ರಾಯರ ನವವೃಂದಾವನ ಪೂಜಾ ವಿವಾದ : ಮಂತ್ರಾಲಯ ಮಠದ ಅರ್ಜಿ ವಜಾ
Team Udayavani, Jul 15, 2022, 10:22 PM IST
ರಾಯರ ನವವೃಂದಾವನ ಪೂಜಾ ವಿವಾದ : ಮಂತ್ರಾಲಯ ಮಠದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಧಾರವಾಡ : ಕೊಪ್ಪಳ ಜಿಲ್ಲೆಯ ಆನೆಗುಂದಿ ನವವೃಂದಾವನದ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಮಂತ್ರಾಲಯದ ರಾಯರ ಮಠದ ವತಿಯಿಂದ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇಲ್ಲಿನ ಹೈಕೋರ್ಟ್ ಪೀಠ, ವಜಾಗೊಳಿಸಿದೆ.
ರಘುವರ್ಯತೀರ್ಥರ ಆರಾಧನೆ ಹಾಗೂ ಜಯತೀರ್ಥರ ಆರಾಧನೆಯ ಪೂಜಾ ವಿಚಾರವಾಗಿ ಉತ್ತರಾದಿ ಮಠ ಮತ್ತು ರಾಯರ ಮಠದ ನಡುವೆ ವಿವಾದವಿದೆ.
ಹೀಗಾಗಿ ಕೊಪ್ಪಳ ಜಿಲ್ಲಾಡಳಿ ಜುಲೈ 13 ರಿಂದ 21ರ ವರೆಗೂ ನವವೃಂದಾನ ಪ್ರದೇಶ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು ತಪ್ಪು ಹಾಗೂ ತಮಗೂ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಮಂತ್ರಾಲಯದ ರಾಯರ ಮಠದವರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ನ ಏಕಸದಸ್ಯ ಪೀಠ, ವಾದ ಪ್ರತಿವಾದವನ್ನು ಆಲಿಸಿತು. ಬಳಿಕ ಜಿಲ್ಲಾಧಿಕಾರಿ ಹೊರಡಿಸಿದ್ದ ನಿಷೇಧಾಜ್ಞೆ ಆದೇಶವನ್ನು ಎತ್ತಿ ಹಿಡಿದು ರಿಟ್ ಅರ್ಜಿಯನ್ನು ವಜಾಗೊಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.