ಗೋಮಾತೆ ಸೇವೆಯಲ್ಲಿ ನಿರತ ಮುಸ್ಲಿಂ ಕುಟುಂಬ : 400 ಹಸು ಸಾಕಿದ ಆಂಧ್ರದ ಚಾಂದ್‌ಬಾಷಾ

ಮುರ್ನಾಲ್ಕು ತಲೆಮಾರಿನಿಂದ ಗೋವುಗಳ ಸಾಕಣೆ, ಬಳ್ಳಾರಿ ಬಳಿ ಗೋಶಾಲೆ, ಉತ್ಪನ್ನಗಳ ಘಟಕ

Team Udayavani, Dec 25, 2020, 10:00 PM IST

ಗೋಮಾತೆ ಸೇವೆಯಲ್ಲಿ ನಿರತ ಮುಸ್ಲಿಂ ಕುಟುಂಬ

ಹುಬ್ಬಳ್ಳಿ: ಆಂಧ್ರದ ಬಂಟುಪಲ್ಲಿಯಲ್ಲಿ ಮುಸ್ಲಿಂ ಕುಟುಂಬದಿಂದ ದೇಸಿ ಹಸುಗಳ ಸಾಕಣೆ.

ಹುಬ್ಬಳ್ಳಿ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕುರಿತಾಗಿ ಪರ-ವಿರೋಧ ಕೂಗು ಜೋರಾಗಿದೆ. ಆಂಧ್ರಪ್ರದೇಶದಲ್ಲಿ ಮುಸ್ಲಿಂ ಕುಟುಂಬವೊಂದು ಮೂರ್‍ನಾಲ್ಕು ತಲೆಮಾರಿನಿಂದ ದೇಸಿ ಗೋವುಗಳ ಪೋಷಣೆಯಲ್ಲಿ ತೊಡಗಿದ್ದು, ಗೋ ಆಧಾರಿತ ಉತ್ಪನ್ನಗಳನ್ನು ತಯಾರಿಸುತ್ತಿದೆ. ಕರ್ನಾಟಕದ ಸ್ನೇಹಿತರೊಬ್ಬರ ಜತೆ ಸೇರಿ ಬಳ್ಳಾರಿ ಬಳಿ ಗೋಶಾಲೆ ಹಾಗೂ ಉತ್ಪನ್ನಗಳ ಘಟಕ ಆರಂಭಿಸಿದೆ.

ಬರದಿಂದಾಗಿ ಮೇವಿನ ಕೊರತೆ ಕಂಡು ಬಂದರೂ ಗೋವುಗಳನ್ನು ಮಾರಾಟ ಇಲ್ಲವೇ ಕಸಾಯಿಖಾನೆಗೆ ನೀಡದೆ ಸಂಕಷ್ಟಗಳ ಸವಾಲುಗಳನ್ನು ಎದುರಿಸಿ ಮಕ್ಕಳಂತೆ ಪೋಷಣೆಯ ಹೃದಯವಂತಿಕೆ ತೋರಿದೆ. ಮಕ್ಕಳಿಂದ ವೃದ್ಧರವರೆಗೆ ಇಡೀ ಕುಟುಂಬವೇ ಗೋ ಮಾತೆ ಸೇವೆಗೆ ಸಮರ್ಪಿಸಿಕೊಂಡಿದೆ. ಆಂಧ್ರಪದೇಶದ ಕರ್ನೂಲು ಜಿಲ್ಲೆಯ ಪತ್ತಿಕೊಂಡಂ ಬಳಿಯ ದೇವರಕೊಂಡ ಮಂಡಲದ ಬಂಟುಪಲ್ಲಿ ಗ್ರಾಮದಲ್ಲಿ ಚಾಂದ್‌ಬಾಷಾ ಅವರ ಇಡೀ ಕುಟುಂಬ ಓಂಗೋಲ್‌ ತಳಿ ಸೇರಿದಂತೆ ವಿವಿಧ ಜಾತಿ ದೇಸಿ ಹಸುಗಳನ್ನು ಪೋಷಿಸುತ್ತಿದೆ. ರೈತರು ಯಾರಾದರೂ ತಮ್ಮ ಬರಡಾದ ಹಸುಗಳನ್ನು ನೀಡಿದರೂ ಅವುಗಳನ್ನು ತೆಗೆದುಕೊಂಡು ಪೋಷಣೆ ಕಾರ್ಯದಲ್ಲಿ ತೊಡಗಿದೆ.

