14ರಿಂದ ರಂಗಧ್ವನಿ-ರಾಷ್ಟ್ರೀಯ ನಾಟಕೋತ್ಸವ


Team Udayavani, Mar 12, 2020, 3:32 PM IST

huballi-tdy-3

ಧಾರವಾಡ: ಇಲ್ಲಿಯ ರಂಗಾಯಣ ವತಿಯಿಂದ ಮಾ.15ರಿಂದ ಮಾ.19ರವರೆಗೆ ರಂಗಾಯಣ ಆವರಣದ ನಾಲ್ಕು ವೇದಿಕೆಗಳಲ್ಲಿ ರಂಗಧ್ವನಿ, ರಾಷ್ಟ್ರೀಯ ನಾಟಕೋತ್ಸವ, ರಂಗಭೂಮಿ ಸಾಹಿತ್ಯ, ವಿಮರ್ಶೆ ಹಾಗೂ ವಿನ್ಯಾಸ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಂಗ ವೇದಿಕೆ, ಯಲ್ಲೂಬಾಯಿ ಗುಳೇದಗುಡ್ಡ ವೇದಿಕೆ, ಡಾ|ಬಸವರಾಜ ಮಲ್ಲಶೆಟ್ಟಿ ವೇದಿಕೆ ಹಾಗೂ ಸಿ.ಜಿ.ಕೆ. ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ. ಶಿಲ್ಪಕಲಾ ಶಿಬಿರ ಮಾ.14ರಂದು ಸಮಾರೋಪ ಆಗಲಿದ್ದು, ಉಳಿದಂತೆ ಬೀದಿ ನಾಟಕ, ಪುಸ್ತಕ ಪ್ರದರ್ಶನ ಸೇರಿ ಪ್ರತಿ ದಿನ ಸಂಜೆ 7:00 ಗಂಟೆಗೆ ಬಹುಭಾಷೆ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಮಾ.18ರಂದು ಬೆಳಿಗ್ಗೆ 10:30 ಗಂಟೆಗೆ ಡಾ|ಬಾಳಣ್ಣ ಶೀಗಿಹಳ್ಳಿ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಡಾ|ಸಿದ್ಧಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಡಾ| ಬಿ.ಆರ್‌.ಪೊಲೀಸ್‌ ಪಾಟೀಲ, ಶ್ರೀಧರ ಹೆಗಡೆ ಭಾಗವಹಿಸಲಿದ್ದು, 12:00 ಗಂಟೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶಿಲ್ಪವನ ಅನಾವರಣಗೊಳಿಸುವರು. 12:15 ಗಂಟೆಗೆ “ರಂಗಭೂಮಿಯಲ್ಲಿ ಭಾರತೀಯತೆ’ ಬಗ್ಗೆ ಮೈಸೂರಿನ ಶ್ರೀನಿವಾಸ(ಪಾಪು) ವಿಷಯ ಮಂಡಿಸಲಿದ್ದಾರೆ. ಅಂದು ಸಂಜೆ 4:30 ಗಂಟೆಗೆ ಡಾ| ಪಾಂಡುರಂಗ ಪಾಟೀಲ ಜಾನಪದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ತಂಡಗಳಿಂದ ಜಾನಪದ ಕಲಾ ಪ್ರದರ್ಶನ ನಡೆಯಲಿದೆ ಎಂದರು.

ಅಂದು ಸಂಜೆ 7:00 ಗಂಟೆಗೆ ನಡೆಯುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಚಿವ ಸಿ.ಟಿ.ರವಿ ಚಾಲನೆ ನೀಡಲಿದ್ದು, ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಶಾಸಕ ಅಮೃತ ದೇಸಾಯಿ, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಪಾಲ್ಗೊಳ್ಳಲಿದ್ದಾರೆ. 7:30 ಗಂಟೆಗೆ ಮೈಸೂರಿನ ನಟನಾ ತಂಡ “ಕೆಂಪು ಕಣಗಲೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಮಾ.16ರಂದು ಬೆಳಿಗ್ಗೆ 10:30 ಗಂಟೆಗೆ “ರಂಗಸಾಹಿತ್ಯ’ ವಿಚಾರ ಸಂಕಿರಣಕ್ಕೆ ಪರಿಸರವಾದಿ ಶಂಕರ ಕುಂಬಿ ಚಾಲನೆ ನೀಡಲಿದ್ದು, ಜಾನಪದ ಕಥನಗಳನ್ನು ರಂಗಕ್ಕೆ ಅಳವಡಿಸುವ ಬಗ್ಗೆ ನಾಟಕಕಾರ ಹೂಲಿ ಶೇಖರ ವಿಷಯ ಮಂಡಿಸುವರು.

