ಕಿಮ್ಸ್ ನ ಹಳೆಯ ಕಟ್ಟಡಕ್ಕೆ ಹೊಸ ರೂಪ
Team Udayavani, Sep 28, 2018, 5:41 PM IST
ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 5-6 ದಶಕಗಳಷ್ಟು ಹಳೆಯದಾದ ತುರ್ತು ಹಾಗೂ ಶಸ್ತ್ರಚಿಕಿತ್ಸಾ (ಓಟಿ) ಘಟಕ ಕಟ್ಟಡ ಇನ್ಮುಂದೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಕಟ್ಟಡವಾಗಿ ರೂಪ ಪಡೆಯಲಿದೆ.
ಕಿಮ್ಸ್‌ನ ಇದೇ ಘಟಕದಲ್ಲಿ ವರ್ಷಕ್ಕೆ ಸುಮಾರು 50-60 ಸಾವಿರ ಶಸ್ತ್ರಚಿಕಿತ್ಸೆಗಳನ್ನು ವೈದ್ಯರು ಕೈಗೊಳ್ಳುತ್ತಿದ್ದು, ಹಳೆಯ ಕಟ್ಟಡದಲ್ಲಿ ಹವಾ ನಿಯಂತ್ರಿತ ಯಂತ್ರ ಅಳವಡಿಸುವುದು ಕಷ್ಟವಾಗಿತ್ತು. ಆದರೆ ಬರುವ ದಿನಗಳಲ್ಲಿ ಈ ಕಟ್ಟಡ ಅತ್ಯಾಧುನಿಕ-ಸುಸಜ್ಜಿತ ಸೌಲಭ್ಯಗಳ ತಾಣವಾಗಲಿದೆ.
ಇರುವ ಕಟ್ಟಡದಲ್ಲೇ ಅಂದಾಜು 22 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯ, ಉಪಕರಣಗಳನ್ನೊಳಗೊಂಡ ತುರ್ತು ಹಾಗೂ ಶಸ್ತ್ರಚಿಕಿತ್ಸಾ ಘಟಕ ಸಂಕೀರ್ಣ ನಿರ್ಮಿಸಲು ಕಿಮ್ಸ್‌ನ ನಿರ್ದೇಶಕರು ಮುಂದಾಗಿದ್ದು,ಆ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಅಂದಾಜು ಪತ್ರಿಕೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ.
ಜಿ +4 ಮಾದರಿ ಕಟ್ಟಡ: ಅಂದಾಜು 22 ಕೋಟಿ ರೂ. ವೆಚ್ಚದಲ್ಲಿ ಜಿ+4 ಮಾದರಿಯಲ್ಲಿ ಒಟ್ಟು 3659.50 ಚದುರ ಮೀಟರ್ ವಿಸ್ತೀರ್ಣದಲ್ಲಿ ಈ ನೂತನ ತುರ್ತು ಹಾಗೂ ಶಸ್ತ್ರಚಿಕಿತ್ಸಾ ಘಟಕದ ಸಂಕೀರ್ಣ ನಿರ್ಮಾಣವಾಗುತ್ತಿದೆ. ಪ್ರತಿ ಮಹಡಿ ಅಂದಾಜು 605 ಚದುರ ಮೀಟರ್ ವಿಸ್ತೀರ್ಣ ಹೊಂದಿರಲಿದ್ದು,
ಡಿ.ಜಿ.ಸೆಟ್, ಸೋಲಾರ್ ಬಿಸಿ ನೀರು, ಮಳೆ ನೀರು ಕೊಯ್ಲು, ಎರಡು ಲಿಫ್ಟ್, ನಾಲ್ಕು ಸುಸಜ್ಜಿತ ಓಟಿಗಳು ಸೇರಿದಂತೆ ಇನ್ನಿತರೆ ಸೌಲಭ್ಯವನ್ನು ನೂತನ ಸಂಕೀರ್ಣ ಹೊಂದಲಿದೆ.
