ಪಂ|ಹಾಸಣಗಿಗೆ ಪಂ|ರಾಜಗುರು ರಾಷ್ಟ್ರೀಯ ಪ್ರಶಸ್ತಿ
Team Udayavani, Mar 14, 2021, 2:21 PM IST
ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸ್ವರಸಾಮ್ರಾಟ ಪಂ|ಬಸವರಾಜ ರಾಜಗುರು ರಾಷ್ಟ್ರೀಯಸ್ಮಾರಕ ಟ್ರಸ್ಟ್ ವತಿಯಿಂದ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ನಗರದಲ್ಲಿ ಶನಿವಾರ ಜರುಗಿತು.
ಒಂದು ಲಕ್ಷ ರೂ. ನಗದು ಒಳಗೊಂಡ 2020ನೇ ಸಾಲಿನ ಸ್ವರ ಸಾಮ್ರಾಟ್ ಪಂ|ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಪಂ.ಗಣಪತಿ ಭಟ್ ಹಾಸಣಗಿ ಅವರಿಗೆ ಪ್ರದಾನ ಮಾಡಲಾಯಿತು. ತಲಾ 25 ಸಾವಿರ ರೂ. ಒಳಗೊಂಡ ಯುವ ಪ್ರಶಸ್ತಿಯನ್ನು ಧಾರವಾಡದ ಉಸ್ತಾದ್ ಹಫೀಜ್ ಬಾಲೇಖಾನ್ ಹಾಗೂ ಮೈಸೂರಿನ ವಿದುಷಿ ಲಕ್ಷ್ಮೀ ನಾಗರಾಜ ಅವರಿಗೆ ನೀಡಲಾಯಿತು.ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದಸಚಿವ ಜಗದೀಶ ಶೆಟ್ಟರ, ತಮ್ಮ ವಿಶಿಷ್ಟಶೈಲಿಯಲ್ಲಿ ಸಂಗೀತ ಕ್ಷೇತ್ರಕ್ಕೆ ಮೆರಗು ನೀಡಿದವರು ಪಂ|ಬಸವರಾಜ ರಾಜಗುರು.ತಮ್ಮ ಕಲಾ ತಪಸ್ಸು, ಸಾಧನೆ ಮೂಲಕವೇಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಅವರ ಸಂಗೀತ ಸೇವೆ, ಸಾಧನೆ ಯುವಕಲಾವಿದರಿಗೆ ಮಾದರಿ ಆಗಿದೆ. ಅವರಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕಸಂಗೀತಕ್ಕೆ ಗೌರವ ನೀಡುವ ಕಾರ್ಯ ಸಾಗಿದೆ ಎಂದರು.
ನಮ್ಮ ಸಂಸ್ಕೃತಿ, ಪರಂಪರೆ ಮರೆತರೆ ನಾವು ನಮ್ಮನ್ನೇ ಮರೆತು ಹೋದಂತೆ.ಹೀಗಾಗಿ ನಮ್ಮ ಸಂಗೀತ, ಕಲೆ, ಸಂಸ್ಕೃತಿ,ಪರಂಪರೆ ಉಳಿಸಿ ಬೆಳೆಸಲು ಯುವಜನಾಂಗಕ್ಕೆ ತಿಳಿಸುವ ಕಾರ್ಯ ಸದಾ ಆಗಬೇಕು ಎಂದ ಶೆಟ್ಟರ, ಜಿಲ್ಲೆಯಲ್ಲಿ ಕಲಾ ಗ್ರಾಮ ನಿರ್ಮಾಣಕ್ಕೆ ಬೇಕಾದ ನೆರವುಸರಕಾರ ನೀಡಲಿದೆ. ಒಂದು ಎಕರೆಯಲ್ಲಿ ನಿರ್ಮಾಣ ಆಗಲಿರುವ ಈ ಕಲಾಗ್ರಾಮದಲ್ಲಿ ಪಂ|ಬಸವರಾಜ ರಾಜಗುರುಅವರ ಸ್ಮಾರಕ ಭವನ ನಿರ್ಮಾಣಕ್ಕೂ ಆದ್ಯತೆ ಕೊಡಲಾಗುವುದು ಎಂದರು.
