ಬೇಸಿಗೆಲೂ ನೀರಿಗಿಲ್ಲ  ದೂರು


Team Udayavani, May 27, 2018, 5:23 PM IST

27-may-24.jpg

ಬೆಳಗಾವಿ: ಜಿಲ್ಲೆಯ ಜನ ಈಗ ನಿರಾಳವಾಗಿದ್ದಾರೆ. ಕಾರಣ ಎಲ್ಲಿಯೂ ಕುಡಿಯುವ ನೀರಿನ ಹಾಹಾಕಾರ ಕಾಣುತ್ತಿಲ್ಲ. ಬಿಸಿಲು ಜಾಸ್ತಿಯಿದ್ದರೂ ನೀರಿಗಾಗಿ ಪರದಾಡುತ್ತಿರುವ ದೃಶ್ಯಗಳು ಗೋಚರಿಸುತ್ತಿಲ್ಲ.

ಸಾಮಾನ್ಯವಾಗಿ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತ ಎನ್ನುವಂತಿರುತ್ತದೆ. ಹಳ್ಳಿಗಳಲ್ಲಿ ಸಾಲು ಸಾಲು ಕೊಡ, ಬಾವಿಗಳ ಮುಂದೆ ನೀರಿಗಾಗಿ ಪೈಪೋಟಿ ಸಾಮಾನ್ಯ. ಮೇ ತಿಂಗಳ ಅಂತ್ಯದಲ್ಲಿ 90 ಕ್ಕೂ ಹೆಚ್ಚು ಹಳ್ಳಿಗಳಿಗೆ ಟ್ಯಾಂಕರ್‌ ನೀರೇ ಗತಿ. ಆಗ ಟ್ಯಾಂಕರ್‌ ನೀರು ಪೂರೈಕೆಯಾಗದ ಹಳ್ಳಿಗಳೇ ಇರಲಿಲ್ಲ. ಚಿಕ್ಕೋಡಿ, ಅಥಣಿ, ರಾಯಬಾಗ ತಾಲೂಕುಗಳಲ್ಲಿ ಪರಿಸ್ಥಿತಿ ಎಲ್ಲಕ್ಕಿಂತ ಭೀಕರವಾಗಿರುತ್ತದೆ.

ಆದರೆ ಈ ಬಾರಿ ಅಂತಹ ಹಾಹಾಕಾರ, ನೀರಿಗಾಗಿ ಅಲೆದಾಟ, ಉದ್ದದ ಕೊಡಗಳ ಸಾಲು ಕಂಡುಬಂದಿಲ್ಲ. ನೀರಿಗಾಗಿ ಜಿಲ್ಲಾಡಳಿತ, ತಾಲೂಕು ಅಧಿಕಾರಿಗಳ ವಿರುದ್ಧ ಆಕ್ರೋಶ ಹಾಗೂ ಪ್ರತಿಭಟನೆ ವ್ಯಕ್ತವಾಗಿಲ್ಲ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆ. ಜಲಾಶಯದಲ್ಲಿ ನೀರು ಸಂಗ್ರಹ ಮತ್ತು ಆಗಾಗ ಬಿದ್ದ ಮಳೆಯೇ ಇದಕ್ಕೆ ಕಾರಣ.

ಬೆಳಗಾವಿ ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಜನರ ದಾಹಕ್ಕೆ ದೊಡ್ಡಮಟ್ಟದ ಪರಿಹಾರ ನೀಡಿವೆ. ಇದರಿಂದ ಬರ ಪ್ರದೇಶದ ಹಳ್ಳಿಗಳಲ್ಲೂ ನೀರು ಕಾಣುತ್ತಿದೆ. ಕೆಲ ಹಳ್ಳಿಗಳಲ್ಲಿ ನಗರ ಪ್ರದೇಶಗಳಿಗಿಂತ ಉತ್ತಮ ನೀರು ಸಿಗುತ್ತಿದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದಾಗಿ ಟ್ಯಾಂಕರ್‌ಗಳ ಪ್ರಮಾಣ ಗಣನೀಯವಾಗಿ ಇಳಿದಿದೆ.

