![Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್ ಮೇಲೇ ಕಣ್ಣು!](https://www.udayavani.com/wp-content/uploads/2024/12/puttige-shree-1-415x253.jpg)
ಆಮ್ಲಜನಕ ಪೂರೈಕೆ ಘಟಕ ಆರಂಭ : ಪೊಲೀಸರಿಗೆ ನಿರ್ವಹಣೆ ಕುರಿತು ತರಬೇತಿ
Team Udayavani, May 26, 2021, 4:31 PM IST
![ಆಮ್ಲಜನಕ ಪೂರೈಕೆ ಘಟಕ ಆರಂಭ : ಪೊಲೀಸರಿಗೆ ನಿರ್ವಹಣೆ ಕುರಿತು ತರಬೇತಿ](https://www.udayavani.com/wp-content/uploads/2021/05/Untitled-1-613-620x372.jpg)
ಹುಬ್ಬಳ್ಳಿ: ಸೋನ್ ಸೂದ್- ಸ್ವಾಗ್ ಇಆರ್‌ಟಿ ಫೌಂಡೇಶನ್ ವತಿಯಿಂದ ನಗರದಲ್ಲಿ ಆಮ್ಲಜನಕ ಪೂರೈಕೆ ಘಟಕ ಆರಂಭಿಸಲಾಗಿದೆ. ರಾಜ್ಯ ರೈಲ್ವೆ ಪೊಲೀಸರು ಇದನ್ನು ನಿರ್ವಹಣೆ ಮಾಡಲಿದ್ದು, ಪೊಲೀಸರಿಗೆ ನಿರ್ವಹಣೆ ಕುರಿತು ತರಬೇತಿ ನೀಡಲಾಯಿತು.
ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಿರುವ ರಾಜ್ಯ ರೈಲ್ವೆ ಪೊಲೀಸ್ ಠಾಣೆ ಪಕ್ಕದಲ್ಲಿ ಘಟಕ ಆರಂಭಿಸಲಾಗಿದೆ. ಆಮ್ಲಜನಕ ಕೊರತೆಯಿಂದ ಯಾರೂ ಸಾವನ್ನಪ್ಪಬಾರದು ಎನ್ನುವ ಕಾರಣಕ್ಕೆ ಈ ಘಟಕ ಆರಂಭಿಸಿದ್ದು, ಅಗತ್ಯ ಇದ್ದವರಿಗೆ ಇಲ್ಲಿ ಆಮ್ಲಜನಕ ಸಿಲೆಂಡರ್ ಸಿಗಲಿದೆ. ವಾಣಿಜ್ಯ ನಗರದಿಂದ ಸುತ್ತಲಿನ 120 ಕಿಮೀ ವ್ಯಾಪ್ತಿವರೆಗೆ ಈ ಸೇವೆ ದೊರೆಯಲಿದೆ. ಸದ್ಯಕ್ಕೆ ವಿವಿಧ ಮಾದರಿಯ 20 ಆಕ್ಸಿಜೆನ್ ಸಿಲೆಂಡರ್ ವ್ಯವಸ್ಥೆ ಮಾಡಲಾಗಿದ್ದು, ಬೇಡಿಕೆ ಆಧರಿಸಿ ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ. ಆಮ್ಲಜನಕ ಸಿಲೆಂಡರ್ ಅಗತ್ಯವುಳ್ಳವರು ರಾಜ್ಯ ರೈಲ್ವೆ ಪೊಲೀಸ್ ಡಿವೈಎಸ್ಪಿ ಎನ್.ಪುಷ್ಪಲತಾ ಮೊ: 9480800462, ಇನ್‌ಸ್ಪೆಕ್ಟರ್ ಡಿ.ಬಿ.ಪಾಟೀಲ ಮೊ: 948080472, ಪಿಎಸ್‌ಐ ಸತ್ಯಪ್ಪ ಮುಕ್ಕಣ್ಣವರ-9480800212 ಗೆ ಕರೆ ಮಾಡಬಹುದು.
ರೈಲ್ವೆ ಪೊಲೀಸರು ನಿರ್ವಹಣೆ: ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಅವರು ಘಟಕ ಆರಂಭಕ್ಕೆ ಕಾಳಜಿ ವಹಿಸಿದ್ದಾರೆ. ಹೀಗಾಗಿ ಎರಡು ಫೌಂಡೇಶನ್‌ಗಳು ಬೇಕಾದ ಸಿಲೆಂಡರ್ ವ್ಯವಸ್ಥೆ ಮಾಡುತ್ತವೆ. ಅಗತ್ಯ ಜನರಿಗೆ ತಲುಪಿಸುವ ಕಾರ್ಯ ರಾಜ್ಯ ರೈಲ್ವೆ ಪೊಲೀಸರು ನಿರ್ವಹಿಸಲಿದ್ದಾರೆ. ಇದಕ್ಕಾಗಿ ಒಂದಿಷ್ಟು ಸಿಬ್ಬಂದಿ, ವಾಹನ, ಒಂದು ಅಂಬ್ಯುಲೆನ್ಸ್, ಏಕಕಾಲಕ್ಕೆ ಬೇಡಿಕೆ ಬಂದರೆ ತಮ್ಮ ಸರಕಾರಿ ವಾಹನ ಬಳಸಲು ಯೋಜನೆ ರೂಪಿಸಿದ್ದಾರೆ. ಇದಕ್ಕೆ ರೈಲ್ವೆ ಇಲಾಖೆ ವೈದ್ಯಕೀಯ ವಿಭಾಗ ವೈದ್ಯಕೀಯ ನೆರವು ನೀಡಲಿದೆ.
ಟಾಪ್ ನ್ಯೂಸ್
![Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್ ಮೇಲೇ ಕಣ್ಣು!](https://www.udayavani.com/wp-content/uploads/2024/12/puttige-shree-1-415x253.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ](https://www.udayavani.com/wp-content/uploads/2024/12/eshwarappa-150x78.jpg)
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
![13-](https://www.udayavani.com/wp-content/uploads/2024/12/13-1-3-150x90.jpg)
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
![AV-Bellad](https://www.udayavani.com/wp-content/uploads/2024/12/AV-Bellad-150x90.jpg)
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
![Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ](https://www.udayavani.com/wp-content/uploads/2024/12/hub-150x86.jpg)
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
![ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ](https://www.udayavani.com/wp-content/uploads/2024/12/aas-1-150x96.jpg)
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.