ಕಡು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಮೆಂಡಾ ಫೌಂಡೇಶನ್‌ ಸಂಜೀವಿನಿ


Team Udayavani, May 31, 2017, 3:16 PM IST

hub2.jpg

ಹುಬ್ಬಳ್ಳಿ: “ದೇಶ ವಿಭಜನೆಯಾದಾಗ ಬರಿಗೈಯಿಂದ ನಿರಾಶ್ರಿತವಾಗಿ ನಮ್ಮ ಕುಟುಂಬ ದೇಶಕ್ಕೆ ಬಂತು. ನಾನು ಸ್ಕಾಲರ್‌ ಶಿಪ್‌ ಹಣದಲ್ಲೇ ಓದಿದ ಆ ಕಷ್ಟದ ಸ್ಥಿತಿ ಹೇಳತೀರದು. ಅಂತಹ ಕಷ್ಟ ವಿದ್ಯಾರ್ಥಿಗಳಿಗೆ ಬಾರದಿರಲಿ ಎಂದು ಶೈಕ್ಷಣಿಕ ನೆರವಿಗಾಗಿ ವಾರ್ಷಿಕ 5 ಕೋಟಿ ರೂ. ವ್ಯಯಿಸುತ್ತಿರುವೆ. 

ಮುಂದಿನ ದಿನಗಳಲ್ಲಿ ಅತ್ಯುತ್ತಮ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ ಉದ್ದೇಶ ಹೊಂದಿದ್ದೇನೆ’ ಅಂದು ಒಂದೊಂದು ರೂಪಾಯಿಗೂ ಪರದಾಡಿದ್ದ ನನಗೆ, ಶೈಕ್ಷಣಿಕ ಹಂಬಲದ ಕಡು ಬಡ ಮಕ್ಕಳಿಗೆ ಆರ್ಥಿಕ ಹೊರೆ ಸಂಕಷ್ಟ ಎಂತಹದ್ದು ಎಂಬುದು ಸ್ಪಷ್ಟ ಪರಿಚಯವಿದೆ. ಇದಕ್ಕಾಗಿಯೇ ನನ್ನ ಕುಟುಂಬದ ಆರ್‌ಎನ್‌ರkುಡ್‌ ಕಾರ್ಪೋರೇಶನ್‌ನಿಂದ ಬರುವ ಆದಾಯವನ್ನು ಶೈಕ್ಷಣಿಕ ನೆರವಿಗೆ ಬಳಸುತ್ತಿರುವೆ.

ಇದು ಬೆಂಗಳೂರಿನ ಮೆಂಡಾ ಫೌಂಡೇಶನ್‌ ಮುಖ್ಯಸ್ಥ ಅರ್ಜುನ ಮೆಂಡಾ ಅವರ ಮನದಾಳದ ಮಾತು. ದೇಶ ವಿಭಜನೆ ಕಾಲಕ್ಕೆ ಪಾಕಿಸ್ತಾನದಿಂದ ಬಂದಿದ್ದು, ಶಿಕ್ಷಣಕ್ಕೆ ಪಟ್ಟ ಕಷ್ಟ, ಬೆಂಗಳೂರಿನಲ್ಲಿ ನೆಲೆ ನಿಂತು ಕಟ್ಟಡ ಉದ್ಯಮ ಕಟ್ಟಿದ್ದು, ಮೆಂಡಾ ಫೌಂಡೇಶನ್‌ ಸ್ಥಾಪನೆ ಹಾಗೂ ಅದರ ಉದ್ದೇಶ ಕುರಿತಾಗಿ ಅರ್ಜುನ ಮೆಂಡಾ “ಉದಯವಾಣಿ’ ಯೊಂದಿಗೆ ಮಾತನಾಡಿದರು.

ನಾ ಪಟ್ಟ ಕಷ್ಟವೇ ಸೇವೆಗೆ ಪ್ರೇರಣೆ: ಬಡತನ ಕಾರಣಕ್ಕೆ ಸ್ಕಾಲರ್‌ಶಿಪ್‌ ಹಣದಲ್ಲೇ ಓದು ಮುಂದುವರಿಸಿದ ನಾನು ನಂತರ ಐಐಟಿ ಖರಕ್‌ಪುರದಲ್ಲಿ ಪದವಿ ಪಡೆದೆ. 1967ರಲ್ಲಿ ಬೆಂಗಳೂರಿನಲ್ಲಿ ನಮ್ಮ ಕುಟುಂಬ ನೆಲೆ ನಿಂತಿತಲ್ಲದೆ, ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತೊಡಗಿಕೊಂಡಿತು.

ವ್ಯಾಸಂಗಕ್ಕೆ ನಾನು ಪಟ್ಟ ಕಷ್ಟವೇ ಇಂದಿನ ಸಾಮಾಜಿಕ ಸೇವಾ ಕಾರ್ಯಕ್ಕೆ ಪ್ರೇರಣೆ. ಅದೆಷ್ಟೋ ಪ್ರತಿಭೆಗಳು ಕೇವಲ ಆರ್ಥಿಕ ಕಾರಣಕ್ಕಾಗಿ ಅರಳುವ ಮೊದಲೇ ಕಮರುತ್ತವೆ. ಇಂತಹ ಪ್ರತಿಭೆ ಅರಳಬೇಕು, ಇದರ ಲಾಭ ಸಮಾಜ- ದೇಶಕ್ಕೆ ದೊರೆಯಬೇಕೆಂಬ ಏಕೈಕ ಉದ್ದೇಶದಿಂದ ಮೆಂಡಾ ಫೌಂಡೇಶನ್‌ ಶೈಕ್ಷಣಿಕ ಸೇವಾ  ಕಾರ್ಯದಲ್ಲಿ ತೊಡಗಿದೆ.