ಕಳೆದ ವರ್ಷ ಇದೇ ಅವಧಿಗೆ ಚಿಕ್ಕೋಡಿ, ರಾಯಬಾಗ, ಅಥಣಿ, ಹುಕ್ಕೇರಿ, ರಾಮದುರ್ಗ, ಬೈಲಹೊಂಗಲ ಮೊದಲಾದ ತಾಲೂಕುಗಳ 95 ಕ್ಕೂ ಹೆಚ್ಚು ಹಳ್ಳಿಗಳಿಗೆ 400 ರಿಂದ 500 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಇದೇ ಅವಧಿಗೆ ಕೇವಲ 2 ಗ್ರಾಮಗಳಿಗೆ ಮಾತ್ರ ಟ್ಯಾಂಕರ್‌ ನೀರು ಹೋಗುತ್ತಿದೆ. ಹುಕ್ಕೇರಿ ತಾಲೂಕಿನ ಅಮ್ಮಣಗಿ ಹಾಗೂ ಯಾದಗೂಡ ಗ್ರಾಮಗಳ ಜನರು ಮಾತ್ರ ಟ್ಯಾಂಕರ್‌ ನೀರು ಪಡೆಯುತ್ತಿದ್ದಾರೆ. ಈ ಗ್ರಾಮಗಳಿಗೂ ಸಹ ಸದ್ಯದಲ್ಲೇ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಸ್ಥಗಿತಗೊಳಿಸಿ ಉಳಿದ ಕಡೆಗಳಂತೆ ನೀರು ಸರಬರಾಜು ಮಾಡಲಾಗುತ್ತದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಸಾಕಷ್ಟು ಕಡಿಮೆ ಮಾಡಿದ್ದೇವೆ. ಜೊತೆಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಲಾಗಿದೆ. ಪ್ರಗತಿಯಲ್ಲಿರುವ ಎಲ್ಲ ಯೋಜನೆಗಳು ಪೂರ್ಣಗೊಂಡು ಕಾರ್ಯ ಆರಂಭಿಸಿದರೆ ಬೆಳಗಾವಿ ಜಿಲ್ಲೆಯನ್ನು ಟ್ಯಾಂಕರ್‌ ನೀರು ಪೂರೈಕೆ ಮುಕ್ತ ಜಿಲ್ಲೆಯನ್ನಾಗಿ ಮಾಡಬಹುದು ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಅಧಿಕಾರಿಗಳು.

ಐದು ತಾಲೂಕುಗಳ ವ್ಯಾಪ್ತಿ ಒಳಗೊಂಡಿರುವ ಬೆಳಗಾವಿ ವಿಭಾಗದಲ್ಲಿ 20 ಬಹುಗ್ರಾಮ ಯೋಜನೆಗಳಿಂದ ಸುಮಾರು 120ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೂ ಎಂಟು ಯೋಜನೆಗಳು ಪೂರ್ಣಗೊಂಡು 70 ಹಳ್ಳಿಗಳಿಗೆ ನೀರು ದೊರೆಯಲಿದೆ. ಆಗಾಗ ಬಿದ್ದ ಉತ್ತಮ ಮಳೆಯಿಂದ ಜಲಾಶಯದಲ್ಲಿ ನೀರು ನಿಂತಿತು. ಅಂತರ್ಜಲ ಮಟ್ಟ ಹೆಚ್ಚಿತು. ಇದರ ಜೊತೆಗೆ
ಸಮರ್ಪಕ ನಿರ್ವಹಣೆ ಎಲ್ಲ ಸಮಸ್ಯೆ ದೂರ ಮಾಡಿದವು ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರ್‌ ಎಲ್‌.ಎಸ್‌. ಗಾಣಿಗೇರ ಹೇಳಿದರು.

ಅದೇ ರೀತಿ ಚಿಕ್ಕೋಡಿ ವಿಭಾಗದ ಅಥಣಿ, ರಾಯಬಾಗ, ಹುಕ್ಕೇರಿ, ಚಿಕ್ಕೋಡಿ ಹಾಗೂ ಗೋಕಾಕ ತಾಲೂಕಿನಲ್ಲಿ ಸಹ ಟ್ಯಾಂಕರ್‌ಗಳ ಅನಿವಾರ್ಯತೆ ಕಾಣುತ್ತಿಲ್ಲ. ಎರಡು ವರ್ಷಗಳ ಹಿಂದೆ ಇದೇ ಅವಧಿಗೆ ಈ ವಿಭಾಗದ 130 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಬಾರಿ ನದಿಯಲ್ಲಿ ನೀರು ಇದ್ದ ಕಾರಣ ಅಂತಹ ಗಂಭೀರ ಸಮಸ್ಯೆ ಎಲ್ಲಿಯೂ ಕಂಡಿಲ್ಲ.

