ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಿಂದ ತುಷ್ಟೀಕರಣ ರಾಜಕಾರಣ: ಪ್ರಹ್ಲಾದ್ ಜೋಶಿ ವಾಗ್ದಾಳಿ
Team Udayavani, Oct 1, 2021, 4:26 PM IST
ಧಾರವಾಡ: ಮತಾಂತರ ಹಣದ ಆಸೆ, ಮೋಸ, ಒತ್ತಾಯದಿಂದ ನಡೆಯುತ್ತಿದೆ. ಮುಗ್ದ ಜನರನ್ನು ತಪ್ಪು ದಾರಿಗೆ ಎಳೆದು ಮತಾಂತರ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ಬಗ್ಗೆ ಬಗ್ಗೆ ಯಾವುದೇ ಅನುಮಾನ ಇಲ್ಲ. ಹಿಂದೂಗಳ ಬೇರೆ ಜಾತಿಗೆ ಮತಾಂತರ ನಡೆಯುತ್ತಿದ್ದು, ಇದು ನಿಲ್ಲಬೇಕು. ಇದಕ್ಕೆ ಅಗತ್ಯವಾದ ಕಾನೂನು ತಿದ್ದುಪಡಿ ರಾಜ್ಯ ಸರ್ಕಾರ ಮಾಡಬೇಕು. ಜೊತೆಗೆ ಇದನ್ನು ತಡೆಯಲು ಸರ್ವ ರೀತಿಯ ಪ್ರಯತ್ನವೂ ಆಗಬೇಕು ಎಂದರು.
ಭಯೋತ್ಪಾದಕರು ಸತ್ತಾಗ ಸೋನಿಯಾ ಅತ್ತಿದ್ದರು: ಭಯೋತ್ಪಾದಕರು ಸತ್ತಾಗ ಸೋನಿಯಾ ಗಾಂಧಿ ಅತ್ತಿದ್ದರು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತದೆ. ಹಿಂದೆ ಬಾಟ್ಲಾ ಶೂಟ್ ಪ್ರಕರಣ ಆಗಿತ್ತು. ಆಗ ಮೋಹನ ಚಂದ್ರ ಶರ್ಮಾ ಸತ್ತಿದ್ದರು. ಆಗ ಸೋನಿಯಾ ಅವರು ಶರ್ಮಾ ಸತ್ತಿದ್ದಕ್ಕೆ ಅತ್ತಿರಲಿಲ್ಲ. ಆದರೆ, ಅಲ್ಲಿ ಟೆರರಿಸ್ಟ್ ಸತ್ತಿದ್ದಕ್ಕೆ ಸೋನಿಯಾ ಗಾಂಧಿ ಅತ್ತಿದ್ದರು. ಇವರ ಸಹಜ ಸ್ವಭಾವವೇ ಇದು ಎಂದರು.
ಇದನ್ನೂ ಓದಿ:ಅದಾನಿ ಮುಂದ್ರಾ ಬಂದರು ಡ್ರಗ್ ಪತ್ತೆ ಪ್ರಕರಣದಲ್ಲಿ ಬಿಜೆಪಿ ಮೌನವೇಕೆ: ಸುಪ್ರಿಯಾ ಶ್ರೀನೆಟ್
ಮುಸ್ಲಿಂ ತುಷ್ಟೀಕರಣಕ್ಕಾಗಿ ಸಿದ್ದರಾಮಯ್ಯ ಈ ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯಗೆ ಆರ್.ಎಸ್.