ಪ್ರತಿಭೆ ಅರಳಿಸುವುದು ಪಾಲಕರ ಜವಾಬ್ದಾರಿ
Team Udayavani, Apr 25, 2017, 1:14 PM IST
ಹುಬ್ಬಳ್ಳಿ: ಮಕ್ಕಳನ್ನು ಮೊಬೈಲ್, ಲ್ಯಾಪ್ ಟಾಪ್‌ಗೆ ಸೀಮಿತಗೊಳಿಸದೆ ಅವರಲ್ಲಿನ ಪ್ರತಿಭೆ ಅರಳಲು ವೇದಿಕೆ ಕಲ್ಪಿಸುವುದು ಪಾಲಕರ ಜವಾಬ್ದಾರಿ ಎಂದು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
ಸಂಸ್ಕೃತಿ ಕಾಲೇಜ್ ಆಫ್ ವಿಜ್ಯುಯಲ್ ಆ್ಯಂಡ್ ಪರಫಾರ್ಮಿಂಗ್ ಆರ್ಟ್ಸ್ ವತಿಯಿಂದ ಡಾ| ಡಿ.ಎಸ್. ಕರ್ಕಿ ಕನ್ನಡ ಭವನದಲ್ಲಿ ಸೋಮವಾರ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಆಸಕ್ತಿಯನ್ನು ಪರಿಗಣಿಸಿ ಅವರು ಆಟಗಳಲ್ಲಿ ತೊಡಗುವಂತೆ ಮಾಡಬೇಕು. ಅವರ ಆಸಕ್ತಿಯ ಸಂಗೀತ ಕಲಿಸಬೇಕು. ಹವ್ಯಾಸಗಳು ವ್ಯಕ್ತಿತ್ವ ರೂಪಿಸಲು ನೆರವಾಗುತ್ತವೆ. ಸಂಸ್ಕೃತಿ ಕಾಲೇಜು ಉತ್ತಮ ಶಿಬಿರ ಆಯೋಜಿಸಿದೆ.
ಮಕ್ಕಳನ್ನು ನಿಭಾಯಿಸುವುದು ಸುಲಭವಲ್ಲ. ಮಕ್ಕಳಿಗೆ ತಾಳ್ಮೆಯಿಂದ ನಾಟಕ, ಚಿತ್ರಕಲೆ, ಕ್ಲೇ ಮಾಡೆಲಿಂಗ್ ಕಲಿಸಿದ್ದು ಸಣ್ಣ ಕಾರ್ಯವಲ್ಲ ಎಂದರು. ರಂಗಕರ್ಮಿ ಡಾ| ಶಶಿಧರ ನರೇಂದ್ರ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರಗಳು ಪೂರಕವಾಗುತ್ತವೆ.
ಮಕ್ಕಳ ಅಭಿರುಚಿ ಅರಿತುಕೊಂಡು ಪ್ರತಿಭೆ ಪೋಷಿಸಲು ಮುಂದಾಗಬೇಕು. ಎಂಜಿನೀಯರಿಂಗ್ ಅಥವಾ ಎಂಬಿಬಿಎಸ್ ಪದವಿ ಪಡೆಯಬೇಕೆಂದು ಮಕ್ಕಳ ಮೇಲೆ ಒತ್ತಡ ಹೇರದೆ ಮಕ್ಕಳ ಆಸಕ್ತಿ ತಿಳಿದುಕೊಂಡು ಅವರ ಆಯ್ಕೆಯ ಕ್ಷೇತ್ರದಲ್ಲಿ ಅವರು ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಬೇಕು ಎಂದರು.
ಡಾ| ವೀಣಾ ಡೇನಿಯಲ್ ಮಾತನಾಡಿ, ರಂಗಭೂಮಿ ಕೇವಲ ಸಂವಹನ ಕೌಶಲ ಬೆಳೆಸುವುದಲ್ಲದೇ ಮಕ್ಕಳಿಗೆ ವೇದಿಕೆ ಭಯ ಹೋಗಲಾಡಿಸುತ್ತದೆ. ಸತ್ವರೂಪ ಫೌಂಡೇಶನ್ ಮಕ್ಕಳಿಗಾಗಿ ರಂಗ ಶಿಬಿರ ನಡೆಸಲು ನಿರ್ಧರಿಸಿದ್ದು, ಆಸಕ್ತರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಸೇರಿಸಬಹುದಾಗಿದೆ ಎಂದು ತಿಳಿಸಿದರು.
ವೇದಿಕೆ ಮೇಲೆ ಶಿವಯೋಗಿ ಕೆರೂಡಿ ಇದ್ದರು. ಸಭಾ ಕಾರ್ಯಕ್ರಮದ ನಂತರ ಬಿ.ಆರ್. ಮಾರಪ್ಪ ನಿರ್ದೇಶನದ, ಶಿಬಿರದ ಮಕ್ಕಳು ಅಭಿನಯಿಸಿದ “ಅಲಿಬಾಬಾ ಹಾಗೂ 40 ಕಳ್ಳರು’ ನಾಟಕದ ಪ್ರದರ್ಶನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.