ಜು.1ರಿಂದ ರಾಷ್ಟ್ರೀಯ ಮಾದರಿ ಸಮೀಕ್ಷೆ: ಲೀನಾ


Team Udayavani, Jun 21, 2017, 1:22 PM IST

hub3.jpg

ಹುಬ್ಬಳ್ಳಿ: ಗ್ರಾಹಕರ ಬಳಕೆಯ ಖರ್ಚು-ವೆಚ್ಚ ಹಾಗೂ ಸಾಮಾಜಿಕ ಶಿಕ್ಷಣ, ಆರೋಗ್ಯ ವೆಚ್ಚಗಳ ಕುರಿತು ಜುಲೈ 1ರಿಂದ 2018ರ ಜೂನ್‌ 30ರ ವರೆಗೆ ರಾಷ್ಟ್ರೀಯ ಮಾದರಿ ಸಮೀûಾ ಕಾರ್ಯಾಲಯದಿಂದ (ಎನ್‌ಎಸ್‌ಎಸ್‌ಒ) ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಇಲಾಖೆಯ ಬೆಂಗಳೂರಿನ ವಲಯ ಕಚೇರಿಯ ನಿರ್ದೇಶಕಿ, ಹುಬ್ಬಳ್ಳಿ ಕಾರ್ಯಾಲಯದ ಉಸ್ತುವಾರಿ ಎಸ್‌. ಲೀನಾ ಹೇಳಿದರು. 

ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಪ್ರಾಂತೀಯ ಅಧಿಕಾರಿಗಳಿಗೆ ಆಯೋಜಿಸಿರುವ ಎನ್‌ಎಸ್‌ಎಸ್‌ಒ 75ನೇ ಸುತ್ತಿನ ಸಮೀಕ್ಷೆಯ ಪ್ರಶ್ನಾವಳಿ, ಸಿದ್ಧಾಂತ ಮತ್ತು ವ್ಯಾಖ್ಯೆಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಸಮೀಕ್ಷೆಯಲ್ಲಿ ಕಲೆ ಹಾಕಲಾದ ಮಾಹಿತಿ ಉಪಯೋಗಿಸಿಕೊಂಡು ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿನ ಜೀವನಮಟ್ಟ, ಗ್ರಾಹಕ ಕೌಟುಂಬಿಕ ಮಾಸಿಕ ಸರಾಸರಿ ಅನುಭೋಗ ವೆಚ್ಚ, ಕುಟುಂಬದ ಖರೀದಿಯ ಸಾಮರ್ಥ್ಯಗಳ ಬಗೆಗೆ ಸೂಚಕಗಳನ್ನು ಅಭಿವೃದ್ಧಿ ಪಡಿಸಬಹುದಾಗಿದೆ.

ಆರೋಗ್ಯದ ಸಮೀಕ್ಷೆಯಿಂದ ಆರೋಗ್ಯ ಕ್ಷೇತ್ರದಲ್ಲಿನ ಮೂಲ ಮಾಹಿತಿಗಳನ್ನು, ದೇಶದ ವಿವಿಧ ಪ್ರದೇಶಗಳಲ್ಲಿ ಪುರುಷ ಮತ್ತು ಮಹಿಳೆಯರಲ್ಲಿರುವ ಅಸ್ವಸ್ಥತೆಯ ಬಗ್ಗೆ ಮಾಹಿತಿ ಪಡೆಯುವುದಾಗಿದೆ. ಜೊತೆಗೆ ಸರಕಾರವು ಒದಗಿಸುವ ಆರೋಗ್ಯ ಸೇವೆ ಮತ್ತು ಆರೋಗ್ಯದ ಮೇಲಿನ ವೆಚ್ಚಗಳ ಬಗೆಗೆ ಮಾಹಿತಿ ಪಡೆಯುವುದು ಸಮೀಕ್ಷೆಯ ಉದ್ದೇಶವಾಗಿದೆ ಎಂದರು. 

ಶಿಕ್ಷಣದ ಮೇಲಿನ ಸಮೀಕ್ಷೆಯ ಮೂಲ ಉದ್ದೇಶ ಶಿಕ್ಷಣದ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆ, ಕುಟುಂಬದಲ್ಲಿ ಶಿಕ್ಷಣದ ವೆಚ್ಚ, ಶಾಲೆ ಬಿಟ್ಟ ಮಕ್ಕಳ ಬಗ್ಗೆ, ಪ್ರಸ್ತುತ ಹಾಜರಾತಿ ಬಗ್ಗೆ ಹಾಗೂ ಸಾಕ್ಷರತೆಯ ಬಗ್ಗೆ, ಶಿಕ್ಷಣಮಟ್ಟ ಮತ್ತು ಉಚಿತ ಶಿಕ್ಷಣದ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು.

ಸಮಯಕ್ಕೆ ಸರಿಯಾದ ಸಂಗ್ರಹ ಹಾಗೂ ಸಿದ್ಧಾಂತದ ಏಕರೂಪದ ತಿಳಿವಳಿಕೆ ಸಮೀಕ್ಷೆಯ ಯಶಸ್ಸಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಸಮೀಕ್ಷೆ ಭಾರತಾದ್ಯಂತ ಎಲ್ಲ ಭಾಗಗಳಲ್ಲಿ ನಡೆಯಲ್ಲಿದ್ದು, ಅನುಭವಿ ಅಧಿಕಾರಿಗಳು ಮಾಹಿತಿ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದರು. 

