ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿ: ಕುಸುಗಲ್
Team Udayavani, May 21, 2018, 5:36 PM IST
ಕುಳಗೇರಿ ಕ್ರಾಸ್: ಮಠಗಳು ಸಂಸ್ಕೃತಿಯ ಪ್ರತೀಕ. ಇಡೀ ಜಗತ್ತಿಗೆ ಭವ್ಯ ಸಂಸ್ಕೃತಿಯನ್ನು ಪಸರಿಸಿದ ವಿಶ್ವಗುರು ಭಾರತ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ನಾಡಿನ ಸಾಧು-ಸಂತರ ಪಾತ್ರ ಹಿರಿದಾದುದು ಎಂದು ಪ್ರೊ.ಎಂ.ಎಸ್. ಕುಸುಗಲ್ ಅಭಿಪ್ರಾಯಪಟ್ಟರು.
ಸುಕ್ಷೇತ್ರ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 279ನೇ ಮಾಸಿಕ ಶಿವಾನುಭವದಲ್ಲಿ ಮಾತನಾಡಿದ ಅವರು, ಜಗತ್ತಿಗೆ ಸಮಾನತೆಯ ತತ್ವ ಸಾರಿದ ಬುದ್ಧ, ಬಸವ, ಯೇಸು, ಪೈಗಂಬರ್, ಅಂಬೇಡ್ಕರಂತಹ ಮಹಾನ್ ವ್ಯಕ್ತಿಗಳು ನೀಡಿದ ಸಿದ್ಧಾಂತಗಳು ಇಂದಿಗೂ ಪ್ರಸ್ತುತ ಮತ್ತು ಸರ್ವಕಾಲಿಕ. ಒಬ್ಬ ವ್ಯಕ್ತಿ ಉನ್ನತ ಸ್ಥಾನಕ್ಕೇರಲು ಕೇವಲ ಐಶ್ವರ್ಯದಿಂದ ಸಾಧ್ಯವಿಲ್ಲ. ಬದಲಾಗಿ ಉತ್ತಮ ಆಚಾರ-ವಿಚಾರ ಸನ್ನಡತೆಯಿಂದ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ. ಬೆಂಕಿ ಇಲ್ಲದೇ ಮೇಣದ ಬತ್ತಿ ಹೇಗೆ ಉರಿಯಲು ಸಾಧ್ಯವಿಲ್ಲವೋ ಹಾಗೆ ಆಧ್ಯಾತ್ಮಿಕ ಎಂಬ ಜ್ಯೋತಿ ಇಲ್ಲದೇ ಮನುಜನ ಬಾಳು ಬೆಳಗಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರು ಶಿವಾನುಭದಂತಹ ಆಧ್ಯಾತ್ಮಿಕ ಗೋಷ್ಠಿಗಳಲ್ಲಿ ಪಾಲ್ಗೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಕರೆಕೊಟ್ಟರು.
ಉಪನ್ಯಾಸಕ ಆರ್.ಎಚ್.ತಿಗಡಿ ಮಾತನಾಡಿ, 12ನೇ ಶತಮಾನದಲ್ಲಿಯೇ ಸಮಾನತೆ ಸಂದೇಶ ಸಾರಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಕಾಯಕ ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ಜಾತ್ಯತೀತೆಯ ಬೀಜವನ್ನು ಬಿತ್ತಿದ ಬಸವಾದಿ ಶರಣರ ಆದರ್ಶ ನಮಗೆಲ್ಲ ಮಾದರಿ ಎಂದರು.
ಶ್ರೀಮಠದ ಶಾಂತಲಿಂಗ ಶ್ರೀಗಳು ತಮ್ಮ ಆಶೀರ್ವಚನದ ಮೂಲಕ ಆಸೆ ಎಂಬುದು ಭವದ ಬೀಜ ನಿರಾಸೆಯೆಂಬುದು ನಿತ್ಯ ಮುಕ್ತಿ ಎಂಬಂತೆ ಮನುಷ್ಯನಲ್ಲಿ ಆಸೆ ಇರಬೇಕು. ಆದರೆ ದುರಾಸೆ ಇರಬಾರದು. ದುರಾಸೆ ಉಳ್ಳವರು ಜೀವನದಲ್ಲಿ ಸಫಲತೆ ಕಾಣಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಬದುಕು ರೂಪುಗೊಳ್ಳುವುದು ಅವನ ಚಿಂತನೆಗಳಿಂದ ಹೊರತು ಅವನ ಹಣದಿಂದಲ್ಲ. ಮನುಷ್ಯರಾದವರು ಏನನ್ನು
ಯೋಚಿಸುತ್ತೇವೆಯೋ ಅದೆ ನಾವಾಗುತ್ತೇವೆ. ಹೀಗಾಗಿ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ದೊಡ್ಡವನಾಗಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಮಲೇಷಿಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ಗೆ ಆಯ್ಕೆಯಾದ ಕುಮಾರ ಚಂದ್ರಶೇಖರಗೌಡ ತಮ್ಮನಗೌಡ್ರ ಅವರನ್ನು ಶ್ರೀಮಠದಿಂದ ಅಭಿನಂದಿಸಿ ಸತ್ಕರಿಸಲಾಯಿತು. ಪ್ರೊ.ಪಿ.ಎಸ್.ಅಣ್ಣಿಗೇರಿ, ಎಸ್.ಐ. ಅಂಕಲಿ, ಬಿ.ವೈ. ಕಲ್ಲನಗೌಡ್ರ, ಸಂಗನಗೌಡ್ರ ತಮ್ಮನಗೌಡ್ರ, ಶಿಕ್ಷಕರಾದ ಕುಂದರಗಿ ಇದ್ದರು. ಮಹಾಂತೇಶ ಹಿರೇಮಠ ನಿರೂಪಿಸಿದರು, ಉಮೇಶ ಹಾದಿಮನಿ ಸ್ವಾಗತಿಸಿದರು. ಶಿವಮೂರ್ತಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.