರಿಶೀಲಿಸಿದ್ದಾರೆ. ಸೆಪ್ಟೆಂಬರ್‌ ಕೊನೆ ವಾರದಲ್ಲಿ ಇದು ಕಾರ್ಯಾರಂಭ ಮಾಡಲಿದೆ.

ಏನಿದು ಮೆಡಿಕಲ್ ವೆಂಡಿಂಗ್‌ ಯಂತ್ರ: ಎಟಿಎಂನಿಂದ ಹಣ ಪಡೆದಷ್ಟೇ ಸುಲಭವಾಗಿ ವೆಂಡಿಂಗ್‌ ಯಂತ್ರದಿಂದ ವೈದ್ಯರು ಸೂಚಿಸಿದ ಔಷಧವನ್ನು ಪಡೆಯಬಹುದು. ಆಸ್ಪತ್ರೆ ವೈದ್ಯರು ಡಿಜಿಟಲ್ ರೂಪದಲ್ಲಿ ಔಷಧ ನಮೂದಿಸಲಿದ್ದು, ಕ್ಯೂಆರ್‌ ಕೋಡ್‌ ಹೊಂದಿರುವ ವೈದ್ಯರ ಚೀಟಿಯಿಂದ ಔಷಧ ತರಿಸಿಕೊಳ್ಳಬಹುದು. ಆನ್‌ಲೈನ್‌ ಮೂಲಕ ಮೆಡಿಕಲ್ ಶಾಪ್‌ಗ್ಳಲ್ಲಿ ವೈದ್ಯರು ಬರೆದ ಔಷಧಗಳನ್ನು ತ್ವರಿತವಾಗಿ ಪಡೆಯಬಹುದಾಗಿದೆ. ಎಲ್ಲ ಔಷಧಿಗಳು ಒಂದೇ ಮೆಡಿಕಲ್ ಶಾಪ್‌ನಲ್ಲಿ ಸಿಗುವುದಿಲ್ಲ. ಆದ್ದರಿಂದ ಇದು ಔಷಧಿಗಳನ್ನು ತೀವ್ರಗತಿಯಲ್ಲಿ ಪಡೆಯಲು ಪೂರಕವಾಗಿದೆ.

ಆಸ್ಪತ್ರೆಗೆ ಬರುವವರಲ್ಲಿ ಹೆಚ್ಚಿನವರು ಬಡಜನರು. ಅವರಿಗೆ ಆನ್‌ಲೈನ್‌ ಮೂಲಕ ಔಷಧಗಳನ್ನು ತರಿಸಿಕೊಳ್ಳಲು ಆಗುವುದಿಲ್ಲ. ಇದರ ನೆರವಿನಿಂದ ತ್ವರಿತಗತಿಯಲ್ಲಿ ಎಲ್ಲ ಔಷಧಗಳನ್ನು ಪಡೆಯಬಹುದಾಗಿದೆ. ಸುಮಾರು 64ಕ್ಕೂ ಹೆಚ್ಚು ಬಗೆಯ ಔಷಧಗಳನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಶುದ್ಧೀಕರಿಸಿದ ನೀರಿನ ಬಾಟಲ್, ಸ್ಯಾನಿಟರಿ ಪ್ಯಾಡ್‌ ಕೂಡ ತರಿಸಿಕೊಳ್ಳಬಹುದಾಗಿದೆ.

ಏನಿದರ ಪ್ರಯೋಜನ?: ಕೇರ್‌ನೇಷನ್‌ ಮೆಡಿಕಲ್ ವೆಂಡಿಂಗ್‌ ಮಶಿನ್‌ ಯಂತ್ರದಿಂದ 24 ಗಂಟೆಗಳ ಕಾಲವೂ ಔಷಧ ಪಡೆದುಕೊಳ್ಳಬಹುದು. ಫಾರ್ಮಸಿ ರಾತ್ರಿ ವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ತಡರಾತ್ರಿ ಯಾವುದಾದರೂ ಔಷಧ ಬೇಕಾದರೆ ತಡಕಾಡುವ ಅವಶ್ಯಕತೆಯಿಲ್ಲ. ರೋಗಿಗಳಿಗೆ ಒಂದು ಕ್ಯುಆರ್‌ ಕೋಡ್‌ ನೀಡಲಾಗುತ್ತದೆ. ಅದರ ಆಧಾರದ ಮೇಲೆ ವೈದ್ಯರು ನೀಡಿದ ಚೀಟಿಯ ಮೂಲಕ ಔಷಧ ತರಿಸಿಕೊಳ್ಳಬಹುದಾಗಿದೆ. ಇಲ್ಲವೇ ರೋಗಿಗಳ ಸಂಬಂಧಿಕರು ಎಲ್ಲ ಔಷಧಿಗಳು ಸಿಗುವ ಮೆಡಿಕಲ್ ಶಾಪ್‌ಗೆ ಹೋಗಿ ತರಬಹುದು.