400 ಗೋವುಗಳ ಸಾಕಣೆ: ಚಾಂದ್‌ಬಾಷಾ ಪದವೀಧರರಾಗಿದ್ದು, ತಮ್ಮ ತಾತ, ಮುತ್ತಾತನ ಕಾಲದಿಂದಲೂ ಬಂದ ದೇಸಿ ಗೋವುಗಳ ಸಾಕಣೆ ಮುಂದುವರೆಸಿದ್ದಾರೆ, ಅಭಿವೃದ್ಧಿಪಡಿಸಿದ್ದಾರೆ, ವಿಸ್ತರಿಸಿದ್ದಾರೆ, ಗೋ ಆಧಾರಿತ ಉತ್ಪನ್ನಗಳ ತಯಾರಿಕೆ, ಮೌಲ್ಯವರ್ಧನೆ ಕಾರ್ಯದಲ್ಲಿ ತೊಡಗಿದ್ದಾರೆ. ತಮ್ಮ ಮಕ್ಕಳನ್ನು ಗೋ ಸೇವೆಯಲ್ಲಿ ತೊಡಿಸುವ ಮೂಲಕ ಕುಟುಂಬ ಪರಂಪರೆ ಮುಂದುವರೆಸಿದ್ದಾರೆ. ಪ್ರಸ್ತುತ ಚಾಂದ್‌ಬಾಷಾ ಕುಟುಂಬದವರು ಸುಮಾರು 350-400 ದೇಸಿ ಗೋವುಗಳ ಸಾಕಣೆಯಲ್ಲಿ ತೊಡಗಿದ್ದಾರೆ. ಆರ್ಥಿಕವಾಗಿ ಸಂಕಷ್ಟವಿದ್ದರೂ, ದೇಸಿ ಹಸುಗಳ ವಿಚಾರದಲ್ಲಿ ಹೃದಯ ಶ್ರೀಮಂತಿಕೆ ತೋರಿದ್ದಾರೆ. ಬರಡಾದ ಹಸುಗಳನ್ನು ಕಸಾಯಿಖಾನೆಗೆ ನೀಡುವ ಸ್ಥಿತಿಯಲ್ಲಿ, ಹಸುಗಳ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ.

ಕರ್ನೂಲ್‌ ಜಿಲ್ಲೆಯ ಬಂಟುಪಲ್ಲಿ ಗ್ರಾಮ ಬರ ಪೀಡಿತ ಪ್ರದೇಶವಾಗಿದ್ದು, ಕಳೆದ ಐದಾರು ವರ್ಷಗಳ ಹಿಂದೆ ಕಂಡು ಬಂದ ತೀವ್ರ ಬರ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಹಸುಗಳಿಗೆ ಮೇವಿನ ಕೊರತೆ ಎದುರಾದಾಗ ಹಸುಗಳಿಗೆ ಆಹಾರ ಹೇಗೆ ಎಂಬ ಚಿಂತೆ ಎದುರಾಗಿತ್ತು. ಆದರೂ ಎದೆಗುಂದದೆ ಬಳ್ಳಾರಿ ಇನ್ನಿತರ ಕಡೆಯಲ್ಲಿ ಸ್ನೇಹಿತರಿಂದ ಭತ್ತದ ಹುಲ್ಲು ತೆಗೆದುಕೊಂಡು ಹೋಗಿ ಹಸುಗಳನ್ನು ಸಾಕುವ ಸಾಹಸ ಮೆರೆದಿದ್ದಾರೆ.