ಬೆಂಗಳೂರಿನ ಡಿಪಿ ಕೇಂದ್ರದ ನಿರ್ದೇಶಕಿ  ಡಾ| ರಾಜೇಶ್ವರಿ ಕಸ್ತೂರಿ ಮಾತನಾಡಿ, ಎನ್‌ಎಸ್‌ಎಸ್‌ಒನಿಂದ ದೇಶಾದ್ಯಂತ 14,300 ಬ್ಲಾಕ್‌ ಗುರುತಿಸಲಾಗಿದೆ. ಒಂದು ಬ್ಲಾಕ್‌ನಲ್ಲಿ 16ರಿಂದ 24 ಮನೆಗಳು ಬರುತ್ತವೆ. ಅವುಗಳ ಸಮೀಕ್ಷೆ ಮಾಡಲಾಗುವುದು. ಕರ್ನಾಟಕದಲ್ಲಿ 569 ಬ್ಲಾಕ್‌ಗಳಿದ್ದು, ಅದರಲ್ಲಿ 292 ನಗರ, 304 ಗ್ರಾಮೀಣ ಪ್ರದೇಶಗಳು ಬರುತ್ತವೆ. 

ಆಯ್ಕೆ ಮಾಡಲಾದ ಮನೆಗಳಲ್ಲಿ ಯಾವ್ಯಾವ ಪದಾರ್ಥಗಳು ಖರ್ಚಾಗುತ್ತವೆ, ಎಷ್ಟು ಹಣ ವ್ಯಯಿಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಏನೇನು ಖರೀದಿಸಲಾಯಿತು. ತಿಂಗಳಿಗೆ ಆಹಾರಧಾನ್ಯಕ್ಕೆ ಹಾಗೂ ವಾರಕ್ಕೆ ತರಕಾರಿಗೆ ಎಷ್ಟು ಖರ್ಚು ಮಾಡಲಾಗುತ್ತಿದೆ ಹಾಗೂ ಮನೆಯಲ್ಲಿ ಎಷ್ಟು ಜನರು ಚಿಕಿತ್ಸೆ ಪಡೆದಿದ್ದಾರೆ.

ಎಷ್ಟು ಖರ್ಚು ಮಾಡಲಾಗಿದೆ. ಗಂಭೀರ ಕಾಯಿಲೆಯಿಂದ ಯಾರ್ಯಾರು ಬಳಲುತ್ತಿದ್ದಾರೆ. ಸರಕಾರಿ ಸೌಲಭ್ಯ ಪಡೆಯಲಾಗುತ್ತಿದೆಯೇ. ಸರಕಾರಿ ಮತ್ತು ಖಾಸಗಿ ವಿಮೆ ಮಾಡಿಸಲಾಗಿದೆಯೇ ಎಂಬ ಬಗ್ಗೆ ಹಾಗೂ ಮನೆಯಲ್ಲಿ ಎಷ್ಟು ಜನರು ಶಿಕ್ಷಣ ಪಡೆಯುತ್ತಿದ್ದಾರೆ.

ಮುಂದುವರಿಸಿದ್ದಾರೋ ಇಲ್ಲವೇ ಅರ್ಧಕ್ಕೆ ಮೊಟಕುಗೊಳಿಸಿದ್ದಾರೋ, ಶಿಷ್ಯ ವೇತನ ಪಡೆಯಲಾಗುತ್ತಿದೆಯೇ ಎಂಬ ಬಗ್ಗೆ ಹಾಗೂ ಶಿಕ್ಷಣದ ವೆಚ್ಚ ಹೆಚ್ಚಾಗಿದೆಯೇ, ಅದಕ್ಕೆ ಸಾಲ ಬೇಕಾಗುತ್ತದೆಯೋ, ಸರಕಾರದ ಮತ್ತು ಖಾಸಗಿ ಸೌಲಭ್ಯದ ಅವಶ್ಯಕತೆ ಇದೆಯೋ ಎಂಬ ಮಾಹಿತಿಯುಳ್ಳ ಸಮೀಕ್ಷೆಯನ್ನು ಎಲ್ಲ ವರ್ಗದವರಿಂದಲೂ ನಡೆಸಲಾಗುವುದು.

ಈ ಎಲ್ಲದರ ಕುರಿತು ಮಾಹಿತಿ ಪಡೆಯಲು ಒಂದು ಮನೆಯಲ್ಲಿ ಕನಿಷ್ಠ 45ರಿಂದ 90 ನಿಮಿಷಗಳ ಸಮಯಾವಕಾಶ ಬೇಕಾಗುತ್ತದೆ. ಇದೇ ರೀತಿಯ ಸಮೀಕ್ಷೆಯನ್ನು ರಾಜ್ಯ ಸರಕಾರವು ಮಾಡುತ್ತದೆ ಎಂದರು. 

ಕಾರ್ಯಾಗಾರದಲ್ಲಿ ಪ್ರಾಂತೀಯ ಕಾರ್ಯಾಲಯ ಹುಬ್ಬಳ್ಳಿ ಮತ್ತು ಉಪ ಪ್ರಾಂತೀಯ ಕಾರ್ಯಾಲಯಗಳಾದ ಬಳ್ಳಾರಿ, ಬೆಳಗಾವಿ ಮತ್ತು ಕಲಬುರ್ಗಿಯ ಅಧಿಕಾರಿಗಳ ಜೊತೆಗೆ ರಾಜ್ಯ ಸರಕಾರದ ಅಂಕಿ-ಸಂಖ್ಯಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಹಿರಿಯ ಸಾಂಖೀಕ ಅಧಿಕಾರಿಗಳಾದ ಎಸ್‌.ವಿ. ವಡಕಣ್ಣವರ ಸ್ವಾಗತಿಸಿದರು. ಕೆ.ಬಿ. ಕುಲಕರ್ಣಿ ವಂದಿಸಿದರು.  

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.