ಸೊಳ್ಳೆ ಕಾಟ ಉಲ್ಬಣ; ಸಾಂಕ್ರಾಮಿಕದ ತಲ್ಲಣ
ಪಾಲಿಕೆಯಿಂದ ಸಂತಾನೋತ್ಪತ್ತಿ ನಿಯಂತ್ರಣ ಕ್ರಮ ಉಪೇಕ್ಷೆ
Team Udayavani, Apr 19, 2022, 12:30 PM IST
ಧಾರವಾಡ: ಬೇಸಿಗೆ ಬಿಸಿಲಿನ ತಾಪದ ಜತೆಗೆ ಇದೀಗ ಆರಂಭಗೊಂಡಿರುವ ಮುಂಗಾರು ಪೂರ್ವ ಮಳೆ ಅಬ್ಬರದಿಂದ ಸೊಳ್ಳೆ ಕಾಟ ಶುರುವಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಸಾಂಕ್ರಾಮಿಕ ರೋಗಗಳ ನಿಯಂತ್ರಿಸಲು ಆರೋಗ್ಯ ಇಲಾಖೆ ಶಿಫಾರಸುಗಳಿಗೆ ಮಹಾನಗರ ಪಾಲಿಕೆ ಮಣೆ ಹಾಕಿಲ್ಲ. ಅವಳಿನಗರದಲ್ಲಿ ಸೊಳ್ಳೆಯ ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಫಾಗಿಂಗ್ ಕಾರ್ಯಕ್ಕೆ ಆದ್ಯತೆ ನೀಡಿಲ್ಲ. ಹೀಗಾಗಿ ಸೊಳ್ಳೆಗಳ ಉತ್ಪತ್ತಿ ನಿಯಂತ್ರಣ ತಪ್ಪಿದ್ದು, ಸೊಳ್ಳೆಯ ಕಾಟ ಅವಳಿನಗರದಲ್ಲಿ ಜೋರಾಗಿದೆ.
ಇದಲ್ಲದೇ ಗ್ರಾಮೀಣ ಭಾಗದಲ್ಲೂ ಗ್ರಾಪಂಗಳ ನಿರ್ಲಕ್ಷéದಿಂದ ಸೊಳ್ಳೆಯ ನಿಯಂತ್ರಣ ದಾರಿ ತಪ್ಪಿದ್ದು, ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಕಂಡು ಬಂದಿವೆ. ಬೇಸಿಗೆಯಲ್ಲಿ ಸದ್ದಿಲ್ಲದೇ ಹೊಡೆತ ನೀಡಿರುವ ಕೀಟಜನ್ಯ ಸಾಂಕ್ರಾಮಿಕ ರೋಗಗಳು ಮಳೆಗಾಲದಲ್ಲಿ ತೀವ್ರ ಹೊಡೆತ ನೀಡುವ ಆತಂಕ ಶುರುವಾಗಿದೆ.
2021ರಲ್ಲಿ 123 ಜನರಲ್ಲಿ ಡೆಂಘೀ, 54 ಜನರಲ್ಲಿ ಚಿಕೂನ್ ಗುನ್ಯಾ, 6 ಜನರಲ್ಲಿ ಮಲೇರಿಯಾ, ಒಬ್ಬರಲ್ಲಿ ಮೆದುಳು ಜ್ವರ ಪತ್ತೆಯಾಗಿತ್ತು. ಇದೀಗ 2022ರ ಪ್ರಸಕ್ತ ಸಾಲಿನ ಮೂರು ತಿಂಗಳ ಅವಧಿಯಲ್ಲಿ 11 ಜನರಲ್ಲಿ ಡೆಂಘೀ, ಇಬ್ಬರಲ್ಲಿ ಚಿಕೂನ್‌ಗುನ್ಯಾ ಹಾಗೂ ಒಬ್ಬರಲ್ಲಿ ಮಲೇರಿಯಾ ಪತ್ತೆಯಾಗಿದೆ. ಆರೋಗ್ಯ ಇಲಾಖೆ ನೀಡಿರುವ ಈ ಅಂಕಿ-ಅಂಶಗಳ ಅನ್ವಯ ಸಾಂಕ್ರಾಮಿಕ ರೋಗಗಳ ಹಾವಳಿ ತಗ್ಗಿದಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಒಳಹೊಡೆತ ನೀಡಿರುವುದು ಸತ್ಯ.
