ಮಠಗಳು ಜ್ಞಾನದ ಶಕ್ತಿ ಕೇಂದ್ರಗಳು: ಸಂಸದ ಸಿದ್ದೇಶ್ವರ
Team Udayavani, Aug 23, 2017, 12:46 PM IST
ಧಾರವಾಡ: ಮಠಗಳು ಜ್ಞಾನದ ಶಕ್ತಿ ಕೇಂದ್ರಗಳಾಗಿದ್ದು, ಅವುಗಳಿಂದ ಸದಾ ಕಾಲ ಮೌಲ್ಯಯುತ ಸಂದೇಶ ಹೊರ ಬರಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ನಗರದ ಮುರುಘಾಮಠದಲ್ಲಿ ಮಂಗಳವಾರ ಸಂಜೆ ನಡೆದ ವಚನ ದರ್ಶನ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಠಗಳ ಈ ಸಂದೇಶ ಹೊರ ಹೊಮ್ಮಿಕೆಯಿಂದ ಸಮಾಜದ ಸ್ವಾಸ್ಥ ಕೂಡ ಆರೋಗ್ಯಕರ ಇರಲಿದೆ ಎಂದರು. ಸಂಘ-ಸಂಸ್ಥೆಗಳು ಅಥವಾ ಸರಕಾರದ ಶಿಕ್ಷಣ ಸಂಸ್ಥೆಗಳು ನೀಡುವ ಶಿಕ್ಷಣಕ್ಕೂ ಮಠಗಳು ನೀಡುವ ಸಂಸ್ಕಾರಯುಕ್ತ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ಅಲ್ಲದೇ ಮಠಗಳು ಹಾಗೂ ಆಯಾ ಮಠಾಧೀಶರು ಶರಣರ ಸಂತರ ಸಾಹಿತ್ಯ ಪ್ರಸಾರ ಮಾಡುವುದರ ಜೊತೆಗೆ ಮಕ್ಕಳಿಗೆ ನಿರಂತರ ಜ್ಞಾನ ದಾಸೋಹ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಚಿತ್ರದುರ್ಗದ ಮುರುಘಾಮಠದ ಡಾ| ಶಿವಮೂರ್ತಿ ಮುರುಘಾಶರಣರು ಸಾನ್ನಿಧ್ಯ ವಹಿಸಿ, ಬಸವಾದಿ ಶರಣರು ವಚನದ ಮೂಲಕ ಜೀವಂತ ಇದ್ದಾರೆ.
ದೇಹದಿಂದ ಅವರನ್ನು ನೋಡಲು ಸಾಧ್ಯವಿಲ್ಲ. ಆದರೆ ಅವರ ಸಾಹಿತ್ಯ ಜೀವಂತ ಇದೆ. ಶರಣರು ಆಸ್ತಿ, ಹಣ ಮಾಡಲಿಲ್ಲ. ಬದಲಾಗಿ ವಚನ ಸಾಹಿತ್ಯವನ್ನೇ ಸಮಾಜಕ್ಕೆ ದೊಡ್ಡ ಆಸ್ತಿಯನ್ನಾಗಿ ಕೊಟ್ಟು ಹೋಗಿದ್ದಾರೆ. ವಚನ ಸಂಪತ್ತನ್ನು ಎಷ್ಟು ಬಳಸಿದರೂ ಅದು ಎಂದಿಗೂ ಕರಗುವುದಿಲ್ಲ ಎಂದರು.
ವಚನಗಳಲ್ಲಿ ಮಾನವನ ಉದ್ಧಾರಕ್ಕೆ ಬೇಕಾಗಿರುವ ದಾರ್ಶನಿಕಗಳಿವೆ. ವಚನದ ಮೂಲಕ ಗುರು ಲಿಂಗ ದರ್ಶನ ಆಗುತ್ತದೆ. ಇಲ್ಲಿ ಸತ್ಯ ದರ್ಶನ, ಸಾಹಿತ್ಯ, ಮೌಲ್ಯದ ದರ್ಶನ ಸಿಗುತ್ತದೆ. ವಚನಗಳು ಅನುಭಾವ ದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣ ಮಾಡುವತ್ತ ಆಲೋಚನೆ, ಸಂಸ್ಕಾರ ನೀಡುತ್ತವೆ.
ಇಂದಿನ ಯುವ ಪೀಳಿಗೆ ವಚನ ಚಿಂತನ ಅಧ್ಯಯನ ಮಾಡಿದರೆ ಜೀವನಕ್ಕೆ ಬೇಕಾಗುವ ಒಳನೋಟ ಕಂಡುಕೊಳ್ಳಬಹುದು ಎಂದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ರಾಜು ಮರಳಪ್ಪನವರ, ಸಿದ್ರಾಮಣ್ಣ ನಡಕಟ್ಟಿ, ಸಂಗಮೇಶ್ವರ ದೇವರು, ಡಿ.ಬಿ. ಲಕಮನಹಳ್ಳಿ ಇದ್ದರು.
ಇದೇ ಸಂದರ್ಭದಲ್ಲಿ ಶ್ರಾವಣ ಮಾಸದ ಒಂದು ತಿಂಗಳ ಕಾಲ ವಚನ ದರ್ಶನ ಪ್ರವಚನ ನೀಡಿದ ಬೀದರ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ಸಂಗಮೇಶ್ವರ ದೇವರನ್ನು ಗೌರವಿಸಲಾಯಿತು. ಮಲ್ಲು ಗಾಣಗೇರ ನಿರೂಪಿಸಿದರು. ಹುಬ್ಬಳ್ಳಿಯ ಗಾಯಕ ಬಾಲಚಂದ್ರ ನಾಕೋಡ ಅವರು ವಚನ ಗಾಯನ ಪ್ರಸ್ತುತ ಪಡಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.