ಬಿಆರ್‌ಟಿಎಸ್ ಯೋಜನೆಗೆ ವಿರೋಧ
Team Udayavani, Dec 23, 2020, 5:26 PM IST
ಹುಬ್ಬಳ್ಳಿ: ಅವೈಜ್ಞಾನಿಕ, ಅಪಾಯಕಾರಿ ಎಚ್ ಡಿಬಿಆರ್‌ಟಿಎಸ್ ಯೋಜನೆ ವಿರೋಧಿಸಿ ಇಲ್ಲಿನ ಹೊಸೂರಿನ ಬಿಆರ್‌ಟಿಎಸ್ ಮುಖ್ಯ ಕಚೇರಿ ಎದುರು ಮಂಗಳವಾರ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿತು.
ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ಬಿಆರ್‌ಟಿಎಸ್ ಹುಬ್ಬಳ್ಳಿ-ಧಾರವಾಡ ಜನತೆಯ ಮಹತ್ವಾಕಾಂಕ್ಷೆ ಯೋಜನೆ. ಆದರೆ ಇದು ಅವೈಜ್ಞಾನಿಕ, ಅಪಾಯಕಾರಿ ವಿನ್ಯಾಸದ ಕಾಮಗಾರಿಯಾಗಿದೆ. ಸುಮಾರು 1,200ಕೋಟಿ ರೂ. ವೆಚ್ಚದ ಈ ಯೋಜನೆ ಸಾರ್ವಜನಿಕರು ಹಾಗೂ ವಾಹನ ಸವಾರರ ಬಳಕೆಗೆ ದುಃಸ್ವಪ್ನವಾಗಿದೆ. ಹು-ಧಾ ನಡುವಿನ ಬಿಆರ್‌ಟಿಎಸ್ ಕಾರಿಡಾರ್ ಬಳಸುವ ಬಸ್ ಪ್ರಯಾಣಿಕರು, ಪಾದಚಾರಿಗಳು ಮತ್ತು ಮಿಶ್ರ ಸಂಚಾರ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಶಾಪವಾಗಿ ಮಾರ್ಪಟ್ಟಿದೆ. ಅವಳಿ ನಗರದ ನಡುವೆ ತ್ವರಿತ ಸಾರಿಗೆ ಸೇವೆ ಒದಗಿಸುವ ಚಿಗರಿಯಾಗಬೇಕಿದ್ದ ಬಿಆರ್‌ಟಿಎಸ್ ಇದೀಗ ನರಭಕ್ಷಕ ಚಿಗರಿಯಾಗಿ ಜನರು, ಸವಾರರನ್ನು ಕಾಡುತ್ತಿದೆ. ಇದರಿಂದ ಈ ಕಾರಿಡಾರ್‌ನಲ್ಲಿ ಸಂಚರಿಸಲು ಜನರು, ವಾಹನ ಸವಾರರು ಜೀವದ ಹಂಗುತೊರೆದು ಹೋಗುವ ಪರಿಸ್ಥಿತಿನಿರ್ಮಾಣವಾಗಿದೆ. ಅವಳಿ ನಗರದ ಜನರನ್ನು ವಿನಾಕಾರಣ ಅಪಾಯಕ್ಕೆ ಸಿಲುಕಿಸಿ, ಪ್ರತಿದಿನಅಪಘಾತಗಳು ಎದುರಿಸುವಂತೆ ಮಾಡಿದೆ. ಸರ ಕಾರ ಸಮ ಸ್ಯೆ-ಗೊಂದಲ ನಿವಾರಿಸಲಿ ಇಲ್ಲವೆ ಯೋಜನೆ ರದ್ದು ಮಾಡಲಿ ಎಂದು ಒತ್ತಾಯಿಸಿದರು.
ವಾಕರಸಾ ಸಂಸ್ಥೆ ಹು-ಧಾ ವಿಭಾಗೀಯ ನಿಯಂತ್ರಕ ವಿವೇಕಾನಂದ ವಿಶ್ವಜ್ಞ, ಹು-ಧಾ ಬಿಆರ್‌ಟಿಎಸ್ ಡಿಜಿಎಂ ಬಸವರಾಜಕೇರಿ ಮುಖಾಂತರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡ ರಾದ ವಿಕಾಸ ಸೊಪ್ಪಿನ, ಶಶಿಕುಮಾರ ಸುಳ್ಳದ, ಅನಂತಕುಮಾರ ಭಾರತೀಯ, ಶಿವಕಿರಣ ಅಗಡಿ, ಪದಾಧಿಕಾರಿ ಗಳಾದ ಡೇನಿಯಲ್ ಐಕೋಸ್, ರವೀಂದ್ರ ಶೆಣೈ, ಮನೋಹರ ಸುಗನಾನಿ, ನವೀನಸಿಂಗ ರಜಪೂತ, ಲಕ್ಷ್ಮಣ ರಾಠೊಡ, ಡಿ.ಕೆ. ಜಾಧವ, ಪ್ರವೀಣ ತೊಂಡಿಹಾಳ, ಸಂತೋಷ ಮಾನೆ, ಶಿವಕುಮಾರ ಬಾಗಲಕೋಟೆ, ಆದಿತ್ಯ ನಾಯ್ಕ ಇನ್ನಿತರರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.