ರಂಗ ಸಮಾಜ ಸದಸ್ಯ ಸಿದ್ಧರಾಮ ಹಿಪ್ಪರಗಿ, ಕೃಷ್ಣಾ ಜವಳಿ ವಿಷಯ ವಿಸ್ತರಣೆ ಮಾಡಲಿದ್ದು, ಆಕಾಶವಾಣಿಯ ನಿವೃತ್ತ ನಿರ್ದೇಶಕ ಸಿ.ಯು.ಬೆಳ್ಳಕ್ಕಿ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 12:15 ಗಂಟೆಗೆ ರಂಗಸಾಹಿತ್ಯ; ಮಹಿಳೆ-ರಂಗಭಾಷೆ ಬಗ್ಗೆ ಕಾತ್ಯಾಯಣಿ ಕುಂಜಿಬೆಟ್ಟ ವಿಷಯ ಮಂಡಿಸಲಿದ್ದು, ಡಾ|ಅಮೃತ ಮಡಿವಾಳ, ಶ್ರೀಹರಿ ಧೂಪದ ವಿಷಯ ಮಂಡಿಸಲಿದ್ದಾರೆ. ಡಾ|ಶರಭೇಂದ್ರ ಸ್ವಾಮಿ ಬಿ.ಎಂ ಸಂವಾದ ನಡೆಸುವರು. ಮಧ್ಯಾಹ್ನ 3:00 ಗಂಟೆಗೆ ಬಳ್ಳಾರಿ ರಾಮಕ್ಕ ಮತ್ತು ತಂಡದಿಂದ “ಬುರ್ರಕಥಾ’ ಪ್ರಾತ್ಯಕ್ಷಿಕೆ ನಡೆಯಲಿದ್ದು, ಜೋಗಿಲು ಸಿದ್ಧರಾಜು ವಿಶ್ಲೇಷಣೆ ಮಾಡಲಿದ್ದಾರೆಂದು ತಿಳಿಸಿದರು.

ಅಂದು 4:30 ಗಂಟೆಗೆ ಜಾನಪದ ನೃತ್ಯ, ಹೆಜ್ಜೆ ಮಜಲು, ಭರತ ನಾಟ್ಯ ಜಾನಪದ ಕಲೆಗಳ ಪ್ರದರ್ಶನ, 6:30 ಗಂಟೆಗೆ ಎಸ್‌ಪಿ ವರ್ತಿಕ ಕಟಿಯಾರ್‌ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಪಾಲಿಕೆ ಆಯುಕ್ತ

ಸುರೇಶ ಇಟ್ನಾಳ್‌, ಎಂಜನಿಯರ್‌ ಡಾ|ವಿರೂಪಾಕ್ಷಪ್ಪ ಯಮಕನಮರಡಿ, ಬಿ.ವಿ.ರಾಜಾರಾಂ ಭಾಗವಹಿಸಲಿದ್ದಾರೆ. ಸಂಜೆ 7:30 ಗಂಟೆಗೆ ಏಕರಂಗ ಥೀಯಟರ್‌ ತಂಡ “ನಟ ಸಾಮ್ರಾಟ’ ನಾಟಕ ಪ್ರಸ್ತುತ ಪಡಿಸಲಿದೆ ಎಂದರು.

ಮಾ.17ರ ಬೆಳಿಗ್ಗೆ 10:00 ಗಂಟೆಗೆ ರಂಗ ವಿನ್ಯಾಸ ವಿಚಾರ ಸಂಕಿರಣಕ್ಕೆ ಅಲೋಕ ಚಟರ್ಜಿ ಚಾಲನೆ ನೀಡಲಿದ್ದು, ಪ್ರಾಚಾರ್ಯ ಕೆ.ಪಿ.ಅಶ್ವಥ ನಾರಾಯಣ ವಿಷಯ ಮಂಡಿಸಲಿದ್ದಾರೆ. ಬೆಂಗಳೂರು ರಂಗಾಯಣ ನಿರ್ದೇಶಕ ಚನ್ನಕೇಶವ, ಪತ್ರಕರ್ತ ಬಸವರಾಜ ಹೊಂಗಲ ವಿಷಯ ವಿಸ್ತರಿಸುವರು. ಸಾಹಿತಿ ಪ್ರಜ್ಞಾ ಮತ್ತಿಹಳ್ಳಿ ಸಂವಾದ ನಡೆಸಲಿದ್ದು, ಸಂಜೆ 4:30 ಗಂಟೆಗೆ ಜಾನಪದ ಕಲಾ ಪ್ರದರ್ಶನ ನಡೆಯಲಿವೆ. ಅಂದು ಸಂಜೆ 6:30 ಗಂಟೆಗೆ ಡಿಸಿ ದೀಪಾ ಚೋಳನ್‌ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, 7:30 ಗಂಟೆಗೆ ದಯಾದೃಷ್ಟಿ ರಂಗವಿನಾಯಕ ರಂಗ ಮಂಡಳಿ “ಪಾರ್ಕ್‌'(ಹಿಂದಿ), 8:30 ಗಂಟೆಗೆ ಅರ್ಣವ ಆರ್ಟ್ಸ್ ಟ್ರಸ್ಟ್‌ ತಂಡ ‘ಟು ಕಿಲ್‌ ಆರ್‌ ನಾಟ್‌ ಟು ಕಿಲ್‌’ ನಾಟಕ ಪಸ್ತುತ ಪಡಿಸಲಿವೆ. ಪ್ರತಿನಿತ್ಯ ಬೆಳಿಗ್ಗೆ 10:00 ರಿಂದ 10:30ರವರೆಗೆ ರಂಗ ಗೀತೆಗಳ ಪ್ರದರ್ಶನ ನಡೆಯಲಿವೆ ಎಂದು ತಿಳಿಸಿದರು.

