ಕಾಮಗಾರಿ ತ್ವರಿತ ಅನುಷ್ಠಾನಕ್ಕೆ ಸೂಚನೆ
Team Udayavani, May 27, 2017, 3:00 PM IST
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ದ್ವಿತೀಯ ಹಂತದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಗೊಂಡಿದ್ದರೂ ತ್ವರಿತಗತಿಯಲ್ಲಿ ಕಾಮಗಾರಿ ಅನುಷ್ಠಾನಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷ ಪಿ.ಮಣಿವಣ್ಣನ್ ಹೇಳಿದರು.
ಐಟಿ ಪಾರ್ಕ್‌ನ ಕೆಯುಐಡಿಎಫ್ಸಿ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಸ್ಮಾರ್ಟ್‌ಸಿಟಿ ನಿರ್ದೇಶಕ ಮಂಡಳಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಗೆ ಅಗತ್ಯ ಅನುದಾನ ನೀಡುತ್ತಿವೆ. ತ್ವರಿತಗತಿಯಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಬೇಕು.
ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಸಮರ್ಪಕ ಅನುಷ್ಠಾನ ಮುಖ್ಯ ಎಂದರು. ತ್ವರಿತ ಗತಿಯಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಟೆಂಡರ್ ಪ್ರಕ್ರಿಯೆ ಆರಂಭಗೊಳಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.
ರಾಜ್ಯ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುತ್ತಿದ್ದು, ಸಂಬಂಧಿತ ಇಲಾಖೆ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಪೂರಕ ಸಹಕಾರ ನೀಡದಿದ್ದರೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು. 129 ಕೋಟಿ ರೂ. ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆ ಯೋಜನೆಗೆ ನೇರ ಟೆಂಡರ್‌ಗೆ ಅವಕಾಶ ನೀಡಲು ಸಾಧ್ಯವಿದೆಯೋ ಪರಿಶೀಲಿಸಬೇಕು.
ಸುಮ್ಮನೆ ಸಮಯ ವ್ಯರ್ಥವಾಗುವುದು ಬೇಡ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕು. ಸೌರ ವಿದ್ಯುತ್ ಉತ್ಪಾದನೆ ಯೋಜನೆಗೆ ಸಾಕಷ್ಟು ಕಂಪನಿಗಳು ಆಸಕ್ತಿ ಹೊಂದಿವೆ. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು. ಉಚಿತ ವೈ-ಫೈ ಕಾರಿಡಾರ್ ಮಾಡುವ ಕುರಿತು ಪುನರ್ ಆಲೋಚನೆ ಮಾಡುವುದು ಒಳಿತು.
ಕೆಲ ಹೊರ ದೇಶಗಳಲ್ಲಿ ಉಚಿತ ವೈ-ಫೈಯನ್ನು ಕೆಲ ಹ್ಯಾಕರ್‌ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವೈ-ಫೈ ಉತ್ತಮ ಕೆಲಸಗಳಿಗೆ ಉಪಯೋಗವಾಗುವಂತಾಗಬೇಕು ಎಂದರು. ಕಾರ್ಪೋರೇಟ್ ಸಂಸ್ಥೆಯವರು ಸರ್ಕಾರಿ ಅಧಿಕಾರಿಗಳಿಗಿಂತ ವೇಗದ ಗತಿಯವರಾಗಿರುತ್ತಾರೆ ಎಂದೇ ನಾವು ಭಾವಿಸಿದ್ದೇವೆ.
ನೀವು ನಿಧಾನಗತಿಯಲ್ಲಿ ಕೆಲಸ ಮಾಡಿದರೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಅಧಿಕಾರಿಗಳಗೂ ವ್ಯತ್ಯಾಸ ಇರುವುದಿಲ್ಲ ಎಂದರು. ಪ್ರೈಸ್‌ವಾಟರ್ ಹೌಸ್‌ಕೂಪರ್ ಇಂಟರ್ ನ್ಯಾಷನಲ್ ಲಿಮಿಟೆಡ್‌ನ ಪ್ರತಿನಿಧಿ ಅನ್ವೇಷ ಮಾತನಾಡಿ, ಯೋಜನೆಯನ್ನು ಸಾಧ್ಯವಾದಷ್ಟು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಲು ಸಂಸ್ಥೆ ಉತ್ಸುಕವಾಗಿದೆ.
ಈಗ ಕೆಲವು ಕಾಮಗಾರಿಗಳ ಸಮೀಕ್ಷೆ ನಡೆಯುತ್ತಿದ್ದು, ನಂತರ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು. ಮಹಾಪೌರ ಡಿ.ಕೆ.ಚವ್ಹಾಣ, ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಜಿಪಂ ಸಿಇಒ ಸ್ನೇಹಲ್, ಎಸ್.ಕೆ.ಸಕ್ರಿ, ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alnavar: ಬೈಕ್ – ಕಾರು ಅಪಘಾತ; ಬೈಕ್ ಸಹಸವಾರ ಸಾವು
ಡಾ. ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ
Dharwad: ಔಡಲಹಣ್ಣು ತಿಂದು ಏಳು ಮಕ್ಕಳು ಅಸ್ವಸ್ಥ: ಜಿಲ್ಲಾಸ್ಪತ್ರೆಗೆ ದಾಖಲು
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!
Udupi: ಮಾದಕ ವಸ್ತು ಮಾರಾಟಕ್ಕೆ ಯತ್ನ… ನಾಲ್ವರು ವಶಕ್ಕೆ
ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ: ಸುನಿಲ್ ಕುಮಾರ್
Hosanagar; ತೋಟದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ
Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.