ಬಳ್ಳಾರಿಯಲ್ಲಿ ಗೋ ಸಾಕಣೆ: ಚಾಂದ್‌ಬಾಷಾ ಆಂಧ್ರಪ್ರದೇಶದವರಾಗಿದ್ದರೂ ಬಳ್ಳಾರಿಯೊಂದಿಗೆ ನಂಟು ಸಾಕಷ್ಟಿದೆ. ಸ್ನೇಹಿತರ ದೊಡ್ಡ ಗುಂಪು ಇದೆ.ಸ್ನೇಹಿತ ಹಾಗೂ ಸಾಫ್ಟ್ವೇರ್‌ ಕಂಪನಿ ಉದ್ಯೋಗಿ ಅಶೋಕ ಕುಮಾರ ಎನ್ನುವವರು ಉದ್ಯೋಗತೊರೆದು ಕೃಷಿ, ಗೋ ಸಾಕಣೆಗೆ ಮುಂದಾಗಿದ್ದರು. ಚಾಂದ್‌ಬಾಷಾ ಅವರು ದೇಸಿ ಗೋವುಗಳ ಸಾಕಣೆಗೆ ಪ್ರೇರಣೆ ನೀಡಿ, ಮಹತ್ವದ ಸಾಥ್‌ ನೀಡಿದ್ದರು. ಇದರಿಂದ ಇದೀಗ ಬಳ್ಳಾರಿ ಬಳಿ ಸುಮಾರು 100 ಹಸುಗಳ ಸಾಕಣೆ ಕಾರ್ಯ ನಡೆಯುತ್ತಿದೆ. ಚಾಂದ್‌ಬಾಷಾ ಅವರ ಕುಟುಂಬ ಕೈಗೊಂಡ ಗೋ ಆಧಾರಿತ ಉತ್ಪನ್ನಗಳ ಕಾಯಕವನ್ನು ಅಶೋಕ ಕುಮಾರ ಬಳ್ಳಾರಿಯಲ್ಲಿ ಆರಂಭಿಸುವ ಮೂಲಕ ಕರ್ನಾಟಕದ ರೈತರು ಹಾಗೂ ಜನರಿಗೆ ಆರೋಗ್ಯ-ಕೃಷಿ ಉದ್ದೇಶಿತ ಉತ್ಪನ್ನಗಳನ್ನು ತಯಾರು ಮಾಡತೊಡಗಿದ್ದಾರೆ. ಕರ್ನಾಟಕದಲ್ಲಿ ಗೋ ಆಧಾರಿತ ಉತ್ಪನ್ನಗಳು ರೈತರಿಗೆ ಮಹತ್ವದ ಸಹಕಾರಿ ಆಗಿವೆ ಎಂಬುದು ಚಾಂದ್‌ಬಾಷಾ ಅವರ ಸ್ನೇಹಿತಕೆ.ಎಂ.ಮಂಜುನಾಥಸ್ವಾಮಿ ಅವರ ಅನಿಸಿಕೆ.

ಸ್ವದೇಶ್‌ ಕೌ ಪ್ರೊಡೆಕ್ಟ್ಸ್: ಗೋವುಗಳ ಸಾಕಣೆ, ಕುಟುಂಬ ನಿರ್ವಹಣೆ ಹಿನ್ನೆಲೆಯಲ್ಲಿ ಗೋ ಆಧಾರಿತ ಉತ್ಪನ್ನಗಳ ಚಿಂತನೆ ಮೂಡಿತ್ತು. ಈ ನಿಟ್ಟಿ ನಲ್ಲಿ ಮಹತ್ವದ ಹೆಜ್ಜೆ ಇರಿಸಿದ ಚಾಂದ್‌ಬಾಷಾ, ಆರೋಗ್ಯ, ಕೃಷಿ ಸೇರಿದಂತೆ ಸುಮಾರು 10-12 ಉತ್ಪನ್ನಗಳನ್ನು ತಯಾರಿಸುವ ಸಾಹಸ ತೋರಿ ದ್ದಾರೆ. ಹಲ್ಲುಪುಡಿ,ಫಿನಾಯಿಲ್‌, ಗೋ ಅರ್ಕಾ, ಗೋ ಸಗಣಿಯ ಒಣಗಿದ ಕುಳ್ಳು ಇನ್ನಿತರ ಉತ್ಪ ನ್ನಗಳು ಇವೆ. ಕೃಷಿ ಬಳಕೆ ಉದ್ದೇಶದಿಂದ ಜೀವಾಮೃತ, ಸಂಜೀವಿನಿ, ರಾಮಬಾಣ, ಸುದರ್ಶನಚಕ್ರ, 6ಎಎಂ ಎಂಬ ಹೆಸರಿನ ಐದು ಉತ್ಪನ್ನಗಳನ್ನುತಯಾರಿಸುತ್ತಿದ್ದು, ಇದರ ಬಳಕೆಯಿಂದ ಉತ್ತಮ ಫ‌ಲಿತಾಂಶವೂ ಬಂದಿದೆ.

