ನರೇಗಾ ಕೆಲಸ; ಹಿರಿಯ ನಾಗರಿಕರಿಗೂ ಅವಕಾಶ
Team Udayavani, May 25, 2020, 8:49 AM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ರಾಜ್ಯ ನಿವೃತ್ತ ಸರಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ನಗರದಲ್ಲಿರುವ ಕಚೇರಿ ಸರಕಾರದ ನಿರ್ದೇಶನದಂತೆ ಮೇ 31ರ ವರೆಗೆ ಬಂದ್ ಇರುತ್ತದೆ.
ಹಿರಿಯ ನಾಗರಿಕರಿಗಾಗಿ ಸಂಘದಿಂದ ಆಗಬೇಕಾದ ತುರ್ತು ಕೆಲಸಗಳಿಗಾಗಿ ಸಂಘದ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ ಮೊ: 9845611968 ಅವರನ್ನು ಸಂಪರ್ಕಿಸಬಹುದು. ಗ್ರಾಮಗಳಲ್ಲಿರುವ ಹಿರಿಯ ನಾಗರಿಕರು ನರೇಗಾ ಮತ್ತು ಮಹಾತ್ಮಾ ಗಾಂಧಿ ಖಾತ್ರಿ ಉದ್ಯೋಗ ಯೋಜನೆಯಲ್ಲಿ ಕಾರ್ಯ ಮಾಡಬಯಸಿದರೆ ಅವರಿಗೆ ಅರ್ಧ ದಿವಸದ ಕೆಲಸ ನೀಡಿ ದಿನದ ಪೂರ್ತಿ ಕೆಲಸದ ಹಣ 275 ರೂ. ನೀಡಲಾಗುವುದು. ಈ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರಿಂದ ಮಾಹಿತಿ ಪಡೆಯಬಹುದು.
ಪಿಂಚಣಿ ಹಣ ಹೆಚ್ಚಿಸಿ: ಕೋವಿಡ್ ವೈರಸ್ ನಿಮಿತ್ತ ಲಾಕ್‌ಡೌನ್‌ದಿಂದಾಗಿ ದುಡಿಮೆ ಇಲ್ಲದ ಕಾರಣ ಪಿಎಫ್ ಮಾಸಿಕ ಪಿಂಚಣಿ 1 ಸಾವಿರ ರೂ. ಪಡೆಯುತ್ತಿರುವ ಹಿರಿಯ ನಾಗರಿಕರು ಮತ್ತು ಅವರ ಕುಟುಂಬ ವರ್ಗದವರು ತೊಂದರೆಯಲ್ಲಿದ್ದಾರೆ. ಆದ್ದರಿಂದ 1 ಸಾವಿರ ರೂ. ಪಿಎಫ್ ಪೆನ್ಶನ್ ಪಡೆಯುವ ಕಾರ್ಮಿಕರಿಗೆ 2 ಸಾವಿರ ರೂ. ಹೆಚ್ಚಿಸಿ 3 ಸಾವಿರ ರೂ. ನಿಗದಿ ಮಾಡಿ ಆದೇಶ ಹೊರಡಿಸಬೇಕೆಂದು ಸಂಘವು ಕೇಂದ್ರ ಸರಕಾರ ಒತ್ತಾಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.