ನೂತನ ಅಣ್ಣಿಗೇರಿ ತಾಲೂಕಿಗೆ ಅನಾಥ ಪ್ರಜ್ಞೆ
Team Udayavani, Dec 3, 2019, 2:27 PM IST
ಅಣ್ಣಿಗೇರಿ: ನೂತನ ಅಣ್ಣಿಗೇರಿ ತಾಲೂಕು ಅಸ್ತಿತ್ವಕ್ಕೆ ಬಂದು ಒಂದುವರೆ ವರ್ಷವಾದರೂ ತಾಲೂಕು ಮಟ್ಟದ ಇಲಾಖಾ ಕಚೇರಿಗಳಿಗೆ ಮೂಲಸೌಲಭ್ಯ ಕಲ್ಪಿಸದ ಪರಿಣಾಮ, ಹಲವು ಇಲಾಖಾ ಕಚೇರಿಗಳ ಸ್ಥಾಪನೆಯೇ ಆಗದ ಪರಿಣಾಮ ಜನರು ಪರದಾಡುವಂತಾಗಿದೆ.
ಹಲವು ವರ್ಷಗಳ ಹೋರಾಟದ ಫಲವಾಗಿ 6 ವರ್ಷಗಳ ಹಿಂದೆ ನೂತನ ತಾಲೂಕು ಘೋಷಣೆಯಾಗಿದ್ದು, 2018ರ ಮಾ. 5ರಂದು ಅಸ್ತಿತ್ವಕ್ಕೆ ಬಂದಿದೆ. ತಾಲೂಕಾದರೂ ವಿವಿಧ ಇಲಾಖೆಗಳುಇನ್ನೂ ಕಾರ್ಯ ಆರಂಭಿಸದ ಪರಿಣಾಮ ಜನರು ಹಿಡಿಶಾಪ ಹಾಕುವಂತಾಗಿದೆ. ಇದುವರೆಗೂ ಯಾವುದೇ ವಿಶೇಷ ಅನುದಾನದ ಪ್ಯಾಕೇಜ್ ಘೋಷಣೆಯಾಗದೆ ಸೌಲಭ್ಯಗಳ ಕೊರತೆಯಿಂದ ನರಗುವಂತಾಗಿದೆ.
ಪ್ರಾರಂಭವೇ ಆಗಿಲ್ಲ: ಹತ್ತು ಹಾಸಿಗೆಯ ಆಸ್ಪತ್ರೆ ವೈದ್ಯರ ಕೊರತೆಯಿಂದ ಬಳಲುತ್ತಿದೆ. ತಾಪಂ, ನ್ಯಾಯಾಲಯ, ಲೋಕೋಪಯೋಗಿಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ತಾಲೂಕು ಆರೋಗ್ಯ ಮತ್ತು ಕುಟುಂಬ ಇಲಾಖೆ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಖಜಾನೆ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಸೇರಿ ಒಟ್ಟು 22ಕಚೇರಿಗಳು ಇನ್ನೂ ಪ್ರಾರಂಭವಾಗಿಲ್ಲ. ಸದ್ಯಕ್ಕೆ ಉಪನೋಂದಣಿ ಅಧಿಕಾರಿ ಕಚೇರಿ, ಪುರಸಭೆ, ಎಪಿಎಂಸಿ, ಅಗ್ನಿಶಾಮಕ ದಳ, ಸರಕಾರಿ ಕಟ್ಟಡಗಳು ಇವೆ. ಆದರೂ ಇಲ್ಲಿಯ ಯಾವುದೇ ಇಲಾಖೆಯ ಆದೇಶ ಪಡೆಯಬೇಕಾದರೆ ನವಲಗುಂದ ತಾಲೂಕಿನ ಅಧಿಕಾರಿಗಳ ಅಪ್ಪಣೆ ಪಡೆಯಬೇಕಾಗಿದೆ.