ಮಾ.18ರ ಬೆಳಿಗ್ಗೆ 10:30 ಗಂಟೆಗೆ “ರಂಗವಿಮರ್ಶೆ’ ವಿಚಾರ ಸಂಕಿರಣಕ್ಕೆ ಡಾ| ವೀರಣ್ಣ ರಾಜೂರ ಚಾಲನೆ ನೀಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸುವರು. ರಂಗವಿಮರ್ಶೆ ಪ್ರಸ್ತುತಿ, ಅಂದು-ಇಂದು ಬಗ್ಗೆ ಪತ್ರಕರ್ತ ಬಂಡು ಕುಲಕರ್ಣಿ ವಿಷಯ ಮಂಡಿಸಲಿದ್ದು, ನಟರಾದ ಸುರೇಶ ಕುಲಕರ್ಣಿ, ರವಿ ಕುಲಕರ್ಣಿ ವಿಷಯ ವಿಸ್ತರಿಸುವರು. ಡಾ| ಬಿ.ಎ.ಉಪಾಧ್ಯಾ ಸಂವಾದ ನಡೆಲಿದ್ದಾರೆ.

12:15 ಗಂಟೆಗೆ ನಾಟಕಗಳ ಪ್ರಾಯೋಗಿಕ ವಿಮರ್ಶೆ ಬಗ್ಗೆ ಗುಡಿಹಳ್ಳಿ ನಾಗರಾಜ ವಿಷಯ ಮಂಡಿಸಲಿದ್ದು, ಡಿ.ಎಚ್‌.ಕೋಲಾರ್‌, ಡಾ| ಬಸವರಾಜ ಹೊನ್ನಳ್ಳಿ ವಿಷಯ ವಿಸ್ತರಿಸುವರು. ಆರ್‌. ವೆಂಕಟರಾಜು ಸಂವಾದ ನಡೆಸುವರು. ಮಧ್ಯಾಹ್ನ 3:00ಗಂಟೆಗೆ ಮಲ್ಲಪ್ಪ ಹೊಂಗಲ ತಂಡದಿಂದ ಬೀದಿ ನಾಟಕ ನಡೆಯಲಿದೆ. ಸಂಜೆ 4:30 ಗಂಟೆಗೆ ವಿವಿಧ ಕಲಾ ತಂಡಗಳಿಂದ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದ್ದು, ಸಂಜೆ 7:00 ಗಂಟೆಗೆ ರಂಗ ವಿಶಾರದ ಥಿಯೇಟರ್‌ “ಬೂಡೆ ನೇ ಕಹಾ'(ಹಿಂದಿ) ನಾಟಕ ಪ್ರದರ್ಶನವಾಗಲಿದೆ ಎಂದರು.

ಮಾ.19ರಂದು ಬೆಳಿಗ್ಗೆ 10:30ಗಂಟೆಗೆ ಸಾಹಿತಿಗಳಾದ ಕೆ.ಎಚ್‌.ನಾಯಕ, ಶಂಕರ ಹಲಗತ್ತಿ, ಹರ್ಷ ಡಂಬಳ ಸಮೀಕ್ಷಕರ ನುಡಿ ವ್ಯಕ್ತಪಡಿಸಲಿದ್ದು, ಮಧ್ಯಾಹ್ನ 3:00 ಗಂಟೆಗೆ ಬೀದಿ ನಾಟಕ ನಡೆಯಲಿದೆ. 4:00 ಗಂಟೆಗೆ ಜಾನಪದ ಕಲಾ ಪ್ರದರ್ಶನ, ಸಮಾರೋಪ ಭಾಷಣ ನಡೆಯಲಿದೆ ಎಂದರು.

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

DK SHI NEW

DCM; ಸಂಪನ್ಮೂಲ ಕ್ರೋಡೀಕರಣ ಸಮಿತಿ ಜತೆ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.