ಕಡ್ಡಾಯ ವರ್ಗಾವಣೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವಿರೋಧ
Team Udayavani, Jun 25, 2019, 12:46 PM IST
ಹುಬ್ಬಳ್ಳಿ: ಶಿಕ್ಷಕರು ಬಸವರಾಜ ಹೊರಟ್ಟಿ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹುಬ್ಬಳ್ಳಿ: ಸರಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆಗೊಳಿಸಿರುವುದನ್ನು ವಿರೋಧಿಸಿ ಶಿಕ್ಷಕರು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟ ನಿವಾಸಕ್ಕೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಿಯಮಾನುಸಾರ ಈಗಾಗಲೇ ಶಹರ ಭಾಗದಲ್ಲಿ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ನೇರವಾಗಿ ಸಿ ವಲಯಕ್ಕೆ ವರ್ಗಾವಣೆ ಮಾಡುತ್ತಾರೆ. ಸರಕಾರದ ಈ ನೀತಿ ಹಲವು ಲೋಪದೋಷಗಳಿಂದ ಕೂಡಿದೆ. ಶಿಕ್ಷಕರು ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ 10-15 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿಯಮಾನುಸಾರ ಶಹರ ಪ್ರದೇಶಕ್ಕೆ ಬಂದಿದ್ದಾರೆ. ಈಗ ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರೇ ಕಡ್ಡಾಯ ವರ್ಗಾವಣೆಗೆ ಒಳಗಾಗುತ್ತಾರೆ. ಅಲ್ಲದೆ ಕಡ್ಡಾಯ ವರ್ಗಾವಣೆ ಮಾರ್ಗಸೂಚಿಯಲ್ಲಿ ಎಲ್ಲಿಯೂ ಸರಕಾರಿ ಸೇವೆಯಲ್ಲಿರುವ ಪತಿ-ಪತ್ನಿಯನ್ನು ಕಡ್ಡಾಯವಾಗಿ ವರ್ಗಾವಣೆಯಿಂದ ವಿನಾಯಿತಿಗೊಳಿಸಬೇಕೆಂದು ತಿಳಿಸಿಲ್ಲ. ಆದರೆ ಕಡ್ಡಾಯ ವರ್ಗಾವಣೆಗೊಳಪಡಿಸುವ ಶಿಕ್ಷಕರ ಯಾದಿಯಲ್ಲಿ ಸರಕಾರಿ ಸೇವೆಯಲ್ಲಿರುವ ಪತಿ-ಪತ್ನಿಯರನ್ನು ಕೈಬಿಡಲಾಗಿದೆ. ಕಡ್ಡಾಯ ವರ್ಗಾವಣೆ ನ್ಯಾಯಸಮ್ಮತವಾಗಿಲ್ಲ. ಸರಕಾರ ಕೂಡಲೇ ನ್ಯಾಯಸಮ್ಮತ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು. ಶಿಕ್ಷಕರ ಮನವಿಗೆ ಸ್ಪಂದಿಸಿದ ಹೊರಟ್ಟಿ, ಸರಕಾರದ ಗಮನಕ್ಕೆ ತಂದು ಮಾರ್ಪಾಡು ಮಾಡಲು ಹೇಳುವೆ ಎಂದರು. ಎ.ವಿ. ಬೂದಿಹಾಳ, ಎನ್.ಎಂ. ಭಟ್ಟ, ಜೆ.ಎ. ಉಪಾಧ್ಯಾಯ, ಎಲ್.ಎ. ಹಂಪಿಹೊಳಿ, ಜೆ.ಡಿ. ಪೂಜಾರ, ವೈ.ವಿ. ಮಾದನಶೆಟ್ಟಿ, ವಿ.ಡಿ. ತೊರಗಲ್, ಎಸ್.ಎಸ್. ನಂದಿಕೇಶ್ವರ, ಕೆ.ಆರ್. ಚಕ್ರಸಾಲಿ, ಜಿ.ಎಚ್. ಪೂಜಾರ, ನಾಗಲತಾ, ಎಸ್.ಕೆ. ಕಾಡದೇವರ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.