ಈಗಾಗಲೇ ಸೀಜನ್ ಜ್ವರ ದಾಳಿಯಿಟ್ಟು, ಮೈ-ಕೈ ನೋವಿನ ಬಾಧೆಯಿಂದ ಚೇತರಿಸಿಕೊಳ್ಳುತ್ತಿರುವ ಹಳ್ಳಿಗರಿಗೆ ಸಾಂಕ್ರಾಮಿಕ ರೋಗಗಳು ಸದ್ದಿಲ್ಲದೇ ಒಳಹೊಡೆತ ನೀಡಿವೆ. ಮಳೆಗಾಲದಲ್ಲಿ ಅಲ್ಲಲ್ಲಿ ಮಳೆ ನೀರು ನಿಂತು, ಚರಂಡಿ ನೀರು ಕುಡಿಯುವ ನೀರಿಗೆ ಮಿಶ್ರಣ ಹಾಗೂ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಳದಿಂದ ಸಾಂಕ್ರಾಮಿಕ ರೋಗ ಉಲ್ಬಣವಾಗಿ ಕಾಡುವ ಕಾರಣ ಕಟ್ಟೆಚ್ಚರ ವಹಿಸಬೇಕಿದೆ.
ಡೆಂಘೀ ಹಾವಳಿ:
2015ರಲ್ಲಿ 46, 2016ರಲ್ಲಿ 97, 2017ರಲ್ಲಿ 172, 2018ರಲ್ಲಿ 112, 2019ರಲ್ಲಿ 250, 2020ರಲ್ಲಿ 36 ಜನರಲ್ಲಿ ಡೆಂಘೀ ರೋಗ ದೃಢಪಟ್ಟಿತ್ತು. ಸದ್ಯ ಮೂರು ತಿಂಗಳಲ್ಲಿ 152 ಜನರಲ್ಲಿ ಡೆಂಘೀ ರೋಗ ಲಕ್ಷಣ ಕಂಡು ಬಂದಿದ್ದು, ಈ ಪೈಕಿ ತಪಾಸಣೆಗೆ ಒಳಪಡಿಸಿದಾಗ 11 ಜನರಲ್ಲಿ ದೃಢಪಟ್ಟಿದೆ. ಅದರಲ್ಲೂ ಮಾರ್ಚ್ ತಿಂಗಳಲ್ಲಿಯೇ ಐದು ಜನರಲ್ಲಿ ಡೆಂಘಿ ದೃಢಪಟ್ಟಿದೆ. ಇನ್ನು ಹುಬ್ಬಳ್ಳಿಯ ಶಹರ ವ್ಯಾಪ್ತಿಯಲ್ಲಿ ನಾಲ್ಕು, ಧಾರವಾಡ ಶಹರ ವ್ಯಾಪ್ತಿಯಲ್ಲಿ ಮೂರು, ಕುಂದಗೋಳ ತಾಲೂಕಿನಲ್ಲಿ ಎರಡು, ಕಲಘಟಗಿ ತಾಲೂಕಿನಲ್ಲಿ ಒಂದು ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.
