ನವ್ಯತಾಗೆ ಮಿಸ್ ಧಾರವಾಡ ಕಿರೀಟ
Team Udayavani, Nov 6, 2017, 12:31 PM IST
ಧಾರವಾಡ: ರೌಂಡ್ ಟೇಬಲ್ ಇಂಡಿಯಾ ಸಂಸ್ಥೆಯು ನಗರದಲ್ಲಿ ಆಯೋಜಿಸಿದ್ದ ಮಿಸ್ ಧಾರವಾಡ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ನವ್ಯತಾ ರೈ ಮಿಸ್ ಧಾರವಾಡ ಆಗಿ ಹೊರ ಹೊಮ್ಮಿದರು. ಮೊದಲ ರನ್ನರ್ ಅಪ್ ಆಗಿ ಜ್ಯೋತಿ ಪವಾರ್, 2ನೇ ರನ್ನರ್ ಅಪ್ ಆಗಿ ಶ್ರದ್ಧಾ ದಾಮೋದರ್ ಆಯ್ಕೆಯಾದರು. ಅಂತಿಮ ಸುತ್ತಿನಲ್ಲಿ 32 ಯುವ ರೂಪದರ್ಶಿಯರು ಪಾಲ್ಗೊಂಡಿದ್ದರು.
ಪರೀಕ್ಷೆಗಳ ಪ್ರತಿಯೊಂದು ಸುತ್ತಿನಲ್ಲೂ ರೂಪದರ್ಶಿಯರು ತಮ್ಮ ಸೌಂದರ್ಯವನ್ನು ಮಾರ್ಜಾಲ ನಡಿಗೆಯ ಮೂಲಕ ಪ್ರದರ್ಶಿಸಿದರು. ಮೊದಲ ಸುತ್ತಿನಲ್ಲಿ ರ್ಯಾಂಪ್ ತುಳಿದ ರೂಪದರ್ಶಿಯರಲ್ಲಿ ಮುಂದಿನ ಸುತ್ತಿಗೆ 10 ಸ್ಪರ್ಧಿಗಳನ್ನು ಆಯ್ಕೆ ಮಾಡಬೇಕಿತ್ತು. ಆದರೆ ಅಂಕಗಳು ಸಮಾನಾದ ಕಾರಣ ಹೆಚ್ಚುವರಿ ಇಬ್ಬರು ರೂಪದರ್ಶಿಯರನ್ನು ಆಯ್ಕೆ ಮಾಡಲಾಯಿತು.
ಅಂತಿಮ ಆಯ್ಕೆಗಾಗಿ ಹಲವು ಸುತ್ತುಗಳ ಪರೀಕ್ಷೆಯ ಬಳಿಕ ವಿಜೇತರ ಪಟ್ಟಿ ಘೋಷಿಸಲಾಯಿತು. ರೂಪದರ್ಶಿ ಪ್ರತಿಭಾ ಸಂಶಿಮಠ, ಮಲ್ಲಿಕಾರ್ಜುನ ಪಾಟೀಲ ನಿರ್ಣಾಯಕರಾಗಿ ಆಗಮಿಸಿದ್ದರು. ಪ್ರತಿ ಸುತ್ತಿನ ನಂತರವೂ ವಿವಿಧ ತಂಡಗಳಿಂದ ನೃತ್ಯ ಪ್ರದರ್ಶಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.