ಚಿಕ್ಕೋಡಿ ವಿಭಾಗದಲ್ಲಿ 44 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು ಇದರಿಂದ 200ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಕೊಡಲಾಗುತ್ತಿದೆ. ಘಟಪ್ರಭಾ ನದಿ ವ್ಯಾಪ್ತಿಯ ನಾಗರಮುನ್ನೋಳಿ ಹಾಗೂ ಕಬ್ಬೂರ ಹೋಬಳಿಯ ಎರಡೂ ಯೋಜನೆಗಳು ಪೂರ್ಣಗೊಂಡಿದ್ದು ಇಲ್ಲಿಯೂ ಟ್ಯಾಂಕರ್‌ ನೀರಿಗೆ ಪರಿಹಾರ ಸಿಕ್ಕಿದೆ.

ಚಿಕ್ಕೋಡಿ ತಾಲೂಕಿನ ಬಹು ಗ್ರಾಮ ಯೋಜನೆಗಳು ಹಾಗೂ ಅದರ ವ್ಯಾಪ್ತಿಯ 95 ಹಳ್ಳಿಗಳು ಕೃಷ್ಣಾ, ವೇದಗಂಗಾ, ದೂದಗಂಗಾ, ಪಂಚಗಂಗಾ ಹಾಗೂ ಘಟಪ್ರಭಾ ನದಿಗಳ ಮೇಲೆ ಅವಲಂಬಿತವಾಗಿವೆ. 2016 ರಲ್ಲಿ ಇದೇ ಅವಧಿಯಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ 29 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಇತ್ತು. 2017 ರಲ್ಲಿ ಇದರ ಸಂಖ್ಯೆ 18 ಗ್ರಾಮಗಳಿಗೆ ಇಳಿಕೆಯಾಗಿತ್ತು. ಈಗ ನಾಗಮುನ್ನೋಳಿ ಮತ್ತು 10 ಹಾಗೂ ಕಬ್ಬೂರ ಮತ್ತು 8 ಹಳ್ಳಿಗಳಿಗೆ ಬಹು ಗ್ರಾಮ ಯೋಜನೆ ಬಂದಿರುವ ಕಾರಣ ಅಲ್ಲಿಯೂ ಟ್ಯಾಂಕರ್‌ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.

ಸದಾ ಬರಗಾಲದ ಅಥಣಿ ತಾಲೂಕಿನಲ್ಲಿ ಈಗ ಬಹು ಗ್ರಾಮ ಯೋಜನೆಗಳಿಂದ 80 ಹಳ್ಳಿಗಳಿಗೆ ನಿರಂತರವಾಗಿ ನೀರು ಕೊಡುತ್ತಿದ್ದೇವೆ. ಬೇಸಿಗೆಯ ಈ ಸಮಯದಲ್ಲಿ ಚಿಕ್ಕೋಡಿ ವಿಭಾಗದಲ್ಲಿ ಎರಡು ಹಳ್ಳಿಗಳಿಗೆ ಮಾತ್ರ ನೀರು ಕೊಡುತ್ತಿದ್ದೇವೆ ಇದು ನಿಜಕ್ಕೂ ದೊಡ್ಡ ಸಾಧನೆ ಮತ್ತು ನಮ್ಮ ಹೊರೆ ಕಡಿಮೆಮಾಡಿದೆ. ಜನರ ಆತಂಕ ಸಹ ದೂರವಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ
ಚಿಕ್ಕೋಡಿ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರ್‌ ಎ.ಎಸ್‌. ಬಣಗಾರ ಹೇಳಿದರು. 

ಕೇಶವ ಆದಿ

ಟಾಪ್ ನ್ಯೂಸ್

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

de

Kundapura: ಗುಲ್ವಾಡಿ; ಗಾಯಾಳು ಸಾವು

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.