ಹೀಗಾಗಿ ಎಷ್ಟೋ ಇಲಾಖೆಗಳ ಕೆಲಸಕ್ಕೆ 20 ಕಿಮೀ ದೂರದ ನವಲಗುಂದಕ್ಕೆ ಸಾರ್ವಜನಿಕರು ಅಡ್ಡಾಡುವುದು ಇನ್ನೂ ತಪ್ಪಿಲ್ಲ. ನೂತನ ತಾಲೂಕಿನ ಕಚೇರಿಗಳನ್ನು ತೆರೆಯಲು ಎಪಿಎಂಸಿಯಲ್ಲಿ ಹಲವಾರು ಕೊಠಡಿಗಳು ಖಾಲಿ ಇವೆ. ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಸೈದಾಪುರ ಕ್ರಾಸ್ ಬಳಿ ಸರ್ಕಾರಿ ಜಮೀನು ಇದೆ. ಇಲ್ಲಿ ಶಿಕ್ಷಣ ಇಲಾಖೆ, ಉಪ ಖಜಾನೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಬಿಎಸ್ಸೆನ್ನೆಲ್ ಕಚೇರಿ ಹಾಗೂ ಇತರೆ ಕಚೇರಿಗಳನ್ನು ತೆರೆಯಬೇಕಾಗಿದೆ. ಆದಷ್ಟು ಬೇಗ ಎಲ್ಲ ಇಲಾಖೆಗಳ ಕಚೇರಿ ಪ್ರಾರಂಭವಾಗಬೇಕು ಎಂಬುದು ನಾಗರಿಕರ ಒತ್ತಾಸೆಯಾಗಿದೆ. ಆಳುವವರು ಎಚ್ಚೆತ್ತುಕೊಳ್ಳುವುದು ಯಾವಾಗ? ಎಲ್ಲ ಇಲಾಖೆಗಳ ಸೇವೆ ಸಮರ್ಪಕವಾಗಿ ಇಲ್ಲಿಯೇ ದೊರೆ ಯುವಂತಾಗುವುದು ಯಾವಾಗ? ಎಂಬುದು ಯಕ್ಷಪ್ರಶ್ನೆಯಾಗಿದೆ.
ಅಡ್ಡಾಡುವುದೇ ಸಮಸ್ಯೆ : ಪಟ್ಟಣದಿಂದ 2 ಕಿಮೀ ದೂರದಲ್ಲಿರುವ ವೆಂಕಟೇಶ್ವರ ಕೋ ಆಪರೇಟಿವ್ ಟೆಕ್ಸ್‌ಟೈಲ್ಸ್ ಮಿಲ್ಲಿನ ಹಳೆಯ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ ತೆರೆಯಲಾಗಿದೆ. ಕೆಲಸ ಕಾರ್ಯಗಳಿಗೆ ಜನರಿಗೆ ಇಲ್ಲಿಗೆ ಹೋಗಿ ಬರುವುದೇ ಸಮಸ್ಯೆಯಾಗಿದೆ. ಅಲ್ಲದೇ ತಹಶೀಲ್ದಾರ್ ಕಚೇರಿಗೂ ಸರಿಯಾದ ಸೌಕರ್ಯಕಲ್ಪಿಸಿಲ್ಲ. ತಹಶೀಲ್ದಾರ್‌ಗೆ ವಾಹನದ ವ್ಯವಸ್ಥೆಯೂ ಇಲ್ಲ.ಸಾರ್ವಜನಿಕರಿಗೆ ಕಚೇರಿಯಲ್ಲಿ ಕುಳಿತುಕೊಳ್ಳಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪಟ್ಟಣದ ಬಸ್‌ನಿಲ್ದಾಣದಿಂದ ತಹಶೀಲ್ದಾರ್ ಕಚೇರಿ ವರೆಗೆ ಮಿನಿಬಸ್ ಓಡಾಟ ಆರಂಭಿಸಬೇಕೆಂಬುದು ಜನರ ಆಗ್ರಹವಾಗಿದೆ.
ಇಂದಿನ ಎಲ್ಲಾ ತರಹದ ಕೆಲಸಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.ಆದರೆ ಅಣ್ಣಿಗೇರಿಯಲ್ಲಿ ಆಧಾರ್ ನೋಂದಣಿ ಕೇಂದ್ರ ಬಂದ್ ಆಗಿರುವುದರಿಂದ ಪಟ್ಟಣ ಹಾಗೂಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತುಂಬಾತೊಂದರೆಯಾಗುತ್ತಿದೆ. ಆದಷ್ಟು ಬೇಗ ಆಧಾರ್ ನೋಂದಣಿ ಕೇಂದ್ರವನ್ನು ಪುನಾರಂಭಿಸಬೇಕು .–ಬಸವರಾಜ ಮರಡ್ಡಿ, ಸಮಾಜ ಸೇವಕ
-ಪ್ರಭು ದುಂದೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.