1.6ಲಕ್ಷ ಮಕ್ಕಳಿಗೆ ಇ-ಶಾಲೆ ಸೌಲಭ್ಯ: ಇಂದಿನ ಮಕ್ಕಳಿಗೆ ಅದರಲ್ಲೂ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನ ಅತ್ಯಂತ ಕಠಿಣ ವಿಷಯಗಳಾಗಿದ್ದು, ಇವುಗಳ ಮನನಕ್ಕೆ ಇ-ಶಾಲೆ ಯೋಜನೆ ಆರಂಭಿಸಲಾಗಿದೆ. 5ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಇ-ಶಾಲೆ ಸೌಲಭ್ಯ ದೊರೆಯುತ್ತಿದೆ. ಡಿಜಿಟಲ್‌ ನೆರವಿನೊಂದಿಗೆ ಮೂರು ವಿಷಯ ಮನದಟ್ಟು ಮಾಡಲಾಗುತ್ತಿದೆ.

 ಜತೆಗೆ ಕನ್ನಡ ಹಾಗೂ ಇಂಗ್ಲಿಷ್‌ ಸ್ಪೀಕಿಂಗ್‌ ಕೋರ್ಸ್‌ ಕಲಿಸಲಾಗುತ್ತಿದೆ. ಶಾಲೆಗೆ ಟಿ.ವಿ., ಪ್ರೊಜೆಕ್ಟರ್‌, ಸಾಫ್ಟ್ವೇರ್‌ ನೀಡಲಾಗುತ್ತದೆ. ಈಗಾಗಲೇ ಸುಮಾರು 900 ಶಾಲೆಗಳಲ್ಲಿ ಅಂದಾಜು 1.60ಲಕ್ಷ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಸೆಲ್ಕೋ ಕಂಪೆನಿ ಸಾಮಾಜಿಕ ಸೇವಾ ಯೋಜನೆ ವಿಭಾಗದ ಸಹಯೋಗದೊಂದಿಗೆ ಇದನ್ನು ಕೈಗೊಳ್ಳಲಾಗುತ್ತಿದೆ. 

ಪ್ರತಿ ವರ್ಷ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಇನ್ನಿತರ ವೃತ್ತಿ ಶಿಕ್ಷಣದ ಸುಮಾರು 750 ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್‌ ನೀಡಲಾಗುತ್ತದೆ. ಶೈಕ್ಷಣಿಕ ಸೌಲಭ್ಯ ನೀಡಿಕೆಗೆ ಯೋಜನೆಯ ಶೇ.50ರಷ್ಟು ಪಾಲನ್ನು ಫೌಂಡೇಶನ್‌ ನೀಡುತ್ತದೆ. ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಯೋಜನೆಯ ಸಮರ್ಪಕ, ಗುಣಮಟ್ಟದ ಅನುಷ್ಠಾನ ನಿಟ್ಟಿನಲ್ಲಿ ಇಂತಹ ಕ್ರಮಕ್ಕೆ ಮುಂದಾಗಿದೆ. ಯಾರಿಗೆ ಅಗತ್ಯವಿದೆಯೋ, ಅವರ ಬೇಡಿಕೆ ಅರ್ಹತೆ ಆಧರಿಸಿ ನೆರವಿನ ಹಸ್ತ ಚಾಚಲಾಗುತ್ತದೆ. 

2 ಸಾವಿರ ಜನರಿಗೆ ಕೌಶಲ ತರಬೇತಿ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಆರಂಭಿಸುವ ಚಿಂತನೆ ಇದೆ. ಈಗಾಗಲೇ ಕಟ್ಟಡ ಉದ್ಯಮಕ್ಕೆ ಪೂರಕವಾಗಿ ವಿವಿಧ ವೃತ್ತಿಗಳ ಕೌಶಲ  ಅಭಿವೃದ್ಧಿ ನಿಟ್ಟಿನಲ್ಲಿ ಸುಮಾರು 2 ಸಾವಿರ ಜನರಿಗೆ ತರಬೇತಿ ನೀಡಲಾಗಿದೆ. 

ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಜನರು ಮಹಾನಗರಗಳಿಗೆ ವಲಸೆ ಬರುತ್ತಿದ್ದು, ಅವರೆಲ್ಲ ಹೆಚ್ಚಾಗಿ ಕಟ್ಟಡ ಕಾಮಗಾರಿಗಳಲ್ಲೇ ತೊಡಗಿಕೊಳ್ಳುತ್ತಾರೆ. ಅವರಿಗ್ಯಾರಿಗೂ ವೃತ್ತಿ ಕೌಶಲ ಇರುವುದಿಲ್ಲ. ಇದನ್ನು ಮನಗಂಡು ಕೌಶಲಯುತ ಮಾನವ ಸಂಪನ್ಮೂಲ ರೂಪಿಸಲು ಫೌಂಡೇಶನ್‌ ಮುಂದಾಗಿದೆ ಎಂದರು. 

* ಅಮರೇಗೌಡ ಗೋನವಾರ

ಟಾಪ್ ನ್ಯೂಸ್

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.