ನಾಳೆಯಿಂದ ನವರಾತ್ರಿ ಉತ್ಸವ
Team Udayavani, Sep 19, 2017, 1:01 PM IST
ಹುಬ್ಬಳ್ಳಿ: ಶರನ್ನವರಾತ್ರಿ ನಿಮಿತ್ತ ರಾಮಕೃಷ್ಣ- ವಿವೇಕಾನಂದ ಆಶ್ರಮದಲ್ಲಿ ಸೆ.20ರಿಂದ 30ರ ವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜರು, ಆಶ್ರಮದ ವತಿಯಿಂದ 11ನೇ ವರ್ಷದ ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ.
ಸೆ.20ರಂದು ಮಧ್ಯಾಹ್ನ 4ರಿಂದ ಮರಾಠಾ ಗಲ್ಲಿಯಿಂದ ಕಲ್ಯಾಣನಗರದ ರಂಗಮಂದಿರದವರೆಗೆ ಮೆರವಣಿಗೆ ನಡೆಯಲಿದೆ. ಸೆ.21ರಂದು ಬೆಳಗ್ಗೆ 9ಕ್ಕೆ ದುರ್ಗಾ ಪ್ರತಿಷ್ಠಾಪನೆ ನಡೆಯಲಿದ್ದು, ಬೆಳಗ್ಗೆ 10:30ಕ್ಕೆ ಗಣಹೋಮ, ನವಗ್ರಹ ಹೋಮ, ದುರ್ಗಾ ಹೋಮ ನಡೆಯಲಿದೆ.
ಸಂಜೆ 6:30ಕ್ಕೆ ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡುವರು ಎಂದು ತಿಳಿಸಿದರು. 22ರಂದು ಬೆಳಗ್ಗೆ 10ಕ್ಕೆ ಧನ್ವಂತರಿ ಹೋಮ ನಡೆಯಲಿದ್ದು, ಬೆಳಗ್ಗೆ 11:30ಕ್ಕೆ ವಿದುಷಿ ವೀಣಾ ಬಡಿಗೇರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸುವರು.
ಸಂಜೆ 6:30ಕ್ಕೆ ಬೇಂದ್ರೆ ಭವನದ ಅಧ್ಯಕ್ಷ ಡಾ| ಶಾಮಸುಂದರ ಬಿದರಕುಂದಿ ವಿಶೇಷ ಪ್ರವಚನ ನೀಡುವರು. 23ರಂದು ಬೆಳಗ್ಗೆ 10ಕ್ಕೆ ಲಘುರುದ್ರ ಹೋಮ ನಡೆಯಲಿದ್ದು, ಬೆಳಗ್ಗೆ 11:30ಕ್ಕೆ ವಿಜಯಕುಮಾರ ಪಾಟೀಲ ಅವರಿಂದ ಭಕ್ತಿ ಸಂಗೀತ ಜರುಗಲಿದೆ. ಸಂಜೆ 6:30ಕ್ಕೆ ವೀಣಾ ಬನ್ನಂಜೆ ಪ್ರವಚನ ನೀಡುವರು.
ಸೆ.24ರಂದು ಬೆಳಗ್ಗೆ 10ಕ್ಕೆ ಲಕ್ಷ್ಮೀನಾರಾಯಣ ಹೃದಯ ಹೋಮ ನಡೆಯಲಿದೆ. ಬೆಳಗ್ಗೆ 11:30ಕ್ಕೆ ಆಶ್ರಮದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30ಕ್ಕೆ ಶ್ರೀಕೃಷ್ಣ ಪಾರಿಜಾತ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು. 25ರಂದು ಬೆಳಗ್ಗೆ 10ಕ್ಕೆ ಶ್ರೀ ಲಲಿತಾ ಹೋಮ ನಡೆಯಲಿದ್ದು, ಬೆಳಗ್ಗೆ 11:30ಕ್ಕೆ ಧನುರ್ವಿದ್ಯೆ ಪ್ರದರ್ಶನ ನಡೆಯಲಿದೆ.