ಚಾಂದ್‌ಬಾಷಾ ಕುಟುಂಬದ ಮಕ್ಕಳು ಸೇರಿ ದಂತೆ ಎಲ್ಲರೂ ಬ್ರಾಹ್ಮಿ ಮೂಹುರ್ತ ಎಂದೇ ಕರೆ ಯುವ ಬೆಳಗಿನ ಜಾವ 4 ರಿಂದ ಸೂರ್ಯೋದಯದ 6 ಗಂಟೆವರೆಗೆ ಗೋವುಗಳ ಮೂತ್ರ ಸಂಗ್ರಹಮಾಡುತ್ತಾರೆ. ಅದನ್ನು ಸಂಪ್ರದಾಯ ಬದ್ಧವಾಗಿಯೇ ಅರ್ಕಾವಾಗಿ ತಯಾರು ಮಾಡಲಾಗುತ್ತದೆ.ಕುಟುಂಬದ ಪ್ರತಿಯೊಬ್ಬರೂ ಗೋವು, ಅವುಗಳ ಕರುಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ದೇಸಿ ಗೋವುಗಳ ಪ್ರೇಮ ಮೆರೆಯುವ ಮೂಲಕ ಮಾದರಿ-ಪ್ರೇರಣೆಯಾಗಿದ್ದಾರೆ.

ದೇಶದ ಕೃಷಿ ನಿಂತಿರುವುದೇ ಗೋವಿನ ಮೇಲೆ. ಪ್ರತಿಯೊಬ್ಬರ ರೈತ ಕನಿಷ್ಟಎರಡು ದೇಸಿ ಹಸುಗಳನ್ನು ಹೊಂದಬೇಕೆಂಬ ಬಯಕೆ ನನ್ನದು. ಕೃಷಿ-ಆರೋಗ್ಯದೃಷ್ಟಿಯಿಂದ ದೇಸಿ ಗೋವುಗಳ ಸಾಕಣೆಅನಿವಾರ್ಯ ಹಾಗೂ ವರ್ಣಿಸಲಸಾಧ್ಯ.ಬಂಟುಪಲ್ಲಿಯಲ್ಲಿ ಗೋಶಾಲೆ ಕಟ್ಟಡಕ್ಕೆಂದು 35 ಸೇಂಟ್ಸ್‌ ನಿವೇಶನ ಖರೀದಿದ್ದೇನೆ. ಆದರೆ, ಆರ್ಥಿಕ ಕಾರಣದಿಂದ ಕಟ್ಟಡ ಸಾಧ್ಯವಾಗಿಲ್ಲ. ಬಯಲಲ್ಲಿ ಗೋಮಾತೆಯರು ತಂಗುವುದು ನಿತ್ಯವೂ ಮನಸ್ಸಿಗೆ ನೋವು ಉಂಟು ಮಾಡುತ್ತಿದೆ.  –ಚಾಂದ್‌ಬಾಷಾ, ಗೋ ಪಾಲಕ

 

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.