ಎನ್‌ಸಿಸಿ ನಾಯಕತ್ವ ಶಿಬಿರ ಆರಂಭ
Team Udayavani, Jul 14, 2019, 3:21 PM IST
ಹುಬ್ಬಳ್ಳಿ: ಕೆಎಲ್ಇ ತಾಂತ್ರಿಕ ವಿವಿಯಲ್ಲಿ ಎನ್‌ಸಿಸಿ ನಾಯಕತ್ವ ಶಿಬಿರಕ್ಕೆ ಚಾಲನೆ ನೀಡಿ ಕರ್ನಲ್ ಜೆ.ಜೆ. ಅಬ್ರಹಾಂ ಮಾತನಾಡಿದರು.
ಹುಬ್ಬಳ್ಳಿ: ಎನ್‌ಸಿಸಿ ವಿದ್ಯಾರ್ಥಿಗಳು ಸಕ್ರಿಯವಾಗಿ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಸಂದೇಹಗಳನ್ನು ನಿವಾರಣೆ ಮಾಡಿಕೊಂಡು, ವ್ಯಕ್ತಿತ್ವ ವಿಕಸನ ಕೈಗೊಂಡಲ್ಲಿ ಶಿಬಿರ ಆಯೋಜನೆ ಸಾರ್ಥಕವಾಗುತ್ತದೆ ಎಂದು 28 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಜೆ.ಜೆ. ಅಬ್ರಹಾಂ ಹೇಳಿದರು.
ಕೆಎಲ್ಇ ತಾಂತ್ರಿಕ ವಿವಿ ಬಯೋಟೆಕ್ ಸಭಾಂಗಣದಲ್ಲಿ 10 ದಿನಗಳ ಎನ್‌ಸಿಸಿ ನಾಯಕತ್ವ ತರಬೇತಿ ಶಿಬಿರಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೆಡೆಟ್‌ಗಳು ವ್ಯಕ್ತಿತ್ವ ವಿಕಸನದ ಕುರಿತು ಮನಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಬೇಕು. ಪ್ರಶ್ನೆ ಕೇಳುವ ಪರಿಪಾಠ ಬೆಳೆಸಿಕೊಳ್ಳಬೇಕು. ಪ್ರಶ್ನೆ ಕೇಳುವುದಕ್ಕೆ ಹಿಂಜರಿದರೆ ಅದರಿಂದ ನಮಗೆ ನಷ್ಟವೇ ಹೊರತು ಬೇರೆಯವರಿಗಲ್ಲ ಎಂದರು.
ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ಉದ್ಯಮ, ನಾಯಕತ್ವ ಕುರಿತು ವಿವಿಧ ಉಪನ್ಯಾಸಗಳನ್ನು ಸಂಘಟಕರು ವ್ಯವಸ್ಥಿತವಾಗಿ ನಿಯೋಜಿಸಿದ್ದಾರೆ. ಕೆಡೆಟ್‌ಗಳು ಪ್ರತಿಯೊಂದು ಉಪನ್ಯಾಸವನ್ನು ಆಸಕ್ತಿಯಿಂದ ಕೇಳಬೇಕು. ಜೀವನಕ್ಕೆ ಅನುಕೂಲವಾಗುವ, ಭವಿಷ್ಯ ರೂಪಿಸುವ ಅಂಶಗಳನ್ನು ಶಿಬಿರದಿಂದ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಎನ್‌ಸಿಸಿ ಎಂದರೆ ಕೇವಲ ಸೈನ್ಯಕ್ಕೆ ಸೇರುವುದಕ್ಕಷ್ಟೇ ಅಲ್ಲ. ಸೈನ್ಯಕ್ಕೆ ಸೇರಲೇಬೇಕೆಂದು ನಾವು ಒತ್ತಡವನ್ನೂ ಹೇರುವುದಿಲ್ಲ. ಇಲ್ಲಿ ಶಿಸ್ತು ಕಲಿಸಿಕೊಡಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಂಡ 400 ಕೆಡೆಟ್‌ಗಳು ಶಿಸ್ತುಬದ್ಧ ವರ್ತನೆಯಿಂದ ಆಯೋಜಕರ ಶ್ರಮವನ್ನು ಸಾರ್ಥಕಪಡಿಸಬೇಕು ಎಂದರು. ಮುಖ್ಯ ತರಬೇತಿ ಅಧಿಕಾರಿ ಡೇನಿಯಲ್ ಅಬ್ರಹಾಂ, ಲೆಫ್ಟಿನೆಂಟ್ ಎ.ಡಿ. ಕಾಮತ, ಲೆಫ್ಟಿನೆಂಟ್ ಕರ್ನಲ್ ಎ. ವಿವೇಕಾನಂದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.