ಗ್ರಾಮೀಣ ಕಾರ್ಮಿಕರಿಗೆ ನರೇಗಾ ವರ
Team Udayavani, Jun 21, 2020, 5:33 PM IST
ಕಲಘಟಗಿ: ಕೋವಿಡ್ ಲಾಕ್‌ಡೌನ್ ಪರಿಣಾಮ ಕೆಲಸವಿಲ್ಲದೆ ಬಸವಳಿದ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಕೈಹಿಡಿದಿದೆ. ದಿನದ ದುಡಿಮೆಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಕೂಲಿ ಕಾರ್ಮಿಕ ಕುಟುಂಬಗಳು ಹುಬ್ಬಳ್ಳಿ ಸೇರಿದಂತೆ ನಗರ ಪ್ರದೇಶದ ಕೂಲಿಯನ್ನೇ ನೆಚ್ಚಿಕೊಂಡಿದ್ದರು. ಇವರ ಬಾಳನ್ನು ಕೋವಿಡ್ ಕಮರಿಸಿದಾಗ ಆಸರೆಯಾಗಿದ್ದೇ ನರೇಗಾ.
ತಾಪಂ ಇಒ ಎಂ.ಎಸ್. ಮೇಟಿ ಮಾರ್ಗದರ್ಶನದಲ್ಲಿ ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ ಬಹುತೇಕ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗೆ ಚಾಲನೆ ದೊರಕಿಸಿದರು. ಸ್ವಸ್ಥಳದಲ್ಲಿಯೇ ಕಾರ್ಮಿಕರಿಗೆ ಕೂಲಿ ಸಿಗುವಂತಾಯಿತು.
ಹೊಸಕೆರೆ ನಿರ್ಮಾಣ: ಸಂಗಮೇಶ್ವರ ಗ್ರಾಪಂ ವ್ಯಾಪ್ತಿಯ ಹೊಸಕೆರೆ ನಿರ್ಮಾಣ ಕಾಮಗಾರಿಗೆ ಅಂದಾಜು 9.90 ಲಕ್ಷ ರೂ. ಗಳ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಸುಮಾರು 460 ಕೂಲಿಕಾರರು ಕೆಲಸ ಮಾಡುತ್ತಿರುವುದು ನೋಡುಗರ ಕಣ್ಮನ ಸೆಳೆಯುತ್ತಿದೆ. ಚಂದ್ರು ಅವರು ಮುತುವರ್ಜಿ ವಹಿಸಿ ಕಾಯಕ ಸಂಘವನ್ನು ರಚಿಸಿ, 20 ಜನರಿಗೆ ಒಬ್ಬರಂತೆ ಉದ್ಯೋಗ ಮಿತ್ರರನ್ನು ನೇಮಕ ಮಾಡಿ ಕಾಮಗಾರಿಗೆ ವೇಗ ನೀಡಿದ್ದಾರೆ. ತಾಂತ್ರಿಕ ಸಹಾಯಕ ಭೀಮಸೇನ ಕುಲಕರ್ಣಿ, ಪಿಡಿಒ ಸುಭಾಷ ಮೇಟಿ ಮತ್ತು ಸಿಬ್ಬಂದಿ ಸಾಥ್ ನೀಡಿದ್ದಾರೆ.
6.91 ಲಕ್ಷ ಮಾನವ ದಿನ: ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗಾಗಿ ತಾಲೂಕಿಗೆ ಒಟ್ಟು 6.91 ಲಕ್ಷ ಮಾನವ ದಿನಗಳು ಮಂಜೂರಾಗಿವೆ. ಜೂನ್ ಅಂತ್ಯದ ವರೆಗೆ 1,24,124 ಮಾನವ ದಿನಗಳ ಗುರಿ ನಿಗದಿ ಪಡಿಸಲಾಗಿತ್ತು. ಆದರೆ ಜೂ. 18ರ ಅಂಕಿಅಂಶದ ಪ್ರಕಾರ 1,32,429 ಮಾನವ ದಿನಗಳನ್ನು ಸೃಜಿಸಿದ ಹೆಮ್ಮೆಯಿದೆ ಎಂದು ತಾಪಂ ಇಒ ಎಂ.ಎಸ್. ಮೇಟಿ ತಿಳಿಸಿದ್ದಾರೆ.
ಉದ್ಯೋಗ ನಿರತರ ಒಂದು ಜಾಬ್ ಕಾರ್ಡ್‌ಗೆ 100 ಮಾನವ ದಿನಗಳಿದ್ದು, ಒಂದು ದಿನದ ಕೂಲಿ 285 ರೂ. ಪಾವತಿಸಲಾಗುತ್ತದೆ. ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳು ನಡೆಯುತ್ತಿದ್ದು, ನಿತ್ಯ ಸುಮಾರು 2,300ಕ್ಕೂ ಮಿಕ್ಕಿದ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿಯಡಿ ಕೆಲಸದಲ್ಲಿ ನಿರತರಾಗಿದ್ದಾರೆ.
ನಗರ ಪ್ರದೇಶಗಳಿಂದ ತಿರುಗಿ ಬಂದು ಇಲ್ಲಿಯೇ ವಾಸ್ತವ್ಯ ಹೂಡಿರುವ ಕೂಲಿಕಾರ್ಮಿಕರಿಗೆ ಹಾಗೂ ಬಡ ರೈತರಿಗೂ ಕೆಲಸ ನೀಡಲು ನರೇಗಾದಡಿ ಅವಕಾಶವಿದೆ. ಹೊಸ ಜಾಬ್‌ಕಾರ್ಡ್‌ಗಳನ್ನು ತಕ್ಷಣ ನಿರ್ಮಿಸಿ ಕೆಲಸ ನೀಡಲಾಗುವುದು. ಯೋಜನೆ ಸದುಪಯೋಗಕ್ಕೆ ಗ್ರಾಮೀಣ ಜನರು ಮುಂದಾಗಬೇಕು. –ಚಂದ್ರು ಪೂಜಾರ, ನರೇಗಾ ಸಹಾಯಕ ನಿರ್ದೇಶಕ
ಸಕಾಲಕ್ಕೆ ಮಳೆ ಬೆಳೆ ಬಾರದ ಕಾರಣ ನಗರ ಪ್ರದೇಶಕ್ಕೆ ಕೂಲಿ ಅರಸಿ ಹೋಗುತ್ತಿದ್ದ ನಮಗೆ ಇದೀಗ ಬಂಧು ಮಿತ್ರರೊಂದಿಗೆ ನಮ್ಮ ಊರಿನಲ್ಲಿಯೇ ಕೆಲಸ ಹಾಗೂ ಕೂಲಿ ಸಂಬಳ ದೊರಕಲು ಉದ್ಯೋಗ ಖಾತ್ರಿ ತುಂಬಾ ಸಹಕಾರಿಯಾಗಿದೆ. –ದರ್ಶನಾ ನೆಸ್ರೇಕರ, ಕೂಲಿಕಾರ್ಮಿಕ ಮಹಿಳೆ, ಸಂಗಮೇಶ್ವರ
–ಪ್ರಭಾಕರ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.