ಎಸ್ ಅಂದರೆ ಏನು ಗೊತ್ತು?. ಮತ ಬ್ಯಾಂಕ್ ರಾಜಕಾರಣಕ್ಕೆ ಹೀಗೆ ಹೇಳಿಕೆ ನೀಡುತ್ತಾರೆ. ಹಿಂದೆ ರಾಮ ಜನ್ಮಭೂಮಿ ವಿರೋಧ ಮಾಡಿದ್ದರು. ಮುಸ್ಲಿಂ ಮಹಿಳೆಯ ಜೀವನಾಂಶ ವಿಷಯಕ್ಕೂ ವಿರೋಧ ಮಾಡಿದ್ದರು. ಇದೆಲ್ಲದರಿಂದ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ. ಇವರು ಸುಧಾರಿಸಬೇಕು, ಇಲ್ಲದಿದ್ದಲ್ಲಿ ಜನ ಇನ್ನೂ ದಾರಿ ತೋರಿಸ್ತಾರೆ. ದೇಶದ ಜನಕ್ಕೆ ಆರ್‌ಎಸ್ಎಸ್, ಬಿಜೆಪಿ ಏನಂತ ಗೊತ್ತಿದೆ. ಸಿದ್ದರಾಮಯ್ಯ ಆ ಬಗ್ಗೆ ಹೇಳಬೇಕಿಲ್ಲ. ಅವರೊಬ್ಬ ಗೌರವಾನ್ವಿತ ನಾಯಕ. ವೈಯಕ್ತಿಕವಾಗಿ ಅವರ ಬಗ್ಗೆ ನನಗೂ ಗೌರವ ಇದೆ. ಆದರೆ ಮಾತನಾಡುವಾಗ ಇತಿ ಮೀತಿ ಇರಬೇಕು. ನಾವು ಕಾಂಗ್ರೆಸ್‌ನವರಿಗೆ ಐಎಸ್‌ಐ ಏಜೆಂಟ್ ಅಂದರೆ ಏನ ಮಾಡ್ತಾರೆ. ಆ ರೀತಿ ಮಾತನಾಡುವುದು ಸರಿಯಲ್ಲ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಸಂಜಯ ಪಾಟೀಲ ಹೇಳಿಕೆ ಸಮರ್ಥನೀಯವಲ್ಲ. ನಾನು ಅವರಿಗೆ ವೈಯಕ್ತಿಕವಾಗಿ ತಿಳಿ ಹೇಳುವೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶನಿವಾರ ಬೆಳಗಾವಿಗೆ ಹೊರಟಿರುವೆ. ಅಲ್ಲಿ ಮಾತನಾಡುವೆ. ಈ ರೀತಿ ಮಾತನಾಡುವುದು ಸರಿಯಲ್ಲ. ಆ ರೀತಿ ಮಾತನಾಡಬಾರದು. ಕಾಂಗ್ರೆಸ್ ಪಕ್ಷದವರು ಸಹ ಬೇರೆ ಬೇರೆಯವರ ಬಗ್ಗೆ ಮಾತನಾಡಿದ್ದಾರೆ. ಆಗ ಆ ಪಕ್ಷದವರ ಪ್ರತಿಕ್ರಿಯೆ ಹೇಗಿತ್ತು? ಲಕ್ಷ್ಮೀ ಹೆಬ್ಹಾಳಕರ ಬಗ್ಗೆ ಮಾತನಾಡಬಾರದು. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ನರೇಂದ್ರ ಮೋದಿ ಬಗ್ಗೆ ಇವರು ಯಾವ ರೀತಿ ಮಾತನಾಡಿದ್ದರು. ದೇಶದ ಪ್ರಧಾನಿ ಬಗ್ಗೆಯೇ ಮಾತನಾಡಿದ್ದರು, ಆದರೆ ಆಗ ನಾವು ಸಂಜಯ್ ಪಾಟೀಲರಿಗೆ ಹೇಳಿದಂತೆ ಕಾಂಗ್ರೆಸ್‌ನವರು ಹೇಳಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಂಸ್ಕೃತಿ ಇರುವ ನಾಯಕರಿಲ್ಲ. ನಮ್ಮ ಪಕ್ಷದಲ್ಲಿ ಸಂಸ್ಕೃತಿ ಇದೆ. ಹೀಗಾಗಿ ಹೇಳುವೆ ಲಕ್ಷ್ಮೀ ಹೆಬ್ಬಾಳಕರ ಜನ ಆಯ್ಕೆ ಮಾಡಿದ ಶಾಸಕರು. ಹೀಗಾಗಿ ಅವರಿಗೆ ಗೌರವ ಕೊಡಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.