ಕವಿವಿಯಲ್ಲಿ ಎನ್ನೆಸ್ಸೆಸ್ ಬಲವರ್ಧನೆ ಕಾರ್ಯಾಗಾರ
Team Udayavani, May 27, 2017, 3:00 PM IST
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಆಶ್ರಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಎನ್ನೆಸ್ಸೆಸ್ ಬಲವರ್ಧನೆ ಕುರಿತ ಕಾರ್ಯಕ್ರಮಾಧಿಕಾರಿಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿದ ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಮಾತನಾಡಿ, ಎನ್ನೆಸ್ಸೆಸ್ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಅವರಲ್ಲಿ ಸೇವಾ ಮನೋಭಾವನೆ, ತ್ಯಾಗ, ರಾಷ್ಟ್ರೀಯ ಮನೋಭಾವನೆ, ಸಮನ್ವಯತೆ ಬೆಳೆಸುವುದರಲ್ಲಿ ಕಾರ್ಯಕ್ರಮಾಧಿಕಾರಿಗಳ ಪಾತ್ರ ಗಣನೀಯವಾದದು. ಎನ್ನೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಆಗುವುದರಲ್ಲಿ ಸಂದೇಹ ಇರುವುದಿಲ್ಲ ಎಂದರು.
ಸರಳ ಜೀವನ, ಪ್ರೀತಿ, ಸಹನೆ, ಶ್ರಮದಾನ, ಸಹಕಾರ ಮನೋಭಾವ, ಕಷ್ಟಕರ ಜೀವನ, ಸಮಯ ಪ್ರಜ್ಞೆ, ಸಹೋದರತ್ವ ಮುಂತಾದ ಮೌಲ್ಯಗಳನ್ನು ರಾಷ್ಟ್ರೀಯ ಸೇವಾ ಯೋಜನೆಯಿಂದ ಯುವಕರು ಕಲಿತುಕೊಳ್ಳಬಹುದು. ಯುವ ಜನತೆಯಲ್ಲಿರುವ ಸಮಾಜದ ಉತ್ಸಾಹ, ಶಕ್ತಿ ಮತ್ತು ಭರವಸೆಯ ಪ್ರತೀಕವನ್ನು ಹೊರ ಹೊಮ್ಮುವಂತೆ ಮಾಡಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳುವಂತೆ ಮಾಡುವುದರಲ್ಲಿ ಎನ್ನೆಸ್ಸೆಸ್ ಪಾತ್ರ ಪ್ರಮುಖವಾಗಿದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ|ಡಿ.ಎಂ. ನಿಡವಣಿ ಮಾತನಾಡಿ, ಎನ್ನೆಸ್ಸೆಸ್ ಗುರಿ ಮತ್ತು ಉದ್ದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಉನ್ನತ ಹುದ್ದೆಗೆ ಏರುವುದು ಖಚಿತ. ಪ್ರಸ್ತುತ ದಿನಮಾನದಲ್ಲಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐ.ಎ.ಎಸ್., ಐ.ಪಿ.ಎಸ್ ಮತ್ತು ಕೆ.ಎ.ಎಸ್ ಅಧಿಕಾರಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎನ್ನೆಸ್ಸೆಸ್ ಸ್ವಯಂ ಸೇವಕರಾಗಿದ್ದ ನಿದರ್ಶನಗಳಿವೆ ಎಂದರು.
ಮೂರು ವಿಶ್ವವಿದ್ಯಾಲಯದ ಕಾರ್ಯಕ್ರಮಾಧಿ ಧಿಕಾರಿಗಳೊಂದಿಗೆ ಸಂವಾದ ನಡೆಸಿದ ಎನ್ನೆಸ್ಸೆಸ್ ಪ್ರಾದೇಶಿಕ ನಿರ್ದೇಶಕ ಅರುಣ ಪೂಜಾರ ಅವರು, ಮುಂದಿನ ದಿನಗಳಲ್ಲಿ ಎನ್ನೆಸ್ಸೆಸ್ ಅಭಿವೃದ್ಧಿ ಮಾಡಲು ಎಲ್ಲಾ ಸೂಕ್ತ ಮಾರ್ಗಗಳನ್ನು ಅನುಸರಿಸಲಾಗುವುದು. ಅಲ್ಲದೆ ಕಾರ್ಯಕ್ರಮಾಧಿಕಾರಿಗಳ ಸಮಸ್ಯೆಗಳನ್ನು ಆಲಿಸಿ ಸರ್ಕಾರದೊಂದಿಗೆ ಸಮಾಲೋಚಿಸಿ ಪರಿಹರಿಸುವ ಭರವಸೆ ನೀಡಿದರು. ಶಿವಾನಿ ಪಾಠಕ, ವಿಶಾಲ ಮತ್ತು ಅಮಿತ ಪ್ರಾರ್ಥಿಸಿದರು. ಡಾ| ಎಲ್.ಟಿ. ನಾಯಕ ಸ್ವಾಗತಿಸಿದರು. ಪ್ರೊ| ಎಸ್.ಕೆ. ಸಜ್ಜನ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಾ. ವೀಣಾ ಶಾಂತೇಶ್ವರ, ಎಸ್.ಜಿ. ಸಿದ್ಧರಾಮಯ್ಯರಿಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ
Dharwad: ಔಡಲಹಣ್ಣು ತಿಂದು ಏಳು ಮಕ್ಕಳು ಅಸ್ವಸ್ಥ: ಜಿಲ್ಲಾಸ್ಪತ್ರೆಗೆ ದಾಖಲು
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
MUST WATCH
ಹೊಸ ಸೇರ್ಪಡೆ
Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ
ಹತ್ಯೆಗೈಯಲು ಹೇಳಿದ್ದು ಪ್ರೇಯಸಿಯ ಪತಿಯನ್ನು, ಬಾಡಿಗೆ ಹಂತಕರು ಕೊಂದಿದ್ದು Taxi ಚಾಲಕನನ್ನು
Editorial: ಇಂಟರ್‌ನೆಟ್-ನೆಟ್‌ವರ್ಕ್ ಸುಧಾರಣೆಗೆ ಸರಕಾರ ಮುಂದಾಗಲಿ
Sanju Weds Geetha 2: ಜ.17ಕ್ಕೆ ಬರಲಿದೆ ಸಂಜು ವೆಡ್ಸ್ ಗೀತಾ-2
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.