ಸಂಜೆ 6:30ಕ್ಕೆ ಶ್ರೀ ರಾಮದರ್ಶನ ಯಕ್ಷಗಾನ ಪ್ರಸಂಗ ನಡೆಯುವುದು. 26ರಂದು ಬೆಳಗ್ಗೆ 10ಕ್ಕೆ ವಿದ್ಯಾರ್ಥಿ ಹೋಮ ಆಯೋಜಿಸಲಾಗಿದೆ. ಸಂಜೆ 6:30ಕ್ಕೆ “ವಿಶ್ವಶಂಕರಾಕ್ಷರ ಯಕ್ಷ ನೃತ್ಯ ರೂಪಕ’ ಯಕ್ಷಗಾನ ಪ್ರಸಂಗ ಜರುಗುವುದು. 27ರಂದು ಬೆಳಗ್ಗೆ 10ಕ್ಕೆ ಸುಬ್ರಮಣ್ಯ ಹೋಮ ನಡೆಯಲಿದ್ದು, ಬೆಳಗ್ಗೆ 11:30ಕ್ಕೆ ಜಾನಪದ ಉತ್ಸವ ನಡೆಯಲಿದೆ.
ಸಂಜೆ 6:30ಕ್ಕೆ ಶಶಿಕಲಾ ದಾನಿ ಹಾಗೂ ಸುಜ್ಞಾನ ದಾನಿ ಅವರಿಂದ ಜಲತರಂಗ ಹಾಗೂ ಗಾಯನ ಜುಗಲ್‌ಬಂದಿ ನಡೆಯವುದು ಎಂದರು. 28ರಂದು ಬೆಳಗ್ಗೆ 10ಕ್ಕೆ ದುರ್ಗಾ ಹೋಮ ನಡೆಯಲಿದೆ. ಬೆಳಗ್ಗೆ 11:30ಕ್ಕೆ ಶ್ರೀನಿಧಿ ಕಾಮತ ಅವರಿಂದ ಭಕ್ತಿ ಸಂಗೀತ ಜರುಗಲಿದೆ. ಸಂಜೆ 6:30ಕ್ಕೆ ಇಮಾಮ್‌ಸಾಬ್ ವಲ್ಲೆಪ್ಪನವರ ಹಾಗೂ ಸಂಗಡಿಗರಿಂದ ಜಾನಪದ ಸಂಗೀತ ಕಾರ್ಯಕ್ರಮವಿದೆ.
ಸೆ.29ರಂದು ಬೆಳಗ್ಗೆ 10ಕ್ಕೆ ವಿಷ್ಣು ಸಹಸ್ರನಾಮ ಹೋಮವಿದ್ದು, ಬೆಳಗ್ಗೆ 11:15ಕ್ಕೆ ಪೂಜಾ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ವಿದ್ಯಾ ವೈದ್ಯ ಅವರಿಂದ ವೀಣಾವಾದನ ನಡೆಯಲಿದೆ. ಸಂಜೆ 6ಕ್ಕೆ ಭರತನಾಟ್ಯ ಪ್ರದರ್ಶನ, ಸಂಜೆ 7ಕ್ಕೆ “ಜಗತ್ ಜನನಿ ನೃತ್ಯ ರೂಪಕ’ ಪ್ರದರ್ಶನಗೊಳ್ಳಲಿದೆ.
ಸೆ.30ರಂದು ಬೆಳಗ್ಗೆ 10ಕ್ಕೆ ಗಾಯತ್ರಿ ಹೋಮ ನಡೆಯಲಿದ್ದು, ಸಂಜೆ 5:30ಕ್ಕೆ ದುರ್ಗಾದೇವಿ ಮೂರ್ತಿ ಮೆರವಣಿಗೆ ಹಾಗೂ ಡೊಳ್ಳು ಕುಣಿತದೊಂದಿಗೆ ಉಣಕಲ್ಲ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು ಎಂದರು. ಆಶ್ರಮದ ಟ್ರಸ್ಟಿ ಎಂ.ಎ. ಸುಬ್ರಮಣ್ಯ ಹಾಗೂ ವಿನಯ ಮಹಾರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.