ನೆಲ ಮಾಳಿಗೆಯಲ್ಲಿ ವಾಹನಗಳ ನಿಲುಗಡೆ ಸ್ಥಳ, ಲಾಂಡ್ರಿ, ಉಗ್ರಾಣ ಹಾಗೂ ನೆಲಮಹಡಿಯಲ್ಲಿ ಪ್ರವೇಶ ದ್ವಾರ, ಕಾಯುವ ಸ್ಥಳ, ಎಮರ್ಜೆನ್ಸಿ ಟ್ರಾಮಾ, ಸಿಟಿ ಮಸೀನ್, ಸಾಮಾನ್ಯ ಓಟಿ, ಲ್ಯಾಬ್, ಎಕ್ಸರೇ, ಕಚೇರಿ ಹಾಗೂ ಮೊದಲ ಮಹಡಿಯಿಂದ ನಾಲ್ಕನೇ ಮಹಡಿವರೆಗೆ ತೀವ್ರ ನಿಗಾ ಘಟಕ (ಐಸಿಯು)ದ ವಾರ್ಡ್‌ಗಳು ಇರಲಿವೆ.
ನೂತನ ತುರ್ತು ಮತ್ತು ಶಸ್ತ್ರಚಿಕಿತ್ಸಾ ಘಟಕ ಸಂಕೀರ್ಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್ ವಿಭಾಗ ನಿರ್ಮಿಸಲಿದ್ದು, ಇನ್ನು 2-3 ತಿಂಗಳಲ್ಲಿ ಕಟ್ಟಡ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಿಮ್ಸ್ ಈ ಮೊದಲು 150 ಎಂಬಿಬಿಎಸ್ ಸೀಟ್ ಪ್ರವೇಶ ಅವಕಾಶ ಹೊಂದಿತ್ತು. ಈಗ ಅದು 200 ಸೀಟ್‌ಗಳಿಗೆ ವಿಸ್ತರಣೆಯಾಗಿದ್ದು, ಅದಕ್ಕೆ ತಕ್ಕಂತೆ ಸೌಲಭ್ಯ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಕಿಮ್ಸ್‌ನ ಆವರಣದಲ್ಲಿ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರಕಾರ
ಈಗಾಗಲೇ ಅದಕ್ಕಾಗಿ ತನ್ನ ಪಾಲಿನ 30 ಕೋಟಿ ರೂ. ಬಿಡುಗಡೆ ಮಾಡಿ ರಾಜ್ಯ ಸರಕಾರಕ್ಕೆ ಕಳುಹಿಸಿದೆ. ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್ ವಿಭಾಗವು ಈ ನೂತನ ಸಂಕೀರ್ಣ ನಿರ್ಮಾಣದ ಹೊಣೆ ಹೊರಲಿದೆ.
ಕಿಮ್ಸ್‌ನಲ್ಲಿ ತುರ್ತು ಮತ್ತು ಶಸ್ತ್ರಚಿಕಿತ್ಸಾ ಘಟಕದ ಕಟ್ಟಡ ಸುಮಾರು 6-7 ದಶಕಗಳದ್ದಾಗಿದ್ದು, ಈಗ ಅಲ್ಲಿ ಅಂದಾಜು 22 ಕೋಟಿ ರೂ. ವೆಚ್ಚದಲ್ಲಿ ಜಿ+4 ಮಾದರಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ನೂತನ ಸಂಕೀರ್ಣ ನಿರ್ಮಿಸಲಾಗುವುದು. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 2-3 ತಿಂಗಳಲ್ಲಿ ಈ ಕಾಮಗಾರಿ ಕಾರ್ಯಾರಂಭವಾಗಲಿದೆ.
. ಡಾ| ದತ್ತಾತ್ರೇಯ ಡಿ. ಬಂಟ್,
ನಿರ್ದೇಶಕರು, ಕಿಮ್ಸ್
. ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.