ಮೋದಿಗೆ ಆದ್ಯತಾ ಕಾರ್ಯ ನೆನಪು
Team Udayavani, May 24, 2019, 10:08 AM IST
ಧಾರವಾಡ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವುದಕ್ಕೆ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ವಿ. ದೇಶಪಾಂಡೆ ಅವರು ಕೇಂದ್ರದಲ್ಲಿ ಬರುವ ನೂತನ ಸರ್ಕಾರ ಕೈಗೊಳ್ಳಬೇಕಾದ ಕೆಲ ಆದ್ಯತಾ ಕೆಲಸಗಳ ಬಗ್ಗೆ ಗಮನ ಸೆಳೆದಿದ್ದಾರೆ.
ಈ ಬಗ್ಗೆ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಚಿವರು, ಕೈಗಾರಿಕಾ ಉತ್ಪಾದನೆ ದೇಶದ ಜಿಡಿಪಿಯಲ್ಲಿ ಶೇ.30 ಪಾಲು ಹೊಂದಿದ್ದು, ಇತ್ತೀಚಿನ ವರ್ಷಗಳಲ್ಲಿ ತಯಾರಿಕಾ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರ ಫಲವಾಗಿ ದೇಶದಲ್ಲಿ ಯುವ ಜನರಿಗೆ ಉದ್ಯೋಗವಿಲ್ಲದಂತಾಗಿ ದೇಶದ ಆರ್ಥಿಕ ಅಭಿವೃದ್ಧಿಗೂ ಮಾರಕವಾಗಿ ಪರಿಣಮಿಸಿ ಜಿಡಿಪಿ ನಿರೀಕ್ಷಿತ ಬೆಳವಣಿಗೆ ತಲುಪಿಲ್ಲ ಎಂದು ಹೇಳಿದ್ದಾರೆ.
ದೇಶದ ನಿರುದ್ಯೋಗ ದರ ಶೇ.6.1 ಇದ್ದು, ಇದು ಕಳೆದ 4 ದಶಕಗಳಲ್ಲೇ ಅತ್ಯಧಿಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಯಾರಿಕಾ ವಲಯದ ಜವಳಿ, ಆಟಿಕೆಗಳು, ಸೇವಾ ವಲಯ, ಇತ್ಯಾದಿ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಆದ್ಯತೆ ನೀಡುವುದರ ಜೊತೆಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ನೂತನ ಯೋಜನೆಗಳನ್ನು ಜಾರಿ ಮಾಡುವುದು ಅತ್ಯವಶ್ಯಕವಾಗಿರುತ್ತದೆ. ತಾಂತ್ರಿಕತೆಯು ನಿರುದ್ಯೋಗ ಸಮಸ್ಯೆಗೆ ಮೂಲ ಕಾರಣವಾದರೂ ಹಳೆಯ ಶ್ರಮಿಕ ಕೌಶಲ್ಯ ಬಲಕ್ಕೆ ಆಧುನಿಕ ಕೌಶಲ್ಯವನ್ನು ಅಳವಡಿಸುವುದು ಇಂದಿನ ತುರ್ತು ಅಗತ್ಯ. ಅಲ್ಲದೇ, ಹೊಸ ತಾಂತ್ರಿಕ ಕೌಶಲ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವುದರ ಅವಶ್ಯಕತೆ ಇದೆ ಎಂಬುದನ್ನು ಪತ್ರದಲ್ಲಿ ಸಚಿವರು ವಿವರಿಸಿದ್ದಾರೆ.
ಪ್ರತಿ ವರ್ಷವೂ ರೈತ ಸಮುದಾಯ ಕೃಷಿ ಕ್ಷೇತ್ರ ಉತ್ತಮಗೊಳ್ಳುವುದೆಂದು ಸರ್ಕಾರಗಳತ್ತ ಮುಖ ಮಾಡಿ ಭರವಸೆಯಿಂದ ಕಾಯುತ್ತಿದೆ. ಆದರೆ ಸರ್ಕಾರದ ಯೋಜನೆಗಳು ಜಾರಿಯಾಗುವಲ್ಲಿ ಸೋಲುತ್ತಿವೆ. ಇದರ ಬಗ್ಗೆ ಮರು ಪರಿಶೀಲನೆ ಅಗತ್ಯವಾಗಿ ಆಗಬೇಕಾಗಿದೆ. ಗ್ರಾಮೀಣ ಭಾರತದಲ್ಲಿ ಕೃಷಿಯನ್ನು ಒಂದು ಆಕರ್ಷಕ, ಲಾಭದಾಯಕ ಉದ್ಯೋಗವನ್ನಾಗಿಸುವಲ್ಲಿ ಯೋಚಿಸಬೇಕಿದೆ ಎಂದು ತಿಳಿಸಿದ್ದಾರೆ.
ಜಿಎಸ್‌ಟಿಯನ್ನು ಮರುಪರಿಶೀಲಿಸುವ ಅಗತ್ಯ ಒತ್ತಿ ಹೇಳಿರುವ ಸಚಿವರು, ಈಗಿರುವ ಸ್ಲ್ಯಾಬ್‌ಗಳನ್ನು ಪರಿಷ್ಕರಿಸಿ ಸುಲಭ ಸ್ಲ್ಯಾಬ್‌ಗಳನ್ನು ಪರಿಚಯಿಸುವ ಮೂಲಕ ಸುಗಮ ರೀತಿಯಲ್ಲಿ ಬೃಹತ್ ಮೊತ್ತದ ತೆರಿಗೆ ಸಂಗ್ರಹಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.
ಬರ, ಪ್ರವಾಹ, ಭೂಕಂಪ ಮುಂತಾದ ಅನಾಹುತಗಳು ಆಗಿಂದಾಗ್ಗೆ ದೇಶದಲ್ಲಿ ಸಂಭವಿಸುತ್ತಿದ್ದು, ಎಲ್ಲ ರಾಜ್ಯಗಳು ಬರ ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಿವೆಯೇ ಹೊರತು ಶಾಶ್ವತ ಕ್ರಮಗಳ ಬಗ್ಗೆ ಚಿಂತಿಸುತ್ತಿಲ್ಲ. ಈ ನಿಟ್ಟಿನಲ್ಲಿ ನದಿ ಜೋಡಣೆ, ನದಿ ಹರಿವಿನ ಬದಲಾವಣೆ, ಜಲ ಮೂಲಗಳ ರಕ್ಷಣೆ, ಅಂತರ್ ಸಂಪರ್ಕ, ಜಲ ಸಂರಕ್ಷಣೆ ಹಾಗೂ ಅರಣ್ಯ ಸಂರಕ್ಷಣೆಯಂತಹ ಶಾಶ್ವತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ದೂರದೃಷ್ಟಿಯಿಂದ ಆಲೋಚಿಸಿ ಆದ್ಯತೆ ಮೇಲೆ ಕ್ರಮ ವಹಿಸುವ ಅಗತ್ಯವಿದೆ ಎಂದು ಪತ್ರದಲ್ಲಿ ಸಚಿವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.