Online; 850 ರೂ.ಗೆ ಹಳೆ ಪ್ಯಾಂಟ್ ನೀಡಿದ್ದ ರಿಲಯನ್ಸ್‌ಗೆ 15 ಸಾವಿರ ರೂ. ದಂಡ!
Team Udayavani, Jun 3, 2024, 10:25 PM IST
ಧಾರವಾಡ: ಆನ್‌ಲೈನ್ ಮೂಲಕ ಗ್ರಾಹಕನಿಗೆ ಹಳೆ ಪ್ಯಾಂಟ್ ನೀಡಿದ್ದ ಮುಂಬಯಿಯ ರಿಲಯನ್ಸ್ ರಿಟೇಲ್ ಕಂಪೆನಿಗೆ ಜಿಲ್ಲಾ ಗ್ರಾಹಕರ ಆಯೋಗವು ಪ್ಯಾಂಟ್ ಮೌಲ್ಯದ ಜತೆಗೆ 10 ಸಾವಿರ ರೂ. ಪರಿಹಾರ ಹಾಗೂ ಪ್ರಕರಣದ ವೆಚ್ಚಕ್ಕಾಗಿ 5 ಸಾವಿರ ರೂ. ನೀಡುವಂತೆ ಆದೇಶಿಸಿದೆ.
ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಕೌಶಿಕ್ ಕರೆಗೌಡರ ಅವರು ಹುಬ್ಬಳ್ಳಿ ನವನಗರದ ಕರ್ನಾಟಕ ರಾಜ್ಯ ಕಾನೂನು ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಸಮವಸ್ತ್ರದ ಸಲುವಾಗಿ ಮುಂಬಯಿಯ ರಿಲಯನ್ಸ್ ರಿಟೇಲ್ ಬಳಿ ಆನ್‌ಲೈನ್ ಮೂಲಕ ಕಪ್ಪು ಬಣ್ಣದ ಪ್ಯಾಂಟನ್ನು 849.50 ರೂ.ಗೆ ಖರೀದಿಸಿದ್ದರು. ಆದರೆ ಕಂಪೆನಿಯು ಹಳೆಯ ಮತ್ತು ಉಪಯೋಗಿಸಿದ ಪ್ಯಾಂಟ್ ಅನ್ನು ಕಳುಹಿಸಿತ್ತು. ಕಂಪೆನಿಯ ನಿಯಮದಂತೆ ಕೌಶಿಕ್ 14 ದಿನಗಳೊಳಗೆ ಪ್ಯಾಂಟನ್ನು ಬದಲಾಯಿಸಿ ಕೊಡಲು ಕೋರಿದ್ದರು. ಆದರೆ ಪ್ಯಾಂಟ್ ಬದಲಾಯಿಸಿ ಕೊಡದೆ ಹಾಗೂ ಅದರ ಮೌಲ್ಯವನ್ನೂ ಹಿಂದಿರುಗಿಸದೆ ಸೇವಾ ನ್ಯೂನತೆ ಎಸಗಿದ್ದಾರೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ನ.15ರಂದು ದೂರು ಸಲ್ಲಿಸಲಾಗಿತ್ತು.
ವಿಚಾರಣೆ ನಡೆಸಿದ ಅಧ್ಯಕ್ಷರಾದ ನ್ಯಾ| ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಒಳಗೊಂಡ ಆಯೋಗವು ಕಂಪೆನಿಗೆ ದಂಡ ವಿಧಿಸಿ ತೀರ್ಪು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.