ಪ್ರಶಸ್ತಿ ಸೀÌಕರಿಸಿದ ಪಂ|ಗಣಪತಿ ಭಟ್ ಮಾತನಾಡಿ, ಗುರುಗಳ ಹೆಸರಿನಲ್ಲಿರುವಪ್ರಶಸ್ತಿ ಶಿಷ್ಯನಿಗೆ ದೊರಕಿದ್ದು ಸಂಸತದಜತೆಗೆ ಈಗ ಜೀವನ ಸಾರ್ಥಕವೂ ಆಗಿದೆ.ಗುರುಗಳ ಆರ್ಶೀವಾದ, ಅವರ ಪ್ರೀತಿ,ಅನುಗ್ರಹದ ಜತೆಗೆ ನನ್ನ ಶ್ರಮದಿಂದ ಇಲ್ಲಿಯವರೆಗೆ ಬಂದು ನಿಲ್ಲಲು ಸಾಧ್ಯವಾಗಿದೆ. ಇನ್ನು ಬಾಳು ಹಂಚಿಕೊಂಡಪತ್ನಿಯ ಸಹಕಾರದಿಂದ ಸಂಗೀತದಲ್ಲಿ ಸಾಧನೆ ಮಾಡಲು ಕಾರಣವಾಗಿದ್ದು, ಮದುವೆ ವಾರ್ಷಿಕೋತ್ಸವ ದಿನವೇ ಉಡುಗೊರೆಯಾಗಿ ಪ್ರಶಸ್ತಿ ಪಡೆದಿದ್ದು ಖುಷಿಕೊಟ್ಟಿದೆ ಎಂದರು. ಟ್ರಸ್ಟ ಸದಸ್ಯ ನಿಜಗುಣ ರಾಜಗುರು ಮಾತನಾಡಿ, ಕಳೆದ ವರ್ಷದ ಆಗಸ್ಟ್‌ನಲ್ಲಿಯೇ ಈ ಪ್ರಶಸ್ತಿ ನೀಡಬೇಕಿತ್ತು.ಆದರೆ ಆಗಿರಲಿಲ್ಲ. ಈ ವರ್ಷದಜನ್ಮಶತಮಾನೋತ್ಸವ ಕಾರ್ಯಕ್ರಮಗಳನ್ನುನೆರೆ ರಾಜ್ಯಗಳಲ್ಲೂ ಹಮ್ಮಿಕೊಳ್ಳಲುಉದ್ದೇಶಿಸಲಾಗಿದೆ. ಅದಕ್ಕಾಗಿ ಸರಕಾರದನೆರವಿನ ನಿರೀಕ್ಷೆ ಇದೆ ಎಂದರು.
ಡಿಸಿ ನಿತೇಶ ಪಾಟೀಲ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಟ್ರಸ್ಟ್ ಅಧ್ಯಕ್ಷಚಂದ್ರಕಾಂತ ಬೆಲ್ಲದ, ಟ್ರಸ್ಟ್ ಸದಸ್ಯರಾದ ಭಾರತಿದೇವಿ ರಾಜಗುರು, ಪಂ|ಪರಮೇಶ್ವರ ಹೆಗಡೆ, ಡಾ|ಉದಯಕುಮಾರ ದೇಸಾಯಿ, ಇದ್ದರು. ಮಂಜುಳಾ ಯಲಿಗಾರ ಸ್ವಾಗತಿಸಿದರು. ಮಾಯಾರಾಮನ್ ನಿರೂಪಿಸಿದರು. ಪ್ರಶಸ್ತಿ ಪುರಸ್ಕೃತರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.