ಚಿಕೂನ್‌ಗುನ್ಯಾ ಗುನ್ನ:
2015ರಲ್ಲಿ 17, 2016ರಲ್ಲಿ 6, 2017ರಲ್ಲಿ 11, 2018ರಲ್ಲಿ 85, 2019ರಲ್ಲಿ 121, 2020ರಲ್ಲಿ 17 ಜನರಲ್ಲಿ ಚಿಕೂನ್‌ಗುನ್ಯಾ ಕಾಣಿಸಿಕೊಂಡು ತೊಂದರೆ ಉಂಟು ಮಾಡಿತ್ತು. ಇದೀಗ ಈ ಮೂರು ತಿಂಗಳಲ್ಲಿ ಚಿಕೂನ್‌ಗುನ್ಯಾ ರೋಗ ಲಕ್ಷಣವುಳ್ಳ 104 ಜನರನ್ನು ತಪಾಸಣೆಗೆ ಒಳಪಡಿಸಿದಾಗ ಇಬ್ಬರಲ್ಲಿ ದೃಢಪಟ್ಟಿದ್ದು, ಅದು ಮಾರ್ಚ್ ತಿಂಗಳಲ್ಲಿಯೇ ರೋಗ ಪತ್ತೆಯಾಗಿದೆ. ಧಾರವಾಡ ಗ್ರಾಮೀಣ ಹಾಗೂ ಶಹರ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಕಂಡು ಬಂದಿದ್ದು, ನಿಧಾನವಾಗಿಯೇ ಚಿಕೂನ್‌ಗುನ್ಯಾ ಗುನ್ನ ನೀಡಲು ಶುರು ಮಾಡಿಬಿಟ್ಟಿದೆ.
ಮಲೇರಿಯಾ-ಮೆದುಳು ಜ್ವರ ಬಾಧೆ:
2015ರಲ್ಲಿ 96, 2016ರಲ್ಲಿ 78, 2017ರಲ್ಲಿ 76, 2018ರಲ್ಲಿ 25, 2019ರಲ್ಲಿ 17, 2020ರಲ್ಲಿ 8 ಜನರಲ್ಲಿ ಕಾಣಿಸಿಕೊಂಡಿದ್ದ ಮಲೇರಿಯಾ ರೋಗವು, ಮೂರು ತಿಂಗಳಲ್ಲಿ ಕುಂದಗೋಳದಲ್ಲಿ ಒಬ್ಬರಲ್ಲಿ ಮಲೇರಿಯಾ ಪತ್ತೆಯಾಗಿದ್ದರೆ, ಮೆದುಳು ಜ್ವರ ಲಕ್ಷಣಗಳು ಕಂಡು ಬಂದರೂ ತಪಾಸಣೆಯಲ್ಲಿ ದೃಢಪಟ್ಟಿಲ್ಲ. ಕೋವಿಡ್ ಸೋಂಕಿನ ರೋಗಲಕ್ಷಣಗಳು ಹಾಗೂ ಕೀಟಜನ್ಯ ಸಾಂಕ್ರಾಮಿಕ ರೋಗಗಳ ಗುಣಲಕ್ಷಣಗಳಲ್ಲಿ ಸಾಮ್ಯತೆ ಇರುವ ಕಾರಣ ತಪಾಸಣೆಗೆ ಜನರಿಂದ ಹಿಂದೇಟು ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ಕೀಟ ಜನ್ಯದಿಂದ (ಸೊಳ್ಳೆ) ಬರುವ ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯಾದಂತಹ ರೋಗಗಳ ಹಾವಳಿಯು ಬೇಸಿಗೆಯ ಕಾಲದಲ್ಲಿ ಕಂಡು ಬಂದಿಲ್ಲ. ಈ ಸಮಯದಲ್ಲಿ ರೋಗಗಳ ಹಾವಳಿ ಮೇಲ್ನೋಟಕ್ಕೆ ತಗ್ಗಿದ್ದರೂ ಮಳೆಗಾಲದಲ್ಲಿ ಉಲ್ಬಣ ಆಗುವ ಆತಂಕ ಇರುವ ಕಾರಣ ಈ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸುವುದು ಸೂಕ್ತ. –ಡಾ| ಮಂಜುನಾಥ ಎಸ್,. ಜಿಲ್ಲಾ ಮಲೇರಿಯಾ ಅಧಿಕಾರಿಗಳು, ಧಾರವಾಡ
-ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.