ಸಾವಯವ ಕೃಷಿಯಲ್ಲಿದೆ ನೆಮ್ಮದಿ
Team Udayavani, Jul 26, 2017, 12:31 PM IST
ಧಾರವಾಡ: ಸಾವಯವ ಕೃಷಿಯಿಂದ ರೈತರು ಮಾತ್ರವಲ್ಲ, ಪ್ರಕೃತಿ, ಪ್ರಾಣಿ-ಪಕ್ಷಿಗಳು ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ರೈತರು ಸಾವಯವ ಕೃಷಿಯತ್ತ ಇನ್ನಾದರೂ ಹೆಜ್ಜೆ ಹಾಕಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಸಲಹೆ ನೀಡಿದರು.
ಇಲ್ಲಿನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆ, ಜಿಪಂ ಹಾಗೂ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಅಭಿಯಾನ ಮತ್ತು ಸಾವಯವ, ಸಿರಿಧಾನ್ಯ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇವಲ ಎರಡು ದಶಕದಲ್ಲಿ ಧಾರವಾಡ ಜಿಲ್ಲೆಯ ಕೃಷಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದು ಹೋಗಿವೆ.
ಇದೀಗ ಎಲ್ಲರೂ ಯಂತ್ರಾಧಾರಿತ ಕೃಷಿ ಮಾತ್ರ ಮಾಡುತ್ತಿದ್ದಾರೆ. ಅನವಶ್ಯಕ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆಯಿಂದ ಭೂಮಿ ಮಾತ್ರವಲ್ಲ ಆಹಾರವೇ ಕಲ್ಮಶವಾಗಿ ಆರೋಗ್ಯ ಸಮಸ್ಯೆಗಳು ಎಲ್ಲರನ್ನು ಬಾಧಿಸುತ್ತಿದೆ. ಹೀಗಾಗಿ ಮತ್ತೆ ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿಯೇ ಸಾವಯವ ಕೃಷಿ ಮಾಡುವ ಅಗತ್ಯವಿದೆ.
ಪ್ರತಿಯೊಬ್ಬ ರೈತರು ಕೃಷಿಯೊಂದಿಗೆ ಹೈನುಗಾರಿಕೆ ಮಾಡಲೇಬೇಕು. ಅಂದಾಗ ಮಾತ್ರ ಬದುಕಲು ಸಾಧ್ಯ. ಕೇವಲ ವಾಣಿಜ್ಯ ಬೆಳೆಯ ಬೆನ್ನು ಹತ್ತಿದರೆ ಹಣ ಗಳಿಸಬಹುದು, ಆದರೆ ಆರೋಗ್ಯ-ನೆಮ್ಮದಿ ಸಾಧ್ಯವಿಲ್ಲ ಎಂದರು.
ರೈತರಿಗೆ ಸಲಹೆಗಳು: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರಿಗೆ ಸಚಿವ ವಿನಯ್ ಕೃಷಿ ಸಂಬಂಧಿ ಸಲಹೆಗಳನ್ನು ನೀಡಿದರು. ರೈತರು ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಕಲಿಯಬೇಕು. ಚಟಗಳಿಂದ ದೂರವಾಗಿ, ಗ್ರಾಮೀಣ ಬದುಕಿಗೆ ಹೊಂದುವಂತೆ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಎಂತಹದೆ ಕಷ್ಟ ಬಂದರೂ ಸ್ವಾಭಿಮಾನಿಯಾಗಿ ಬದುಕಬೇಕು ಎಂದು ಹೇಳಿದರು.
ಹಸುಕಟ್ಟಿ ಮಾತಾಡಿ: ರೈತರು ಕಾಲು ಮುರಿದ ಎತ್ತು, ಎಮ್ಮೆ, ದನಗಳನ್ನು ಮಾರಾಟ ಮಾಡುವುದರಲ್ಲಿ ತಪ್ಪೇನು ಇಲ್ಲ. ಕೆಲವರು ಬರೀ ಗೋ ಸಂರಕ್ಷಣೆ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರ್ಯಾರೂ ಮನೆಯಲ್ಲಿ ಆಕಳು ಸಾಕುವುದಿಲ್ಲ. ಈ ಕುರಿತು ನಾನು ಅವರಿಗೆ ಸವಾಲು ಹಾಕುತ್ತೇನೆ. ಗೋರಕ್ಷಣೆ ಬಗ್ಗೆ ಮಾತನಾಡುವವರ ಮನೆಯಲ್ಲಿ ಇಂದಿಗೂ ಒಂದೇ ಒಂದು ಗೋವು ಸಾಕಿಲ್ಲ.
ಅವರು ಮಾತಾಡೋದಾದ್ರೆ ಮೊದಲು ನಾಲ್ಕು ಗೋವು ಸಾಕಲಿ ಎಂದು ವಿನಯ್ ಸವಾಲು ಹಾಕಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ. ರುದ್ರೇಶಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ರೈತರು ಬರೀ ಮಳೆಯನ್ನೆ ನಂಬಿಕೊಂಡು ಕೃಷಿ ಮಾಡುತ್ತಿದ್ದಾರೆ.
ಆದರೆ, ಕಡಿಮೆ ಮಳೆಯಾದರೂ ಉತ್ತಮ ಫಸಲು ಬರುವ ಸಿರಿಧಾನ್ಯ ಕೃಷಿಯತ್ತ ಹೆಚ್ಚಿನ ಗಮನ ಹರಿಸಬೇಕು. ಅದನ್ನು ಉತ್ತೇಜಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಜಿಪಂ ಸದಸ್ಯ ಚೆನ್ನಬಸಪ್ಪ ಮಟ್ಟಿ, ಕಲ್ಲಪ್ಪ ಪುಡಕಲಕಟ್ಟಿ, ಬಸಪ್ಪ ಮಾದರ, ನಿಂಗಪ್ಪ ಘಾಟೀನ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.