ಫಾರ್ಮಾಸಿಸ್ಟ್‌ ಹಗಲಿರುಳು ಇರಬೇಕಾದ ಅವಶ್ಯಕತೆಯಿಲ್ಲ. ಕ್ಯೂಆರ್‌ ಕೋಡ್‌ ತೋರಿಸಿದ ತಕ್ಷಣ ಅವಶ್ಯಕವಿರುವ ಔಷಧಿಗೆ ಎಷ್ಟು ಹಣ ತಗಲುತ್ತದೆ ಎಂಬ ಬಗ್ಗೆ ಮಾಹಿತಿ ಬರುತ್ತದೆ. ಹಣವನ್ನು ನಗದು ರೂಪದಲ್ಲಿ, ಎಟಿಎಂ ಮೂಲಕ ಇಲ್ಲವೇ ರೂಪೇ, ಪೇಟಿಎಂ ಕಾರ್ಡ್‌ಗಳ ಮೂಲಕ ಡಿಜಿಟಲ್ ರೂಪದಲ್ಲಿಯೂ ಪಾವತಿಸಬಹುದು. ವೈದ್ಯರು ಹೊರಗೆ ಬರೆದುಕೊಡುವ ಔಷಧಿಗಳನ್ನು ಇಲ್ಲಿ ಪಡೆದುಕೊಳ್ಳಬಹುದು.

ವೆಂಡಿಂಗ್‌ ಯಂತ್ರದಲ್ಲಿರುವ ಔಷಧಿಗಳ ಸ್ಟಾಕ್‌ ಬಗ್ಗೆಯೂ ಮಾಹಿತಿ ಲಭ್ಯವಾಗುವುದರಿಂದ ಎಲ್ಲ ಔಷಧಿಗಳು ತ್ವರಿತವಾಗಿ ಸಿಗುತ್ತವೆ. ಇದು ಚಿಕಿತ್ಸೆಗೆ ಪೂರಕವಾಗಲಿದೆ.

ಜನಾನುಕೂಲ ಪರಿಗಣಿಸಿ ಬೇರೆ ಸರಕಾರಿ ಆಸ್ಪತ್ರೆಗಳಲ್ಲಿಯೂ ಸೇವೆ ಒದಗಿಸುವ ಕುರಿತು ನಿರ್ಧರಿಸಲಾಗುವುದು. ಆನ್‌ಲೈನ್‌ ಮೂಲಕ ಔಷಧ ಒದಗಿಸುವ ಸೌಲಭ್ಯ ಇದಾಗಿದೆ. ಮೆಡಿಕಲ್ ಶಾಪ್‌ಗ್ಳಲ್ಲದೇ ಆನ್‌ಲೈನ್‌ ಮೆಡಿಸಿನ್‌ ಒದಗಿಸುವ ಸಂಸ್ಥೆಗಳಿಂದ ಕೂಡ ಔಷಧ ತರಿಸಿಕೊಡಲಾಗುವುದು. ವೈದ್ಯರು ಬರೆದ ಔಷಧವನ್ನು ತಪ್ಪಾಗಿ ಅರ್ಥೈಸಿಕೊಂಡು ಮೆಡಿಕಲ್ ಶಾಪ್‌ನವರು ಬೇರೆ ಔಷಧ ಕೊಡುವ ಪ್ರಮೇಯ ಇರುವುದಿಲ್ಲ. • ಎಸ್‌.ಎಚ್. ನರೇಗಲ್, ಸ್ಮಾರ್ಟ್‌ಸಿಟಿ ಯೋಜನೆ ವಿಶೇಷಾಧಿಕಾರಿ
ಯಂತ್ರದ ವಿಶೇಷತೆ:
24 ಇಂಚ್ ಅಗಲದ ಟಚ್ ಸ್ಕ್ರೀನ್‌ ಇದೆ. ಕನ್ನಡ ಹಾಗೂ ಇಂಗ್ಲಿಷ್‌ ಭಾಷೆ ಮೂಲಕ ಸಂವಹನ ವ್ಯವಸ್ಥೆಯಿದೆ. ಕ್ಯೂಆರ್‌ ಕೋಡ್‌ ಮೂಲಕ ಕಾರ್ಯ ನಿರ್ವಹಿಸುತ್ತದೆ. ನೈನ್‌ರಿಚ್ ಇನ್‌ಫೂಟೆಕ್‌, ಎಸ್‌ಎಚ್ಆರ್‌ಎಲ್ ಟೆಕ್ನೊಸಾಫ್ಟ್‌ ಪ್ರೈವೇಟ್ ಲಿಮಿಟೆಡ್‌, ಟೆಸ್ಲಾನ್‌ ಪ್ರೈವೇಟ್ ಲಿಮಿಟೆಡ್‌ ವತಿಯಿಂದ ಯಂತ್ರವನ್ನು ಅಳವಡಿಸಲಾಗುತ್ತಿದೆ. ಇದರ ನಿರ್ವಹಣೆಯನ್ನು ಸಂಸ್ಥೆಗಳು ಮಾಡಲಿವೆ.
ಕಳೆದ ವರ್ಷ ಆಂಧ್ರದಲ್ಲಿ ಜಾರಿ:
ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಕಳೆದ ವರ್ಷ ಸರಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ವೆಂಡಿಂಗ್‌ ಮಶಿನ್‌ ಅಳವಡಿಕೆಗೆ ಚಾಲನೆ ನೀಡಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಸಾಕಷ್ಟು ಜನರಿಗೆ ಅನುಕೂಲವಾಗಿದ್ದರಿಂದ ಅಲ್ಪಾವಧಿಯಲ್ಲಿ ಯೋಜನೆಯನ್ನು ಹಲವು ಸರಕಾರಿ ಆಸ್ಪತ್ರೆಗಳಿಗೆ ವಿತರಿಸಲಾಗಿದೆ.
•ವಿಶ್ವನಾಥ ಕೋಟಿ

ಟಾಪ್ ನ್ಯೂಸ್

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.